ETV Bharat / state

ಪ್ರತ್ಯೇಕ ಪ್ರಕರಣ: ಬ್ಯಾಂಕ್ ಉದ್ಯೋಗಿಗೆ ₹27 ಲಕ್ಷ, ವ್ಯಕ್ತಿಯೊಬ್ಬರಿಗೆ ₹6 ಲಕ್ಷ ವಂಚನೆ - ಹುಬ್ಬಳ್ಳಿ

ಬ್ಯಾಂಕ್ ಉದ್ಯೋಗಿಗೆ 27.78 ಲಕ್ಷ ರೂ ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

two-fraud-cases-registered-in-hubli
ಪ್ರತ್ಯೇಕ ಪ್ರಕರಣ: ಬ್ಯಾಂಕ್ ಉದ್ಯೋಗಿಗೆ ₹27 ಲಕ್ಷ, ವ್ಯಕ್ತಿಯೊಬ್ಬರಿಗೆ ₹6 ವಂಚನೆ
author img

By ETV Bharat Karnataka Team

Published : Jan 23, 2024, 6:44 PM IST

ಹುಬ್ಬಳ್ಳಿ: ಕಂಪನಿಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಬ್ಯಾಂಕ್ ಉದ್ಯೋಗಿಯಿಂದ 27.78 ಲಕ್ಷ ರೂ.ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಗೋಕುಲ ರಸ್ತೆ ನಿವಾಸಿ ಸೋಮಶೇಖ‌ರ್ ಪಂಗುಂದಿ ವಂಚನೆಗೊಳಗಾದವರು.

ಅಪರಿಚಿತ ವ್ಯಕ್ತಿ ನಕಲಿ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಲಿಂಕ್ ಅನ್ನು ಸೋಮಶೇಖರ್ ಕ್ಲಿಕ್ ಮಾಡಿದ್ದಾರೆ. ಬಳಿಕ ಆರೋಪಿ ಅವರ ಮೊಬೈಲ್ ಸಂಖ್ಯೆಯನ್ನು ವಾಟ್ಸ್‌ಆ್ಯಪ್ ಗ್ರೂಪ್​ವೊಂದಕ್ಕೆ ಸೇರಿಸಿ ಹಣ ಹೂಡುವಂತೆ ಪ್ರೇರೇಪಿಸಿದ್ದಾನೆ. ಆರಂಭದಲ್ಲಿ ಸೋಮಶೇಖರ್​ ಅವರಿಂದ ಹಣ ವರ್ಗಾಯಿಸಿಕೊಂಡು ಲಾಭ ನೀಡಿದ್ದಾನೆ. ಬಳಿಕ ಖಾಸಗಿ ಬ್ಯಾಂಕ್‌ನಿಂದ 8.50 ಲಕ್ಷ ರೂ. ಮತ್ತೊಂದು ಬ್ಯಾಂಕ್‌ನಿಂದ 17 ಲಕ್ಷ ರೂ ಹಾಗೂ 2.28 ಲಕ್ಷ ರೂ.ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಗೆ 6.11 ಲಕ್ಷ ರೂ ವಂಚನೆ: ಮತ್ತೊಂದು ಪ್ರಕರಣದಲ್ಲಿ ರೆಸ್ಟೋರೆಂಟ್‌ಗಳಿಗೆ ರೇಟಿಂಗ್ ನೀಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 6.11 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಜನತಾ ಕ್ವಾರ್ಟರ್ಸ್ ನಿವಾಸಿ ಮುನಿಗೆಟ್ಟಿ ಬ್ಯೂಲಾ ವಂಚನೆಗೊಳಗಾದವರು. ವಾಟ್ಸ್ಆ್ಯಪ್ ಮೂಲಕ ಮುನಿಗೆಟ್ಟಿ ಅವರನ್ನು ಸಂಪರ್ಕಿಸಿರುವ ಅಪರಿಚಿತ ವ್ಯಕ್ತಿ, ಆರಂಭದಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾನೆ. ಬಳಿಕ ಟೆಲಿಗ್ರಾಂ ಆ್ಯಪ್‌ನಲ್ಲಿ ಕೆಲವು ಟಾಸ್ಕ್‌ಗಳನ್ನು ನೀಡಿ ಅವರ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಘಟನೆ ಸಂಬಂಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಯುವತಿ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ವಂಚನೆ, ಆರೋಪಿ ಸೆರೆ

ವೈದ್ಯನಿಗೆ ₹ 30 ಲಕ್ಷ ವಂಚನೆ(ಹುಬ್ಬಳ್ಳಿ): ಇತ್ತೀಚೆಗೆ, ಮುಂಬೈ ಡಿಸಿಪಿ ಹೆಸರಿನಲ್ಲಿ ಹುಬ್ಬಳ್ಳಿ ವೈದ್ಯರೊಬ್ಬರಿಗೆ ವಿಡಿಯೋ ಕಾಲ್ ಮೂಲಕ ಭಯ ಹುಟ್ಟಿಸಿ ವಿವಿಧ ಲಿಂಕ್ ಮೂಲಕ 30.16 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದ ಘಟನೆ ನಡೆದಿತ್ತು. ಡಾ.ರಾಜೀವ್ ಮೊಸಕ್ಕೊಳಗಾದವರು. ಖಾಸಗಿ ಕಂಪನಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯು ಕೆಲ ವಸ್ತುಗಳನ್ನು ಬುಕ್ ಮಾಡಿದ್ದರು. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ನಂಬ‌ರ್ ಲಿಂಕ್ ಇದೆ ಎಂದು ಮಾತನಾಡಿದ್ದರು. ಇದಕ್ಕೆ ರಾಜೀವ್ ಅವರು ತಾನು ಯಾವುದೇ ಕೋರಿಯರ್ ಮಾಡಿಲ್ಲ ಎಂದು ಹೇಳಿದಾಗ ನಿಮ್ಮ ಆಧಾ‌ರ್ ಕಾರ್ಡ್ ಮಾಹಿತಿ ಸೋರಿಕೆಯಾಗಿದೆ. ಇದಕ್ಕೆ ನೀವು ಮುಂಬೈ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಬೇಕು ಎಂದಿದ್ದರು.

ನಂತರ ಆ್ಯಪ್​ವೊಂದರ ಮೂಲಕ ವಿಡಿಯೋ ಕರೆ ಮಾಡಿದ ಅಪರಿಚಿತನು ತಾನು ಮುಂಬೈ ಡಿಸಿಪಿ ಎಂದು ಹೇಳಿ ಭಯ ಹುಟ್ಟಿಸಿದ್ದ. ನಂತರ ವಿವಿಧ ಖಾತೆಗಳ ಮಾಹಿತಿ ಪಡೆದು 30,16,742 ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಡಾ. ರಾಜೀವ್ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.