ಶಿವಮೊಗ್ಗ: ಜಗತ್ ಪ್ರಸಿದ್ಧ ಜೋಗ ಜಲಪಾತವನ್ನು ನೋಡಲು ಇಂದು ಜನ ಸಾಗರವೇ ಹರಿದು ಬಂದಿದೆ. ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜೋಗ ಜಲಪಾತದ ರಾಜ, ರಾಣಿ, ರೋರರ್ ಲೇಡಿ, ರಾಕೆಟ್ಗಳು ದುಮ್ಮಿಕ್ಕಿ ಹರಿಯುತ್ತಿವೆ.
ಮಳೆಗಾಲದ ಹಿನ್ನೆಲೆಯಲ್ಲಿ ಜೋಗ ಜಲಪಾತದ ನಯನ ಮನೋಹರ ದೃಶ್ಯ ನೋಡಲು ಇಂದು ಪ್ರವಾಸಿಗರ ದಂಡೆ ಆಗಮಿಸುತ್ತಿದೆ. ಅದರಲ್ಲೂ ಇಂದು ಭಾನುವಾರ ಬೆಳಗ್ಗೆಯಿಂದಲೇ ಜೋಗ ಜಲಪಾತವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.
![tourists rushed to jog falls due to heavy rainfall in shivamogga](https://etvbharatimages.akamaized.net/etvbharat/prod-images/14-07-2024/kn-smg-03-jogafalls-janasagara-7204213_14072024195045_1407f_1720966845_1090.jpg)
ಇಂದು ಜೋಗ ಜಲಪಾತವನ್ನು ನೋಡಲು ಸುಮಾರು 50 ಸಾವಿರ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿಗರು ಒಮ್ಮೆಲೆ ಆಗಮಿಸಿದ ಕಾರಣಕ್ಕೆ ಜೋಗ ಜಲಪಾತದ ಗೇಟ್ನಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಪ್ರವಾಸಿಗರು ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ, ಜೋಗ ಜಲಪಾತದ ಸೌಂದರ್ಯವನ್ನು ಸವಿದರು.
ಪ್ರವಾಸಿಗರು ತಮ್ಮ ವಾಹನವನ್ನು ಪಾರ್ಕಿಂಗ್ ಮಾಡಲು ಪರದಾಡುವಂತಾಯಿತು. ಜೋಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಸ್ವಲ್ಪ ಅಡಚಣೆ ಉಂಟಾಗಿತ್ತು.
ಇದನ್ನೂ ಓದಿ : ಹುಬ್ಬಳ್ಳಿ - ಜೋಗ್ ಫಾಲ್ಸ್ ನಡುವೆ ವಿಶೇಷ ಬಸ್ಗೆ ಹೆಚ್ಚಿದ ಬೇಡಿಕೆ; ಬಸ್ಗಳ ಸಂಖ್ಯೆ ಹೆಚ್ಚಳ - Jog Falls buses increased