ETV Bharat / state

ರಾಮೋಜಿ ರಾವ್​ ಅವರಿಗೆ ಈಟಿವಿ ಕನ್ನಡ ಬಳಗದಿಂದ ನುಡಿನಮನ: ಮಹತ್ವಾಕಾಂಕ್ಷೆಯ ಕನಸುಗಾರ, ಅಸಾಧಾರಣ ಸಾಧಕನ ಸ್ಮರಣೆ - Ramoji Rao - RAMOJI RAO

ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ಈನಾಡು ಸಂಸ್ಥಾಪಕ ರಾಮೋಜಿ ರಾವ್ ಅವರಿಗೆ ಈ ಹಿಂದೆ ಈಟಿವಿ ಕನ್ನಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದ ನುಡಿನಮನ ಸಲ್ಲಿಸಲಾಯಿತು.

TRIBUTE  EENADU FOUNDER  ETV TEAM  BENGALURU
ರಾಮೋಜಿ ರಾವ್​ರಿಗೆ ಈಟಿವಿ ಬಳಗದಿಂದ ನುಡಿನಮನ (ETV Bharat)
author img

By ETV Bharat Karnataka Team

Published : Jun 16, 2024, 4:17 PM IST

Updated : Jun 17, 2024, 10:46 AM IST

ರಾಮೋಜಿ ರಾವ್​ ಅವರಿಗೆ ಈಟಿವಿ ಕನ್ನಡ ಬಳಗದಿಂದ ನುಡಿನಮನ (ETV Bharat)

ಬೆಂಗಳೂರು: ಮಾಧ್ಯಮ ದೊರೆ, ಈನಾಡು ಮುಖ್ಯಸ್ಥ, ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ಅವರ ನಿಧನಕ್ಕೆ ಈ ಹಿಂದೆ ಈಟಿವಿ ಕನ್ನಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಕಂಬನಿ ಮಿಡಿದಿದ್ದು, ನುಡಿನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಹಿರಿಯ ಪತ್ರಕರ್ತರು ರಾಮೋಜಿ ರಾವ್ ಅವರ ಬದ್ಧತೆ, ವೃತ್ತಿಪರತೆಯೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಂಡ ಬಗೆಯನ್ನು ಸ್ಮರಿಸಿದರು.

ಬೆಂಗಳೂರು ಪ್ರೆಸ್​ ಕ್ಲಬ್​ನಲ್ಲಿ ಇಂದು ಈನಾಡು ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ದಿ. ರಾಮೋಜಿ ರಾವ್ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಸಲಾಯಿತು. ಈಟಿವಿ ಕನ್ನಡದಲ್ಲಿ ಕೆಲಸ ಮಾಡಿದ್ದ ಹಿರಿಯ ಪತ್ರಕರ್ತರು ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ನುಡಿನಮನದ ಮೂಲಕ ರಾಮೋಜಿ ರಾವ್ ಅವರೊಂದಿಗೆ ಕಳೆದ ಕ್ಷಣಗಳು, ಅವರ ಸಾಧನೆಗಳು, ವೃತ್ತಿಪರತೆಗೆ ಸಿಗುತ್ತಿದ್ದ ಪ್ರೋತ್ಸಾಹ, ಸಂಪಾದಕೀಯದಲ್ಲಿ ಹಸ್ತಕ್ಷೇಪ ಮಾಡದಿರುವುದು ಸೇರಿದಂತೆ ಮಾಧ್ಯಮವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದ ಹಾದಿಯ ಬಗ್ಗೆ ವಿವರಿಸಿದರು.

