ETV Bharat / state

ಬಂಡೀಪುರ ಸಫಾರಿಯಲ್ಲಿ ಹುಲಿಗಳಿಗೆ ಗಾಯ: ಅರಣ್ಯ ಇಲಾಖೆ ನಿಗಾ - Tigers injured - TIGERS INJURED

ಸರಹದ್ದಿನ ಕಾದಾಟದಲ್ಲಿ ಬಂಡೀಪುರದ 2 ಹುಲಿಗಳು ಗಾಯಗೊಂಡಿದ್ದು, ಅರಣ್ಯ ಇಲಾಖೆ ಅವುಗಳ ಆರೋಗ್ಯ ಪರಿಸ್ಥಿತಿಗಳ ಮೇಲೆ ನಿಗಾವಹಿಸುತ್ತಿದೆ.

ಗಾಯಗೊಂಡ ಹುಲಿಗಳು
ಗಾಯಗೊಂಡ ಹುಲಿಗಳು
author img

By ETV Bharat Karnataka Team

Published : Apr 15, 2024, 11:44 AM IST

Updated : Apr 15, 2024, 12:12 PM IST

ಬಂಡೀಪುರ ಸಫಾರಿಯಲ್ಲಿ ಹುಲಿಗಳಿಗೆ ಗಾಯ

ಚಾಮರಾಜನಗರ: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ‌ ಬಂಡೀಪುರದಲ್ಲಿ ಗಾಯಗೊಂಡ ಹುಲಿಗಳು ಕಂಡು ಬಂದಿವೆ.

ಬಂಡೀಪುರ ಸಫಾರಿ ವೇಳೆ ಈ ಎರಡು ಹುಲಿಗಳು ಪ್ರವಾಸಿಗರಿಗೆ ಕಾಣಿಸಿಕೊಂಡಿದ್ದು, ಸರಹದ್ದಿನ ಕಾದಾಟದಲ್ಲಿ ಎರಡೂ ಹುಲಿಗಳು ಗಾಯಗೊಂಡಿವೆ. ಒಂದರ ಹಿಂಗಾಲಿಗೆ ಗಾಯವಾಗಿದ್ದರೇ ಮತ್ತೊಂದರ ಭುಜಕ್ಕೆ ಆಳವಾದ ಗಾಯವಾಗಿದೆ. ಸಫಾರಿಗೆ ತೆರಳಿದ ಪ್ರವಾಸಿಗರು ಈ ಎರಡು ಹುಲಿಗಳ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಗಾಯಗೊಂಡ ಹುಲಿಗಳ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಚಲನವಲನ, ದೇಹದ ಪರಿಸ್ಥಿತಿ ಬಗ್ಗೆ ಗಮನ ಹರಿಸುತ್ತಿದ್ದಾರೆ.

ಈ ಕುರಿತು ಬಂಡೀಪುರ ಸಿಎಫ್ಒ ಪ್ರಭಾಕರನ್ ಪ್ರತಿಕ್ರಿಯಿಸಿದ್ದು, ಹುಲಿಗಳು ಕಾದಾಟದಲ್ಲಿ ಗಾಯಗೊಂಡಿದ್ದು, ಸ್ವಾಭಾವಿಕವಾಗಿ‌ ಅದರ ಗಾಯಗಳು ವಾಸಿಯಾಗಲಿದೆ ಎಂದು ಪಶು ವೈದ್ಯರು ತಿಳಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಿಗಾ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಬಾಳೆ ತೋಟದಲ್ಲಿ ಹುಲಿ ಪ್ರತ್ಯಕ್ಷ, ಯುವಕನ ಮೇಲೆ ದಾಳಿ - Tiger Attack

Last Updated : Apr 15, 2024, 12:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.