ETV Bharat / state

ದಾವಣಗೆರೆ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕಿಯರು ಸಾವು - Children Drowned - CHILDREN DROWNED

ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ದಾವಣಗೆರೆಯ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.

KRISHI HONDA
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Oct 1, 2024, 4:11 PM IST

ದಾವಣಗೆರೆ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗಂಗೋತ್ರಿ (10) ಹಾಗೂ ತನುಶ್ರೀ (11) ಮೃತರು. ಇವರು ಕೃಷಿ ಹೊಂಡದ ಬಳಿ ಆಟ ಆಡುತ್ತಿದ್ದರು. ಈ ವೇಳೆ ಓರ್ವ ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆ. ತಕ್ಷಣ ಮತ್ತೋರ್ವ ಬಾಲಕಿ ಕಾಪಾಡಲು ಹೋಗಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಾಲೆ ಬಿಟ್ಟ ಬಳಿಕ ನಾಲ್ವರು ವಿದ್ಯಾರ್ಥಿಗಳು ಎಂದಿನಂತೆ ಮನೆಗೆ ತೆರಳುತ್ತಿದ್ದರು. ರಸ್ತೆ ಮಾರ್ಗದಲ್ಲಿ ಕೃಷಿ ಹೊಂಡ ನೋಡಿದ್ದಾರೆ. ಈ ಹೊಂಡದ ಮೇಲೆ ಆಟವಾಡುತ್ತಾ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕಿಯರ ಜೊತೆ ಖುಷಿ ಎಂಬ ಬಾಲಕಿಯೂ ಹೊಂಡದಲ್ಲಿ ಬಿದ್ದಿದ್ದು, ಆಕೆಯನ್ನು ಜಮೀನಿನ ಮಾಲೀಕನ ಮಗ ಕಾಪಾಡಿದ್ದಾನೆ. ಇವರೊಂದಿಗಿದ್ದ ಶೈಲಜಾ ಎಂಬ ಬಾಲಕಿ ಗಾಬರಿಯಿಂದ ಮನೆಗೆ ತೆರಳಿದ್ದಾಳೆ. ಮೃತಪಟ್ಟ ಬಾಲಕಿಯರ ಪೋಷಕರು ಕೂಲಿ ಕೆಲಸಕ್ಕೆ ಮಲೆನಾಡಿಗೆ ಹೋಗಿದ್ದಾರೆ. ಅಜ್ಜಿಯ ಜೊತೆಗಿದ್ದು ಶಾಲೆಗೆ ಹೋಗುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

ಬಿಳಿಚೋಡು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

"ಇಬ್ಬರು ಬಾಲಕಿಯರು ಆಟವಾಡುತ್ತಾ ತೆರಳುವ ವೇಳೆ ಓರ್ವ ಬಾಲಕಿ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಬಿದ್ದ ಬಾಲಕಿಯನ್ನು ಕಾಪಾಡಲು ಹೋದ ಮತ್ತೋರ್ವ ಬಾಲಕಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ" ಎಂದು ಬಿಳಿಚೋಡು ಠಾಣೆಯ ಸಿಪಿಐ ಸೋಮಶೇಖರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಕೈ ತೊಳೆಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದ ಮಗಳು: ರಕ್ಷಿಸಲು ಹೋದ ಹೆತ್ತವರೂ ನೀರುಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.