ಓದಿ: ರಾಮೋಜಿ ರಾವ್​​: ಅಸಾಮಾನ್ಯ ಸಾಧಕನ ಅಪರೂಪದ ಫೊಟೋಗಳು - Ramoji Rao with Celebrities

ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ ಮಾತನಾಡಿ, ರಾಮೋಜಿ ರಾವ್ ಅವರು ನಿಜವಾಗಿಯೂ ನಮಗೆಲ್ಲಾ ಅನ್ನದಾತರೇ ಆಗಿದ್ದರು. ಖಾಸಗಿ ಮಾಧ್ಯಮದಲ್ಲಿ ರೈತರಿಗಾಗಿ ಅನ್ನದಾತದಂತಹ ಕಾರ್ಯಕ್ರಮ ಮಾಡಿದ್ದು ಇವರೇ ಮೊದಲು, ಇವರೇ ಕೊನೆ. ಉಪ್ಪಿನ ಕಾಯಿಯಿಂದ ಮಾಧ್ಯಮದವರೆಗೂ ಹಲವು ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದರು. ಪತ್ರಕರ್ತರೂ ಆಗಿ ಪತ್ರಿಕಾ ಹಿನ್ನೆಲೆ ಇದ್ದ ಕಾರಣ ಮಾಧ್ಯಮ ನಡೆಸಲು ಪರಿಪಕ್ವತೆ ಇತ್ತು. ಹಾಗಾಗಿ ಅವರ ಚಾನಲ್ ಯಾವ ರೀತಿ ಇರಬೇಕು ಎನ್ನುವ ಕಲ್ಪನೆ ಅವರಿಗೆ ಇತ್ತು ಎಂದು ಬಣ್ಣಿಸಿದರು.

ನಾನು ಆಂಗ್ಲ ಮಾಧ್ಯಮದ ಪತ್ರಕರ್ತನಾಗಿದ್ದರೂ ನನಗೆ ಈಟಿವಿ ಕನ್ನಡದ ಆರಂಭದ ವೇಳೆ ನನಗೆ ಆಹ್ವಾನ ಬಂತು. ಬೆಂಗಳೂರು ಡೆಸ್ಕ್ ಅಗತ್ಯತೆ ಪರಿಗಣಿಸಿ ಡೆಸ್ಕ್ ರಚಿಸಿದರು. ನಮಗೆ ಆರಂಭದಲ್ಲೇ ಡಾ. ರಾಜ್​ಕುಮಾರ್​ ಅಪಹರಣ ಪ್ರಕರಣ ಎದುರಾಯ್ತು. ಇಂತಹ ಸಂದರ್ಭದಲ್ಲಿ ಚಾನಲ್ ಆರಂಭ ಬೇಡ ಎಂದು ರಾಜ್ ಬಿಡುಗಡೆವರೆಗೂ ನಾವು ಡಮ್ಮಿ ಬುಲೆಟಿನ್ ರನ್ ಮಾಡಿದೆವು. ರಾಜ್ ಬಿಡುಗಡೆ ನಂತರ ನಾವು ಈಟಿವಿ ಕನ್ನಡ ಚಾನಲ್​ ಆರಂಭಿಸಿದ್ದೆವು ಎಂದರು.

ರಾಮೋಜಿರಾವ್ ನಿತ್ಯ ಮಾಧ್ಯಮ ನಿರ್ವಹಣೆಯ ಮಾನಿಟರಿಂಗ್ ಮಾಡುತ್ತಿದ್ದರು. 30 ನಿಮಿಷದ ಬುಲೆಟಿನ್​ಗೆ 40 ಸುದ್ದಿ ಬಳಸಬೇಕಿತ್ತು. ಅವರ ತಂಡದಲ್ಲಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಇದೆ. ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಎಲ್ಲ ಪರಿಶೀಲನೆ ನಡೆಸುತ್ತಿದ್ದರು. ಅಂದು ಸುದ್ದಿ ರಿಪೀಟ್ ಆಗುವಂತಿರಲಿಲ್ಲ. ಹೊಸತನ ಇರಬೇಕಿತ್ತು. ಇಂದಿನ ಟಿವಿ ಮಾಧ್ಯಮಗಳಲ್ಲಿ ಅದು ಮಿಸ್ ಎನಿಸುತ್ತಿದೆ ಎಂದು ಸ್ಮರಿಸಿದರು.

