ETV Bharat / state

ಕರಾವಳಿಯಲ್ಲಿಂದು ತುಳುವರಿಗೆ ಬಿಸು ಪರ್ಬ: ಆಚರಣೆ ಹೇಗೆ? - Vishu festival - VISHU FESTIVAL

ಕರಾವಳಿಯ ಜನರು ಇಂದು ಸೌರಮಾನ ಯುಗಾದಿ ಹಬ್ಬವನ್ನು ಅಂದರೆ ಬಿಸು ಪರ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಬಿಸು ಪರ್ಬ
ಬಿಸು ಪರ್ಬ
author img

By ETV Bharat Karnataka Team

Published : Apr 14, 2024, 12:52 PM IST

ಮಂಗಳೂರು: ನಾಡಿನೆಲ್ಲೆಡೆ ಮಂಗಳವಾರ ಯುಗಾದಿ ಸಂಭ್ರಮ ನಡೆದಿದ್ದರೆ, ಕರಾವಳಿಯಲ್ಲಿ ಇಂದು ತುಳುವರ ಯುಗಾದಿಯಾದ ಬಿಸು ಪರ್ಬ ಆಚರಿಸಲಾಗುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೊಂಕಣಿ, ವಿಶ್ವಕರ್ಮ ಸಮುದಾಯದವರು ಮಾತ್ರ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ. ಉಳಿದಂತೆ ಹೆಚ್ಚಿನ ಎಲ್ಲಾ ತುಳುವರು ಸೌರಮಾನ ಯುಗಾದಿಯಾದ ಇಂದು ಬಿಸುಪರ್ಬವನ್ನು ಆಚರಿಸಿದರು.

ಪಗ್ಗು ತಿಂಗಳು (ಎಪ್ರಿಲ್ ಮಧ್ಯದಿಂದ ಮೇ ಮಧ್ಯದವರೆಗೆ) ತುಳುವರಿಗೆ ವರ್ಷ ಪ್ರಾರಂಭದ ಮೊದಲ ತಿಂಗಳು. ಅಂದರೆ ಮೀನ ಮಾಸ ಮುಗಿದು ಮೇಷ ಮಾಸದ ಸಂಕ್ರಮಣಕ್ಕೆ ಹೊಸ ವರ್ಷ ಆಚರಣೆ. ಮೇಷ ಸಂಕ್ರಮಣದ ಮರುದಿನ ಅಂದರೆ 'ಸಿಂಗೊಡೆ'ಯನ್ನು ತುಳುವರು ವರ್ಷದ ಮೊದಲ ದಿನ 'ಬಿಸು ಪರ್ಬ' ಎಂದು ಆಚರಿಸುತ್ತಾರೆ. 'ಬಿಸು ಪರ್ಬ' ಎಂದರೆ ಸೌರಮಾನ ಯುಗಾದಿ ಎಂದರ್ಥ. ಈ ದಿನವೇ ತುಳುವರಿಗೆ ವರ್ಷಾರಂಭದ ದಿನ.

ತುಳುವರು ಮೂಲತಃ ಕೃಷಿಕರು. ಆದ್ದರಿಂದ ಅವರ ಎಲ್ಲಾ ಹಬ್ಬಗಳು ಒಂದಿಲ್ಲೊಂದು ರೀತಿ ಕೃಷಿ ಸಂಸ್ಕೃತಿ ಹಾಸುಹೊಕ್ಕಿದೆ. ಬಿಸು ಪರ್ಬದಲ್ಲೂ ಕಣಿ ಇಡುವುದು, ಬುಳೆ ಕಾಣಿಕೆ ಒಪ್ಪಿಸುವುದು, ಎಣೇಲು ಬೇಸಾಯಕ್ಕೆ ಮುಹೂರ್ತ 'ಕೈ ಬಿತ್ ಹಾಕುವುದು' ಮುಂತಾದ ಆಚರಣೆ ಇದೆ. ಇವೆಲ್ಲದರಲ್ಲಿ ನಾವು ಕೃಷಿ ಪ್ರಾಧಾನ್ಯತೆಯನ್ನು ಕಾಣಬಹುದು.

ಬಿಸು ಪರ್ಬ
ಬಿಸು ಪರ್ಬ

ಬಿಸು ಹಬ್ಬದಂದು ಬೆಳಗ್ಗೆ ಬೇಗನೇ ಎದ್ದು ಇಲ್ಲವೇ ಅದರ ಮುನ್ನಾ ದಿನವೇ ಮನೆಯ ಯಜಮಾನ ಅನುಕೂಲಕ್ಕೆ ತಕ್ಕಂತೆ ದೈವಸ್ಥಾನ, ದೇವರು ಅಥವಾ ತುಳಸಿಕಟ್ಟೆಯ ಎದುರು ಎರಡು ಜೋಡಿ ಬಾಳೆ ಎಲೆಯಲ್ಲಿ ಒಂದು ಮಣೆ ಇಡುತ್ತಾರೆ. ಅದರ ಮೇಲೆ ದೀಪವಿಟ್ಟು ಅದರ ಎಡ ಬಲಗಳಲ್ಲಿ ಹೂವು, ಅಕ್ಕಿ, ಹಣ್ಣು, ತರಕಾರಿ, ತೆಂಗಿನಕಾಯಿ ಇಟ್ಟು ಅದರ ಮಧ್ಯಭಾಗದಲ್ಲಿ ಕನ್ನಡಿ ಇಡುತ್ತಾನೆ. ಬಿಸುಹಬ್ಬದಂದು ಬೆಳಗ್ಗೆ ಬೇಗ ಎದ್ದು ಮನೆಮಂದಿಯೆಲ್ಲ ಮಿಂದು ಶುಚಿಯಾಗಿ ಕನ್ನಡಿಯಲ್ಲಿ ಮುಖ ನೋಡಿ ಬಿಸುಕಣಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.

ಪಗ್ಗು ತಿಂಗಳೆಂದರೆ ಗಿಡ-ಮರಗಳಲ್ಲಿ ಫಲಗಳು ಯಥೇಚ್ಛವಾಗಿ ಬೆಳೆದಿರುತ್ತವೆ. ಅಲ್ಲದೆ ಬಿಸು ಕಣಿಗೆ ಅರ್ಪಿಸದೆ ಹೊಸಫಲವನ್ನು ತಿನ್ನಬಾರದೆಂಬ ನಂಬಿಕೆ ತುಳುವರಲ್ಲಿ ರೂಢಿಯಲ್ಲಿದೆ. ಬಿಸುಕಣಿಗೆ ಇಟ್ಟಿರುವ ತರಕಾರಿಗಳನ್ನೇ ಇಂದಿನ ಮಧ್ಯಾಹ್ನದ ಭೋಜನಕ್ಕೆ ಬಳಸಲಾಗುತ್ತದೆ‌. ಗೇರುಬೀಜ ಹಾಕಿರುವ ಪಾಯಸವೂ ಅಂದಿನ ಅಗತ್ಯಗಳಲ್ಲೊಂದು.

ಇದನ್ನೂ ಓದಿ: ಕೇವಲ 99 ರೂಗೆ ಅನ್​ಲಿಮಿಟೆಡ್​ ಬಿರಿಯಾನಿ, ಈ ಕಡೆ ಮಾಲೀಕ - ಆ ಕಡೆ ಗ್ರಾಹಕ ಫುಲ್​ ಖುಷ್​! - Unlimited Biryani Rs 99

ETV Bharat Logo

Copyright © 2025 Ushodaya Enterprises Pvt. Ltd., All Rights Reserved.