ETV Bharat / state

ದಾವಣಗೆರೆಯಲ್ಲಿ ಸಿದ್ದೇಶ್ವರ್ - ಶಾಮನೂರು ಕುಟುಂಬದ ನಡುವೆ ನೇರ ಸ್ಪರ್ಧೆ: ದಾಖಲೆಯ ಗೆಲುವಿನತ್ತ ಕಾಂಗ್ರೆಸ್, ಬಿಜೆಪಿ​ ಚಿತ್ತ! - Lok Sabha Elections

ದಾವಣಗೆರೆ ಲೋಕಸಭೆ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಜಿ.ಎಂ‌.ಸಿದ್ದೇಶ್ವರ್ ತಮ್ಮ ಪತ್ನಿ ಗಾಯಿತ್ರಿ ಅವರಿಗೆ ಟಿಕೆಟ್​ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಕಾಂಗ್ರೆಸ್​ ಪಕ್ಷದಿಂದ ಶಾಮನೂರು ಶಿವಶಂಕರಪ್ಪ ಕುಟುಂಬದ ಪ್ರಭಾ ಅವರಿಗೆ ಟಿಕೆಟ್​ ಘೋಷಿಸಲಾಗಿದೆ. ಎರಡೂ ಕುಟುಂಬಗಳಿಂದಲೂ ಈ ಬಾರಿ ಮಹಿಳೆಯರೇ ಅಖಾಡಕ್ಕೆ ಇಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.

tight-fight-between-congress-and-bjp-in-davangere-lok-sabha-constituency
ದಾವಣಗೆರೆಯಲ್ಲಿ ಸಿದ್ದೇಶ್ವರ್ -ಶಾಮನೂರು ಕುಟುಂಬದ ನಡುವೆ ನೇರ ಸ್ಪರ್ಧೆ
author img

By ETV Bharat Karnataka Team

Published : Mar 22, 2024, 11:03 PM IST

Updated : Mar 25, 2024, 2:10 PM IST

ದಾವಣಗೆರೆ: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಇದರೊಂದಿಗೆ ಲೋಕ ಸಮರಕ್ಕೆ ದಾವಣಗೆರೆ ಚುನಾವಣಾ ಕ್ಷೇತ್ರದ ಅಖಾಡ ಸಿದ್ಧವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಜೊತೆಗೆ ಚುನಾವಣಾ ಕಾವು ಸಹ ಜೋರಾಗುತ್ತಿದೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಬಿಜೆಪಿಯ ಜಿ.ಎಂ‌.ಸಿದ್ದೇಶ್ವರ್ ಈ ಬಾರಿ ಲೋಕ ಕಣದಿಂದ ಹಿಂದೆ ಸರಿದು, ತಮ್ಮ ಪತ್ನಿಗೆ ಟಿಕೆಟ್​ ಕೊಡಿಸಿದ್ದಾರೆ. ಈ ಮೂಲಕ ಒಂದೇ ಕುಟುಂಬಕ್ಕೆ ಒಟ್ಟಾರೆ ಎಂಟು ಬಾರಿ ಬಿಜೆಪಿ ಮಣೆ ಹಾಕಿದಂತಾಗಿದೆ.

ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಯಲ್ಲಿ ರಾಜಕೀಯವಾಗಿ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪ ಕುಟುಂಬಗಳ ಮಧ್ಯೆ ಜಿದ್ದಾಜಿದ್ದಿ ಇದೆ. ಈ ಸಲದ ಲೋಕಸಭೆ ಚುನಾವಣೆಗೂ ಈ ಎರಡು ಕುಟುಂಬಗಳ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ವಿಶೇಷವೆಂದರೆ, ಈ ಬಾರಿ ಎರಡು ಕುಟುಂಬಗಳ ಮಹಿಳೆಯರು ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿ ಜಿ.ಎಂ.ಸಿದ್ದೇಶ್ವರ್ ಅವರಿಗೆ ಟಿಕೆಟ್​ ನೀಡಬಾರದು ಎಂದು ಪಕ್ಷದ ವಲಯದಲ್ಲೇ ಅಪಸ್ವರ ಎದ್ದಿತ್ತು. ವಿರೋಧದ ನಡುವೆಯೂ ಸಿದ್ದೇಶ್ವರ್ ತಮ್ಮ ಬದಲಿಗೆ ಪತ್ನಿ ಗಾಯಿತ್ರಿ ಅವರಿಗೆ ಟಿಕೆಟ್​ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್​ ಪಕ್ಷದಿಂದ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್​ ಘೋಷಿಸಲಾಗಿದೆ. ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ ಪತ್ನಿ ಪ್ರಭಾ ಅವರನ್ನು ಕಾಂಗ್ರೆಸ್​ ಕಣಕ್ಕಿಳಿಸಿದೆ.