ಓದಿ: ಸಿದ್ಧವಾಗುತ್ತಿದೆ 7.5 ಅಡಿ ಎತ್ತರದ ರಾಮೋಜಿ ರಾವ್ ಪ್ರತಿಮೆ - Ramoji Rao Statue

ಹಿರಿಯ ಪತ್ರಕರ್ತ ನರೇಂದ್ರ ಪುಪ್ಪಳ ಮಾತನಾಡಿ, ದಶಕದ ಕಾಲ ರಾಮೋಜಿ ರಾವ್ ಅವರ ಜೊತೆ ಹತ್ತಿರದಲ್ಲಿ ಕೆಲಸ ಮಾಡಿದ ಖುಷಿ ಇದೆ. ಉದ್ಯಮದ ಒತ್ತಡದಲ್ಲಿಯೂ ಅವರು ಸುದ್ದಿ, ಸಂಪಾದಕೀಯ, ಮಾಧ್ಯಮ ಸಂಸ್ಥೆಯನ್ನು ನಿರ್ಲಕ್ಷ್ಯ ಮಾಡಲಿಲ್ಲ. ಜೀವನ ಎನ್ನುವುದು ಪ್ರಯಾಣ. ರಾಮೋಜಿ ಸರ್ ಜೀವನದಲ್ಲಿ ನಾವೆಲ್ಲಾ ಪ್ರಯಾಣಿಸಿದ ಖುಷಿ ಇದೆ ಎಂದರು.

ಹಿರಿಯ ಪತ್ರಕರ್ತ ಶಿವಶಂಕರ್ ಮಾತನಾಡಿ, ರಾಮೋಜಿ ರಾವ್ ಅವರು ಸಾಮಾಜಿಕ ಮೌಲ್ಯಕ್ಕೆ ಆದ್ಯತೆ ಕೊಟ್ಟಿದ್ದರು. ಬಳಸುವ ಭಾಷೆ, ವಿಷಯಗಳು ಯಾವ ರೀತಿ ಇರಬೇಕು ಎನ್ನುವ ವಿಚಾರದಲ್ಲಿ ಸ್ಪಷ್ಟತೆ ಇತ್ತು. ಆ ಕಾರಣಕ್ಕೆ ಈಟಿವಿಯಲ್ಲಿ ಬಂದ ಸುದ್ದಿ ಸತ್ಯ ಎನ್ನುವ ವಿಶ್ವಾಸ ಸಮಾಜದಲ್ಲಿ ಇತ್ತು. ಸಾಮಾಜಿಕ ಬದ್ಧತೆ ಕಾರಣಕ್ಕಾಗಿಯೇ ಕೆಲ ಜಾಹೀರಾತುಗಳನ್ನು ತಿರಸ್ಕಾರ ಮಾಡುತ್ತಿದ್ದರು. ನಿಷ್ಠೆ ಮತ್ತು ನಿಷ್ಟಾವಂತರನ್ನು ಇಷ್ಟಪಡುತ್ತಿದ್ದರು. ಆದರೆ ಈನಾಡು ಹೇಗಿರಬಹುದಿತ್ತೋ ಹಾಗೆ ಇರದಿರುವುದಕ್ಕೆ ಅವರ ಸುತ್ತ ಇದ್ದವರು ಎಷ್ಟು ನಿಷ್ಟರಾಗಿದ್ದರು ಎನ್ನುವುದೇ ಮುಖ್ಯ ಎಂದು ಅವರ ಕನಸುಗಳು ಪೂರ್ಣ ಸಾಕಾರಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತೆ ರಾಧಿಕಾ ರಾಣಿ ಮಾತನಾಡಿ, ನಮ್ಮ ಭಾಗ್ಯದ ಬಾಗಿಲು ತೆರೆದ ದೇವರು ರಾಮೋಜಿರಾವ್. ನಮಗೆ ರಾಮೋಜಿ ಫಿಲ್ಮ್ ಸಿಟಿಯ ಈಟಿವಿಯಲ್ಲಿನ ಕೆಲಸ ಸೇರಿದಂತೆ ಎಲ್ಲವೂ ಸಹ ಹೊಸದೇ ಆಗಿತ್ತು. ಜೀವನದ ಪಾಠ ನಮಗೆ ಫಿಲ್ಮ್ ಸಿಟಿಯಲ್ಲಿ ಸಿಕ್ಕಿತ್ತು. ಇದಕ್ಕೆಲ್ಲಾ ರಾಮೋಜಿ ರಾವ್ ಸರ್ ಅವರು ನೀಡಿದ ಪ್ರೋತ್ಸಾಹ ಕಾರಣ ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಸಮೀವುಲ್ಲಾ ಮಾತನಾಡಿ, ಹೊಸತನ, ಪ್ರಯೋಗಶೀಲತೆಗೆ ರಾಮೋಜಿರಾವ್ ಉತ್ತಮ ಉದಾಹರಣೆ. ಸಿನಿಮಾ, ಚಾನಲ್ ಎಲ್ಲವೂ ಪ್ರಯೋಗಗಳೇ ಆಗಿದ್ದವು. ಹೊಸತನದಲ್ಲೇ ಇರುತ್ತಿದ್ದವು. ಅವರೊಬ್ಬ ಮಹಾತ್ವಾಕಾಂಕ್ಷೆಯ ಕನಸುಗಾರರಾಗಿದ್ದರು ಎಂದರು.

