ಸುಬ್ರಹ್ಮಣ್ಯ/ದ.ಕ: ಬಾಳ್ಳುಪೇಟೆ ಮತ್ತು ಸಕಲೇಶಪುರ ರೈಲ್ವೆ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ್ದು, ಈ ಕೆಳಗಿನ ರೈಲು ಸೇವೆಗಳಲ್ಲಿ ವ್ಯತ್ಯಯವಾಗಿದೆ.
ರದ್ದಾದ ರೈಲುಗಳ ವಿವರ:
1. ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ 16.08.2024ರಂದು ಸಂಪೂರ್ಣ ರದ್ದು.
2. ರೈಲು ಸಂಖ್ಯೆ 16586 ಮುರುಡೇಶ್ವರ- ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ 16.08.2024ರಂದು ಸಂಪೂರ್ಣ ರದ್ದು.
3. ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ 17.08.2024ರಂದು ರದ್ದು.
ಭಾಗಶಃ ರದ್ದುಗೊಂಡ ರೈಲುಗಳು:
1. ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ 16.08.2024ರಂದು ಹಾಸನ ಮತ್ತು ಕಾರವಾರ ನಡುವಿನ ಭಾಗಶಃ ರದ್ದು.
2. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್-ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ 16.08.2024ರಂದು ಸಕಲೇಶಪುರ ಮತ್ತು ಯಶವಂತಪುರ ನಡುವೆ ಭಾಗಶಃ ರದ್ದು.
ಬದಲಿ ಮಾರ್ಗದಲ್ಲಿ ಓಡುವ ರೈಲುಗಳು:
1. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು 16.08.2024ರಂದು ಮಂಗಳೂರು ಜಂಕ್ಷನ್, ಕಾರವಾರ, ಮಡಗಾಂವ್, ಲೊಂಡಾ, ಎಸ್.ಎಸ್.ಎಸ್ ಹುಬ್ಬಳ್ಳಿ ಜಂಕ್ಷನ್ ಮೂಲಕ ಓಡಲಿದೆ.
2. ರೈಲು ಸಂಖ್ಯೆ 16595 ಕ್ರಾ.ಸಂ.ರಾ ಬೆಂಗಳೂರು -ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ 16.08.2024ರಂದು ಅರಸೀಕೆರೆ, ಎಸ್.ಎಸ್.ಎಸ್ ಹುಬ್ಬಳ್ಳಿ ಜಂಕ್ಷನ್, ಲೊಂಡಾ ಮತ್ತು ಮಡಗಾಂವ್ ಮೂಲಕ ಓಡಲಿದೆ.
3. ರೈಲು ಸಂಖ್ಯೆ 16596 ಕಾರವಾರ-ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ 16.08.2024ರಂದು ಮಡಗಾಂವ್, ಲೊಂಡಾ, ಎಸ್.ಎಸ್.ಎಸ್ ಹುಬ್ಬಳ್ಳಿ ಜಂಕ್ಷನ್ ಮತ್ತು ಅರಸೀಕೆರೆ ಮೂಲಕ ಓಡಲಿದೆ.
4. ರೈಲು ಸಂಖ್ಯೆ 16511 ಕ್ರಾ.ಸಂ.ರಾ ಬೆಂಗಳೂರು -ಕಣ್ಣೂರು ಎಕ್ಸ್‌ಪ್ರೆಸ್ 16.08.2024ರಂದು ಜೋಲಾರ್ಪೇಟೆ ಕ್ಯಾಬಿನ್, ಸೇಲಂ ಮತ್ತು ಶೋರಣೂರು,ಮಂಗಳೂರು ಜಂಕ್ಷನ್ ಮೂಲಕ ಓಡಲಿದೆ.
5. ರೈಲು ಸಂಖ್ಯೆ 16512 ಕಣ್ಣೂರು-ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ 16.08.2024ರಂದು ಶೋರಣೂರು, ಸೇಲಂ ಮತ್ತು ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಓಡಲಿದೆ.
ಇದನ್ನೂ ಓದಿ: ಮಂಗಳೂರು–ಹಾಸನ ಮಾರ್ಗದಲ್ಲಿ ಗುಡ್ಡ ಕುಸಿತ: 12 ರೈಲುಗಳ ಸೇವೆ ರದ್ದು - Train Cancel