ಮೇಲುಗೈಯತ್ತ ಬಿಜೆಪಿ, ಕಾಂಗ್ರೆಸ್​ ಚಿತ್ತ: 1977ರಿಂದ 2019ರವರೆಗೆ ಒಟ್ಟು 12 ಲೋಕಸಭಾ ಚುನಾವಣೆಗಳನ್ನು ದಾವಣಗೆರೆ ಕ್ಷೇತ್ರ ಕಂಡಿದೆ. ಇದರಲ್ಲಿ ಕಾಂಗ್ರೆಸ್ 6 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 6 ಬಾರಿ ಜಯ ದಾಖಲಿಸಿ ಸಮಬಲ ಸಾಧಿಸಿವೆ. ಈ ಬಾರಿ ಗೆದ್ದು ಮೇಲುಗೈ ಸಾಧಿಸುವತ್ತ ಬಿಜೆಪಿ ಹಾಗೂ ಕಾಂಗ್ರೆಸ್​ ಎರಡೂ ಪಕ್ಷಗಳ ಚಿತ್ತ ನೆಟ್ಟಿದೆ. ಅದರಲ್ಲೂ, ಬಿಜೆಪಿಯಿಂದ ಸಿದ್ದೇಶ್ವರ್​ ಅವರ ಕುಟುಂಬವೇ 6 ಸಲವೂ ಆಯ್ಕೆಯಾಗಿದೆ. ಇದರಲ್ಲಿ ಎರಡು ಬಾರಿ ಸಿದ್ದೇಶ್ವರ್​ ತಂದೆ ಜಿ.ಮಲ್ಲಿಕಾರ್ಜುನಪ್ಪ ಗೆದ್ದಿದ್ದರೆ, ನಾಲ್ಕು ಬಾರಿ ಸಿದ್ದೇಶ್ವರ್​ ಗೆಲುವು ಕಂಡಿದ್ದಾರೆ.

ದಾವಣಗೆರೆ ಲೋಕಸಭೆ ಕ್ಷೇತ್ರ ರಚನೆಯಾದ ಬಳಿಕ 1977ರಲ್ಲಿ ಕಾಂಗ್ರೆಸ್​ನಿಂದ ಕೊಂಡಜ್ಜಿ ಬಸಪ್ಪ ಗೆಲುವು ದಾಖಲಿಸಿದ್ದರು. ನಂತರದ ನಾಲ್ಕು ಅವಧಿಗಳಿಗೂ ಕಾಂಗ್ರೆಸ್​ ಪಕ್ಷವೇ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. 1980ಲ್ಲಿ ಕಾಂಗ್ರೆಸ್​ನ ಟಿ.ವಿ.ಚಂದ್ರಶೇಖರಪ್ಪನವರ ಬಳಿಕ 1984, 1989, 1991ರ ಚುನಾವಣೆಯಲ್ಲಿ ಚನ್ನಯ್ಯ ಒಡೆಯರ್ ಮೂರು ಬಾರಿ ಗೆದ್ದು ಹ್ಯಾಟ್ರಿಕ್​ ಬಾರಿಸಿದ್ದರು. ಆದರೆ, 1996ರ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿತ್ತು. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದೇಶ್ವರ್​ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪ ಜಯ ದಾಖಲಿಸಿದ್ದರು. ಆದರೆ, 1998ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್​ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆಗ ಜಿ.ಮಲ್ಲಿಕಾರ್ಜುನಪ್ಪ ವಿರುದ್ಧ ಶಾಮನೂರು ಶಿವಶಂಕರಪ್ಪ ಆಯ್ಕೆಯಾಗಿದ್ದರು. ಬಿಜೆಪಿಯ ಮಲ್ಲಿಕಾರ್ಜುನಪ್ಪ ಪರಾಭವಗೊಂಡಿದ್ದರು.