ಹಿರಿಯ ಪತ್ರಕರ್ತ ರವಿಗೌಡ ಮಾತನಾಡಿ, ಉದ್ಯೋಗಿಗಳ ಕಷ್ಟದಲ್ಲಿ ರಾಮೋಜಿ ರಾವ್ ಅವರ ಸದಾ ನಿಲ್ಲುತ್ತಿದ್ದರು. ನಾನು ಈಟಿವಿ ಭಾರತ್ ಬಿಟ್ಟು ಬೇರೆ ಸಂಸ್ಥೆ ಸೇರುವ ವೇಳೆ ಅವರನ್ನು ಭೇಟಿಯಾಗಿ ಮತ್ತೊಂದು ಅವಕಾಶದ ಬಗ್ಗೆ ಹೇಳಿದಾಗ ಖುಷಿಯಿಂದ ಸಿಹಿ ಕೊಟ್ಟು ಬೆನ್ನು ತಟ್ಟಿ ಸಂಸ್ಥೆಯ ಬಾಗಿಲು ತೆರೆದಿದೆ ಎನ್ನುವ ಅಭಯದೊಂದಿಗೆ ಕಳಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.

ಈಟಿವಿ ಭಾರತ್ ಬೆಂಗಳೂರು ಬ್ಯೂರೋ ಮುಖ್ಯಸ್ಥ ಸೋಮಶೇಖರ್ ಕವಚೂರು ಮಾತನಾಡಿ, ಮಾಧ್ಯಮದಲ್ಲಿ ಮೌಲ್ಯಗಳ ಜೊತೆಗೆ ಕನ್ನಡದ ಬಗ್ಗೆ ಹೆಚ್ಚಿನ ಕಾಳಜಿ ರಾಮೋಜಿ ರಾವ್ ಅವರಿಗೆ ಇತ್ತು. ಇಡೀ ಮಾಧ್ಯಮ ಸಂಸ್ಥೆಯನ್ನು ಗುಣಮಟ್ಟದಲ್ಲಿ ಮೊದಲ ಸ್ತರದಲ್ಲಿ ಇರುವಂತೆ ನೋಡಿಕೊಂಡಿದ್ದರು. ಎಲ್ಲ ಪ್ರಯತ್ನದಲ್ಲಿಯೂ ಅವರ ಯಶಸ್ವಿಯಾಗಿದ್ದರು. ಈಟಿವಿ ಭಾರತ್ ಅವರ ಕನಸು ಇದೂ ಕೂಡ ಸಫಲತೆಯ ಹಾದಿಯಲ್ಲಿ ಸಾಗುತ್ತಿದೆ. ಅವರು ಮತ್ತಷ್ಟು ಕಾಲ ಇರಬೇಕಿತ್ತು ಎನಿಸುತ್ತಿದೆ ಎನ್ನುತ್ತಾ ರಾಮೋಜಿ ಮತ್ತೆ ಹುಟ್ಟಿ ಬರಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಓದಿ: 'ಸಮರ್ಥ, ಬದ್ಧತೆಯ ಸೈನಿಕನಾಗಿ ಕಾರ್ಯನಿರ್ವಹಿಸಬೇಕು': ಉದ್ಯೋಗಿಗಳಿಗೆ ರಾಮೋಜಿ ರಾವ್​ ಉಯಿಲು - Ramoji Will Of Responsibilities

Last Updated : Jun 17, 2024, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.