ETV Bharat / state

ಸಿಎಂ, ಸರ್ಕಾರದ ಹಗರಣ ಮುಚ್ಚಿಕೊಳ್ಳಲು ನಾಗಮಂಗಲ ಗಲಭೆ ಸೃಷ್ಟಿ: ಹೆಚ್​ಡಿಕೆ ಆರೋಪ - H D Kumaraswamy - H D KUMARASWAMY

ಭ್ರಷ್ಟಾಚಾರ ಹಗರಣಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸರ್ಕಾರ ನಾಗಮಂಗಲ ಗಲಭೆಯನ್ನು ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : Sep 14, 2024, 7:58 PM IST

Updated : Sep 14, 2024, 8:15 PM IST

ಹೆಚ್.ಡಿ.ಕುಮಾರಸ್ವಾಮಿ (ETV Bharat)

ಬೆಂಗಳೂರು: ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಿತ್ಯವೂ ಕೇಳಿಬರುತ್ತಿರುವ ಭ್ರಷ್ಟಾಚಾರ ಹಗರಣಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಸರ್ಕಾರವೇ ನಾಗಮಂಗಲ ಗಲಭೆಯನ್ನು ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ, ಸರ್ಕಾರದ ಹಗರಣಗಳ ಬಗ್ಗೆ ಚರ್ಚೆ ನಡೆಯುವ ಹೊತ್ತಿನಲ್ಲಿಯೇ ಎಸ್​ಐಟಿ ತನಿಖೆಯ ಆರೋಪ ಪಟ್ಟಿಗಳ ಬಗ್ಗೆ, ವೈಯಕ್ತಿಕ ಚಾಟ್ ಬಗ್ಗೆ ಚರ್ಚೆ ಶುರುವಾಗುತ್ತದೆ. ಇದೆಲ್ಲಾ ಹೇಗೆ ಸಾರ್ವಜನಿಕವಾಗಿ ಬಹಿರಂಗವಾಗಲು ಸಾಧ್ಯ?. ತನಿಖಾ ಸಂಸ್ಥೆಗಳೇ ಸೋರಿಕೆ ಮಾಡುತ್ತಿವೆ. ಜನರ ಗಮನವನ್ನು ಬೇರೆಡೆಗೆ ಹೊರಳಿಸಲು ಸರ್ಕಾರ ಇಂಥ ತಂತ್ರಗಾರಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ನಾಗಮಂಗಲ ಘಟನೆಯಲ್ಲಿ ಅಮಾಯಕರನ್ನು ಬಂಧಿಸಿರುವುದು ಸತ್ಯ ಎಂದು ಸಚಿವ ಚಲುವರಾಯಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ಮೊದಲು ಇದನ್ನು ಗೃಹ ಸಚಿವರು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದರು. ಎಫ್ಐಆರ್​ನಲ್ಲಿ ಕೋಮು ಗಲಭೆ ಅಂತ ಸೇರಿಸಿದ್ದಾರೆ. ನಮ್ಮನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಮೂರು ಬಾರಿ ಗೃಹಮಂತ್ರಿ ಆಗಿದ್ದವರ ಅನುಭವ ಇದು. ವಿಷಯ ಹೇಳಬೇಕಾದರೇ ಮಾಹಿತಿ ಕ್ರೋಢೀಕರಿಸಿ ಹೇಳಬೇಕು. ಪಾಪ ಅವರು ಬಹಳ ದೊಡ್ಡವರು ಇದ್ದಾರೆ ಎಂದು ಲೇವಡಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗ ಅರಿವಾಗಿದೆ. ಅಲ್ಲಿ ಗಲಾಟೆ ಆಗಲಿಕ್ಕೆ ಅವಕಾಶ ಇರಲಿಲ್ಲ. ಇದ್ದಿದ್ದು 150 ಜನ, ನಿಯಂತ್ರಣ ಮಾಡಬಹುದಿತ್ತು. ಇಂತಹ ಪ್ರಕರಣ ನಡೆಯಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದಂತಿದೆ. ಕಳೆದ ಮೂರು ತಿಂಗಳಲ್ಲಿ ಹಲವಾರು ವಿಚಾರಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದನ್ನು ನೋಡಿದ್ದೇನೆ. ಆರೋಪ ಪಟ್ಟಿ ಎಸ್​ಐಟಿ ಬಳಿ ಇರುತ್ತದೆ. ಅದು ಹೇಗೆ ಹೊರಗೆ ಸೋರಿಕೆ ಆಗುತ್ತದೆ?. ಸರ್ಕಾರ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂಥ ಸೋರಿಕೆ ಮಾಡುತ್ತದೆ ಎಂದರು.

ನಾನು ನಾಗಮಂಗಲ ತಾಲೂಕು ಅಧ್ಯಕ್ಷನ ಹೆಸರು ಹೇಳಿಲ್ಲ. ಅವರ ಮಗನ ಹೆಸರು ಹೇಳಿಲ್ಲ. ಅಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರೂ ಇದ್ದರು ಎಂದು ಹೇಳಿದ್ದೇನೆ. ಎಲ್ಲ ಜನಾಂಗಗಳು ಶಾಂತಿ ಕಾಪಾಡಿ ಎಂದು ನಾನು ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಮುನಿರತ್ನ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ: ಬಿಜೆಪಿ ಶಾಸಕ ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಬೆಳಗ್ಗೆಯಿಂದ ನಾನು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು, ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದೇನೆ. ಹೀಗಾಗಿ ನನಗೆ ಏನೂ ಗೊತ್ತಿಲ್ಲ, ಯಾವುದೇ ಮಾಹಿತಿ ಇಲ್ಲ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಕೆ ಗಂಭೀರ ಆರೋಪ: ಯಾರ ಸೈಟ್​​ನಲ್ಲಿ​ ಮನೆ ಕಟ್ಟಿದ್ದೀರಾ ಎಂದು ಸಿಎಂಗೆ ಪ್ರಶ್ನೆ - h d kumaraswamy reaction on cm

Last Updated : Sep 14, 2024, 8:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.