ETV Bharat / state

ಒಟ್ಟಿಗೆ ಅಶ್ಲೀಲ ವಿಡಿಯೋ ವೀಕ್ಷಣೆ, ಅಪ್ರಾಪ್ತ ಸಹೋದರನಿಂದ ಆತನ ಸಹೋದರಿ ಗರ್ಭಿಣಿ: ಬಾಲಕ ಬೆಂಗಳೂರು ಪೊಲೀಸರ ವಶಕ್ಕೆ - Sister pregnant by brother - SISTER PREGNANT BY BROTHER

ಬಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಅಣ್ಣನಿಂದ ಆತನ ಸಹೋದರಿ ಮೂರು ತಿಂಗಳ ಗರ್ಭಿಣಿಯಾಗಿರುವ ಘಟನೆಯೊಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ಅವಳಿಗಳು ಎಂಬುದಾಗಿಯೂ ತಿಳಿದುಬಂದಿದೆ.

pornographic-video
ಅಶ್ಲೀಲ ವಿಡಿಯೋ (ETV Bharat)
author img

By ETV Bharat Karnataka Team

Published : May 21, 2024, 10:20 PM IST

Updated : May 21, 2024, 10:34 PM IST

ಬೆಂಗಳೂರು : ಅಶ್ಲೀಲ ವಿಡಿಯೋ ನೋಡುತ್ತಿದ್ದ ಸಹೋದರನಿಂದ ಸಹೋದರಿ ಗರ್ಭಿಣಿಯಾದ ಆಘಾತಕಾರಿ ಘಟನೆ ಮುಂಬೈನಲ್ಲಿ ವರದಿಯಾದ ಬೆನ್ನಲ್ಲೆ, ಬೆಂಗಳೂರಿನಲ್ಲಿ ಸಹ ಅಂಥಹುದ್ದೇ ಮತ್ತೊಂದು ಪ್ರಕರಣ ವರದಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಬಗ್ಗೆ ಬೆಂಗಳೂರು ಪೊಲೀಸರೇ ಮಾಹಿತಿ ನೀಡಿದ್ದಾರೆ.

ಅಪ್ರಾಪ್ತ ಅಣ್ಣನಿಂದ ಆತನ ಅವಳಿ ಸಹೋದರಿ ಮೂರು ತಿಂಗಳ ಗರ್ಭಿಣಿಯಾಗಿರುವ ಘಟನೆ ಬಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹದಿನೈದು ದಿನಗಳ ಹಿಂದೆ ಘಟನೆ ನಡೆದಿದ್ದು, ಬಗಲಗುಂಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ವಿಶೇಷ ಎಂದರೆ ಇವರಿಬ್ಬರು ಅವಳಿ- ಜವಳಿ ಸಹೋದರ - ಸಹೋದರಿಯಾಗಿದ್ದಾರೆ.

ಅಷ್ಟಕ್ಕೂ ಏನಿದು ಘಟನೆ?: 14 ವರ್ಷದ ಅವಳಿ ಸಹೋದರ ಹಾಗೂ ಸಹೋದರಿ ಪೋಷಕರೊಂದಿಗೆ ಬಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಮನೆಯಲ್ಲಿ ಪೋಷಕರು ಇರದಿದ್ದಾಗ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಇಬ್ಬರೂ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಇದರಿಂದಾಗಿ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.

ಬಾಲಕಿಯಲ್ಲಿ ದೈಹಿಕ ಬದಲಾವಣೆ ಕಂಡುಬಂದಾಗ ಪೋಷಕರು ಆಕೆಯನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ತಕ್ಷಣ ವೈದ್ಯರು, ಬಾಗಲಗುಂಟೆ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕನನ್ನು ವಶಕ್ಕೆ ಪಡೆದು ಬಾಲಾಪರಾಧಿ ಕೇಂದ್ರಕ್ಕೆ ರವಾನಿಸಿದ್ದಾರೆ. ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಅತ್ಯಾಚಾರ, ಅಪ್ರಾಪ್ತೆ ಗರ್ಭಿಣಿ ಪ್ರಕರಣ: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಗುಂಡೇಟು - Pocso Case

Last Updated : May 21, 2024, 10:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.