ETV Bharat / state

Watch.. ಚಾಮರಾಜನಗರ: ನಾನಾ - ನೀನಾ ಎಂದು ರಸ್ತೆ ಬದಿ ಜೋಡಿ ಜಿಂಕೆಗಳ ಕುಸ್ತಿ - Two deers fight - TWO DEERS FIGHT

ಮೈಸೂರು - ಊಟಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಂಡೀಪುರ ರಸ್ತೆಯಲ್ಲಿ ಜಿಂಕೆಗಳ ಕಾಳಗ ನಡೆದಿದ್ದು, ದಾರಿ ಹೋಕರೊಬ್ಬರು ಈ ದೃಶ್ಯ ಸೆರೆ ಹಿಡಿದಿದ್ದಾರೆ.

two-deers-fight
ಜೋಡಿ ಜಿಂಕೆ ಕುಸ್ತಿ (ETV Bharat)
author img

By ETV Bharat Karnataka Team

Published : May 17, 2024, 3:52 PM IST

ಕಾಳಗಕ್ಕೆ ಇಳಿದ ಜೋಡಿ ಜಿಂಕೆಗಳು (ETV Bharat)

ಚಾಮರಾಜನಗರ : ವಾಹನಗಳ ಸಂಚಾರವಿದ್ದರೂ ರಸ್ತೆಬದಿಯಲ್ಲಿ ಜೋಡಿ ಜಿಂಕೆಗಳು ನಾನಾ - ನೀನಾ ಎಂಬಂತೆ ಕುಸ್ತಿ ಮಾಡಿದ ಪ್ರಸಂಗ ಮೈಸೂರು - ಊಟಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಂಡೀಪುರದ ರಸ್ತೆಯಲ್ಲಿ ನಡೆದಿದೆ.

ಹತ್ತಾರು ಜಿಂಕೆಗಳು ಮೇಯುತ್ತಿದ್ದರೆ, ಎರಡು ಜಿಂಕೆಗಳು ಮಾತ್ರ ನಾನಾ-ನೀನಾ ಎಂದು ಕಾಳಗಕ್ಕೆ ಇಳಿದಿದ್ದವು. ಇದನ್ನು, ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಳಿಕ, ವಾಹನಗಳ‌ ಹಾರ್ನ್ ಸದ್ದಿನಿಂದ ಜಿಂಕೆ ಹಿಂಡು ಚದುರಿದಾಗ ಕಾಳಗಕ್ಕೆ ಇಳಿದಿದ್ದ ಜಿಂಕೆಗಳು ಕಾಡಿಗೆ ಕಾಲ್ಕಿತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವಾಗ ಪ್ರವಾಸಿಗರು, ಪ್ರಯಾಣಿಕರು ನೂರಾರು ಜಿಂಕೆಗಳನ್ನು ನಿತ್ಯ ಕಣ್ತುಂಬಿಕೊಳ್ಳುತ್ತಾರೆ.‌ ಆದರೆ, ಜಿಂಕೆ ಕಾಳಗ ಕಾಣುವುದು ಅಪರೂಪ.

ನಾಯಿಗಳ ದಾಳಿಗೆ ಹೆದರಿ ಸೇತುವೆ ಕೆಳಗೆ ಅವಿತ ಕತ್ತೆಕಿರುಬ (ETV Bharat)

ನಾಯಿಗಳ ದಾಳಿಗೆ ಹೆದರಿ ಸೇತುವೆ ಕೆಳಗೆ ಅವಿತ ಕತ್ತೆ ಕಿರುಬ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪವಾಗಿ ಕಾಣಸಿಗುವ ಕತ್ತೆಕಿರುಬ ನಾಯಿಗಳ ದಾಳಿಯಿಂದ ಬಚಾವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಿಕಟ್ಟೆ ಹಾಡಿಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ‌ ಚೆನ್ನಿಕಟ್ಟೆ ಹಾಡಿಯಲ್ಲಿ ಹೈನಾ ಓಡಾಟ ಕಂಡು ನಾಯಿಗಳ ಹಿಂಡು ದಾಳಿ ಮಾಡಲು ಮುಂದಾಗಿವೆ. ಬಳಿಕ, ದಾಳಿಯಿಂದ ಬಚಾವಾಗಿ ಸೇತುವೆ ಕೆಳಗೆ ಹೈನಾ ಅಡಗಿ ಕುಳಿತಿತ್ತು.

ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜನರ ಗುಂಪು ಚದುರಿಸಿದ ಬಳಿಕ ಬದುಕಿದೆಯಾ ಬಡಜೀವವೇ ಎಂದು ಹೈನಾ ಮತ್ತೆ ಕಾಡಿನ ಹಾದಿ ಹಿಡಿದಿದೆ. ಕತ್ತೆ ಕಿರುಬ ಆರೋಗ್ಯವಾಗಿದ್ದು, ನಾಯಿಗಳ ದಾಳಿಯಿಂದ ಬಚಾವಾಗಲು ಸೇತುವೆ ಕೆಳಗೆ ಅಡಗಿತ್ತು. ಕಾಡಿನತ್ತ ತೆರಳಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಮೈಸೂರು ಮೃಗಾಲಯದಿಂದ ಕಾಳಿ ಅರಣ್ಯ ಪ್ರದೇಶಕ್ಕೆ 40 ಚುಕ್ಕಿ ಜಿಂಕೆಗಳ ಸ್ಥಳಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.