ಇದರ ಮರು ವರ್ಷವೇ ಎಂದರೆ, 1999ರಲ್ಲಿ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನಪ್ಪ ಗೆಲುವಿನ ನೆಗೆ ಬೀರಿದ್ದರು. ಅಲ್ಲಿಂದ ಮತ್ತೆ ಕಾಂಗ್ರೆಸ್​ ಗೆಲುವಿನ ಲಯಕ್ಕೆ ಮರಳಲು ಸಾಧ್ಯವಾಗಿಲ್ಲ. 2004 ರಿಂದ 2019ರವರೆಗೂ ಮಲ್ಲಿಕಾರ್ಜುನಪ್ಪ ಮಗ ಸಿದ್ದೇಶ್ವರ್​ ಸತತವಾಗಿ ನಾಲ್ಕು ಬಾರಿ ಕೂಡ ಬಿಜೆಪಿಯಿಂದಲೇ ಗೆಲುವು ದಾಖಲಿಸಿದ್ದರು. ಈಗ 7ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಸಿದ್ದೇಶ್ವರ್​ ಕುಟುಂಬಕ್ಕೆ ಶಾಮನೂರು ಕುಟುಂಬ ಪ್ರಬಲ ಎದುರಾಳಿ ಆಗಿದೆ. ಆದ್ದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಎರಡೂ ಕುಟುಂಬಗಳಿಂದಲೂ ಈ ಬಾರಿ ಮಹಿಳೆಯರೇ ಅಖಾಡಕ್ಕೆ ಇಳಿದಿರುವುದು ಚುನಾವಣೆಯನ್ನು ಮತ್ತಷ್ಟು ರಂಗೇರಿಸಿದೆ.

8 ಬಾರಿ ಒಂದೇ ಕುಟುಂಬಕ್ಕೆ ಬಿಜೆಪಿ ಟಿಕೆಟ್!: ದಾವಣಗೆರೆ ಕ್ಷೇತ್ರದಲ್ಲಿ 1996 ರಿಂದಲೂ ಬಿಜೆಪಿಯಿಂದ ಸಿದ್ದೇಶ್ವರ್​ ಕುಟುಂಬಕ್ಕೆ ನೀಡಲಾಗಿದೆ. ಮಲ್ಲಿಕಾರ್ಜುನಪ್ಪ ಮೂರು ಬಾರಿ ಮತ್ತು ಸಿದ್ದೇಶ್ವರ್​ ನಾಲ್ಕು ಬಾರಿ ಸ್ಪರ್ಧೆ ಮಾಡಿದ್ದಾರೆ. ಈಗ ಎಂಟನೇ ಬಾರಿಗೂ ಸಿದ್ದೇಶ್ವರ್ ಕುಟುಂಬಕ್ಕೆ ಬಿಜೆಪಿ ಟಿಕೆಟ್​ ಒಲಿದಿದೆ. ಅಭ್ಯರ್ಥಿಯಾದ ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಈಗಾಗಲೇ ಚುನಾವಣಾ ಪ್ರಚಾರ ಕೂಡ ಆರಂಭಿಸಿದ್ದಾರೆ.

