ETV Bharat / state

ಬಳ್ಳಾರಿ: ನಕಲಿ‌ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಇಬ್ಬರ ಬಂಧನ - Printing fake notes - PRINTING FAKE NOTES

ಬಳ್ಳಾರಿಯ ಲಾಡ್ಜವೊಂದರಲ್ಲಿ ನಕಲಿ‌ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗಾಂಧಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಖೋಟಾ ನೋಟು ಪ್ರಿಂಟ್
ಖೋಟಾ ನೋಟು ಪ್ರಿಂಟ್
author img

By ETV Bharat Karnataka Team

Published : Apr 14, 2024, 11:55 AM IST

ಬಳ್ಳಾರಿ: ಹಣದ ಅಮಲು ನೆತ್ತಿಗೆರಿದರೆ ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ಬಳ್ಳಾರಿಯ ಪ್ರಕರಣವೊಂದು ಸಾಕ್ಷಿಯಾಗಿದೆ. ಹಣದ ಮೋಹಕ್ಕೆ ಬಿದ್ದು ಖೋಟಾ (ನಕಲಿ) ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರನ್ನು ಗಾಂಧಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖೋಟಾ ನೋಟುಗಳನ್ನು ತಯಾರು ಮಾಡಲು ಬಳಸುತ್ತಿದ್ದ ಕಲರ್ ಝರಾಕ್ಸ್ ಪ್ರಿಂಟರ್​ ಹಾಗೂ 100 ಮುಖಬೆಲೆಯ 80 ಖೋಟಾ ನೋಟ್‌ಗಳನ್ನು ವಶಕ್ಕೆ‌ ಪಡೆಯಲಾಗಿದೆ.

ನಕಲಿ‌ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಇಬ್ಬರ ಬಂಧನ

ಬಂಧಿತರನ್ನು ಬಳ್ಳಾರಿ ನಗರದ ಬಿಸಿಲಹಳ್ಳಿಯ ಹರೀಶ್ ಮತ್ತು ಅಶೋಕ್ ಎಂದು ಗುರುತಿಸಲಾಗಿದೆ. ಎ-1 ಆರೋಪಿ ಅಶೋಕ್ ಕುಮಾರ್ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಬ್ಯಾಂಕಿನಲ್ಲಿ ನೋಟ್ ಚಲಾವಣೆ ವಹಿವಾಟು ಅರಿತಿದ್ದ ಅಶೋಕ ಕುಮಾರ್, ಹರೀಶ್ ಜೊತೆಗೆ ಸೇರಿ ನೋಟ್‌ ಪ್ರಿಂಟ್ ಮಾಡಲು ಮುಂದಾಗಿದ್ದನು.

ಇಬ್ಬರು ಸೇರಿ ಬಳ್ಳಾರಿಯ ಕೋಲಾಚಲಂ ಕಾಂಪೌಂಡ್​​ನಲ್ಲಿರುವ ಮೋಹನ್ ಲಾಡ್ಜ್​ನಲ್ಲಿ ಖೋಟಾ ನೋಟು ಪ್ರಿಂಟ್​ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ಬೆನ್ನೆಲ್ಲೆ ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸ್ಐ ಸೌಮ್ಯಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ವೇಳೆ ಖೋಟಾ ನೋಟುಗಳನ್ನು ಎಲ್ಲಿಯೂ ಚಲಾವಣೆ ಮಾಡಿಲ್ಲ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸಿಎಸ್​ಆರ್ ಫಂಡ್ ಸೋಗಿನಲ್ಲಿ ವಂಚನೆ, ಐವರು ಸೆರೆ: ₹30 ಕೋಟಿ ಖೋಟಾ ನೋಟು ವಶಕ್ಕೆ - Fraudsters Arrested

ETV Bharat Logo

Copyright © 2025 Ushodaya Enterprises Pvt. Ltd., All Rights Reserved.