ETV Bharat / state

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಅಡಿಕೆ ತೋಟಗಳು ಜಲಾವೃತ - Heavy Rain In Chikkamagaluru - HEAVY RAIN IN CHIKKAMAGALURU

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಅಡಿಕೆ ತೋಟಗಳು ಜಲಾವೃತಗೊಂಡಿವೆ.

ಕಾಫಿನಾಡಿನಲ್ಲಿ ಧಾರಾಕಾರ ಮಳೆ
ಕಾಫಿನಾಡಿನಲ್ಲಿ ಧಾರಾಕಾರ ಮಳೆ (ETV Bharat)
author img

By ETV Bharat Karnataka Team

Published : Jun 3, 2024, 8:10 PM IST

ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದೊಂದು ವಾರದಿಂದ ವರುಣ ಅಬ್ಬರಿಸುತ್ತಿದ್ದಾನೆ. ಸೋಮವಾರ ಸಂಜೆ 5 ಗಂಟೆಯಿಂದ ಗುಡುಗು, ಮಿಂಚಿನೊಂದಿಗೆ ಚಿಕ್ಕಮಗಳೂರು, ಮುಡಿಗೆರೆ, ಕೊಪ್ಪ, ಶೃಂಗೇರಿ, ಎನ್​.ಆರ್.ಪುರ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಹಾಗೂ ಸಾದರಹಳ್ಳಿ ಗ್ರಾಮಗಳಲ್ಲಿ 50 ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ಇವು ಕೃಷಿಕರಾದ ಬಸವರಾಜು, ಲೋಕೇಶ್ ಎಂಬವರಿಗೆ ಸೇರಿದ ತೋಟಗಳಾಗಿವೆ. ಈ ಭಾಗದಲ್ಲೂ ಸತತ ಒಂದು ಗಂಟೆಯಿಂದ ಬಿಟ್ಟೂಬಿಡದೆ ನಿರಂತರವಾಗಿ ಮಳೆಯಾಗುತ್ತಿದೆ.

ಮೈಸೂರಿನಲ್ಲಿ ಮಳೆ ಅವಾಂತರ: ಶನಿವಾರ ಹಾಗೂ ಭಾನುವಾರ ಸುರಿದ ಮುಂಗಾರು ಮಳೆಗೆ ಹುಣಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹಲವು ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದ ಘಟನೆಗಳು ವರದಿಯಾಗಿವೆ.

ಹುಣಸೂರು ತಾಲೂಕಿನ ಹನಗೂಡು ಬಳಿಯ ಕೆಂಜಳ್ಳಿ, ಅರಳಹಳ್ಳಿ, ಕಿರಂಗೂರು, ಹಿಂಡಲಗೂಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರೀ ಮಳೆಗೆ ತಂಬಾಕು ಸಸಿಗಳು, ಶುಂಠಿ ಬೆಳೆ ಹಾನಿಯಾಗಿದೆ. ಅಡಿಕೆ ತೋಟಗಳು ಜಲಾವೃತಗೊಂಡಿವೆ. ಇನ್ನು ಕೆಲವೆಡೆ ಗ್ರಾಮಗಳಿಗೆ ಸಂರ್ಪಕ ಕಲ್ಪಿಸುವ ಸೇತುವೆಗಳು ಕೊಚ್ಚಿ ಹೋಗಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 133 ವರ್ಷಗಳ ನಂತರ ಅತ್ಯಧಿಕ ಮಳೆ; ರಾಜ್ಯದ 17 ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ - Karnataka Rain

ETV Bharat Logo

Copyright © 2025 Ushodaya Enterprises Pvt. Ltd., All Rights Reserved.