ಚಿಕ್ಕಮಗಳೂರು: ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿಗೆ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್, ಮಾಜಿ ಶಾಸಕ ವಿನಯ ಕುಮಾರ ಸೊರಕೆ, ಶ್ರೀಮತಿ ಮೋಟಮ್ಮ, ಶ್ರೀ ಅಂಶುಮಂತ್ ಜೊತೆಗಿದ್ದರು.
ಇದಕ್ಕೂ ಮುನ್ನ ಜಯಪ್ರಕಾಶ್ ಹೆಗ್ಡೆ ಮನೆದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಡಿಕೆ ಹಿಂಗಾರನ್ನು ಪ್ರಸಾದವಾಗಿ ಮನೆದೇವರು ಜಯಪ್ರಕಾಶ್ ಹೆಗ್ಡೆಗೆ ನೀಡಿದೆ. ಪೂಜೆಯಲ್ಲಿ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಉಮೇದುವಾರಿಕೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕೋಟ: ಮತ್ತೊಂದೆಡೆ, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಬೃಹತ್ ಮೆರವಣಿಗೆ ಮೂಲಕ ರಜತಾದ್ರಿ ಡಿಸಿ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಡಾ ಕೆ. ವಿದ್ಯಾಕುಮಾರಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಸಿ.ಟಿ ರವಿ, ಜೆಡಿಎಸ್ ಎಂಎಲ್ಸಿ ಭೋಜೇಗೌಡ, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಜೊತೆಗಿದ್ದರು.
ಇದನ್ನೂ ಓದಿ: ನಾಮಪತ್ರ ಭರಾಟೆ ಬಿರುಸು: ಪ್ರೊ. ರಾಜೀವ್ ಗೌಡ, ಮನ್ಸೂರ್ ಅಲಿಖಾನ್ ಉಮೇದುವಾರಿಕೆ ಸಲ್ಲಿಕೆ - ELECTION NOMINATION SUBMISSION