"ಬಿಜೆಪಿ ಟಿಕೆಟ್​ ಘೋಷಣೆ ಬಳಿಕ ಯಾರೂ ಅತೃಪ್ತರು ಬಂಡಾಯ ಎದ್ದಿಲ್ಲ. ಎಲ್ಲರಿಗೂ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎನ್ನುವ ಆಸೆ ಇದೆ. ನನಗೂ ಅದೇ ಆಸೆ ಇದೆ. ಈ ಚುನಾವಣೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಲು ಹುಮ್ಮಸ್ಸಿನಿಂದ ಮುಂದೆ ಬಂದಿದ್ದಾರೆ. ನಮ್ಮ ಮಾವನವರಾದ ದಿ. ಸಂಸದ ಮಲ್ಲಿಕಾರ್ಜುನಪ್ಪನವರು ಚುನಾವಣೆಗೆ ನಿಂತಾಗ ಏಳು ವರ್ಷಗಳ ಕಾಲ ಓಡಾಡಿದ್ದೇನೆ. ಅಲ್ಲದೇ, ಇಪ್ಪತ್ತು ವರ್ಷಗಳ ಸಂಸದರಾಗಿದ್ದ ನನ್ನ ಪತಿ ಸಿದ್ದೇಶ್ವರ್ ಚುನಾವಣೆಗಳಿಗೆ ನಿಂತಾಗ ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುವೆ'' ಎಂಬ ವಿಶ್ವಾಸವನ್ನು ಗಾಯಿತ್ರಿ ಸಿದ್ದೇಶ್ವರ್ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ಗೆ​ ಜಯ ತರುವರೇ ಪ್ರಭಾ?: ದಾವಣಗೆರೆ ಕ್ಷೇತ್ರ ರಚನೆಯಾದ ಆರಂಭದಲ್ಲಿ ಕಾಂಗ್ರೆಸ್​ ಸಂಪೂರ್ಣ ಹಿಡಿತ ಹೊಂದಿತ್ತು. ಆದರೆ, 1996ರಿಂದ 2019ರವರೆಗಿನ ನಡೆದ ಏಳು ಚುನಾವಣೆಯಲ್ಲಿ ಒಂದು ಸಲ ಮತದಾರರು ಕಾಂಗ್ರೆಸ್​ ಕೈ ಹಿಡಿದಿದ್ದಾರೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಅವರು ಪಕ್ಷಕ್ಕೆ ಜಯ ತಂದುಕೊಡುವರೇ ಎಂಬುವುದನ್ನು ಕಾದುನೋಡಬೇಕಿದೆ. ಅಲ್ಲದೇ, ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಇದ್ದಾರೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿದೆ. ಹೀಗಾಗಿಯೇ ದಾವಣಗೆರೆ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂಬ ಪರಿಸ್ಥಿತಿ, ಒತ್ತಡ ನಿರ್ಮಾಣವಾಗಿದೆ.

''ಕ್ಷೇತ್ರದ ಶಾಸಕರು, ಮುಖಂಡರ ಅಭಿಪ್ರಾಯ ಪಡೆದು ಕಾಂಗ್ರೆಸ್​ ಟಿಕೆಟ್ ಅಂತಿಮಗೊಳಿಸಲಾಗಿದೆ. ಈ ನಿರ್ಧಾರಕ್ಕೆ ಶಾಮನೂರು ಶಿವಶಂಕರಪ್ಪನವರು, ಮಲ್ಲಿಕಾರ್ಜುನ​ ಹಾಗೂ ನಾವು ಬದ್ಧರಾಗಿದ್ದೇವೆ. ಬಿಜೆಪಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಸ್ಪರ್ಧೆ ಇದ್ದೇ ಇರುತ್ತದೆ, ಚುನಾವಣೆ ಎಂದ ಮೇಲೆ ಹೋರಾಟವೂ ಇರುತ್ತದೆ. ಪಕ್ಷದ ಶಾಸಕರು ಸೇರಿದಂತೆ ಎಲ್ಲರೂ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ. ಬಿಜೆಪಿಯವರದ್ದು ಮೋದಿ ಅಲೆ ಆಗಿದ್ದರೆ, ನಮ್ಮದು ಮಾತ್ರ ಕಾಂಗ್ರೆಸ್ ಅಲೆ. ಜನರು ಅಭಿವೃದ್ಧಿ ಕೆಲಸಗಳನ್ನು ನೋಡಿಕೊಂಡು ನಮಗೆ ಮತ ನೀಡುತ್ತಾರೆ ಎಂಬ ವಿಶ್ವಾಸ ಇದೆ'' ಎಂದು ಕಾಂಗ್ರೆಸ್ ಅಭ್ಯರ್ಥಿ​ ಪ್ರಭಾ ಮಲ್ಲಿಕಾರ್ಜುನ್ ಹೇಳುತ್ತಾರೆ.

ಇದನ್ನೂ ಓದಿ: ಬೆಳಗಾವಿ, ಚಿಕ್ಕೋಡಿಯಲ್ಲಿ ಸಚಿವರ ಮಕ್ಕಳಿಗೆ ಮಣೆ: ಬಿಜೆಪಿ ಹಿರಿಯರ ವಿರುದ್ಧ ಅಖಾಡಕ್ಕೆ ಧುಮುಕಿದ ಕಿರಿಯರು - Lok Sabha Election

Last Updated : Mar 25, 2024, 2:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.