ETV Bharat / state

ಮಂಗಳೂರು: ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ - international karate competition

ಮಂಗಳೂರಿನ ಕುಲಶೇಖರ ಚರ್ಚ್​ ಸಭಾಭವನದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ದೇಶ- ವಿದೇಶದ 1,500ಕ್ಕೂ ಅಧಿಕ ಮಂದಿ ಕರಾಟೆ ಪಟುಗಳು ಭಾಗವಹಿಸಲಿದ್ದಾರೆ.

karate-competition
ಕರಾಟೆ ಸ್ಪರ್ಧೆ (ETV Bharat)
author img

By ETV Bharat Karnataka Team

Published : Sep 6, 2024, 5:01 PM IST

ಮಂಗಳೂರು: ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ (ETV Bharat)

ಮಂಗಳೂರು (ದಕ್ಷಿಣ ಕನ್ನಡ) : ಸೆಲ್ಫ್​ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೋ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ 'ಶೌರ್ಯ' ಕರಾಟೆ ಚಾಂಪಿಯನ್‌ಶಿಪ್, ನಗರದ ಕುಲಶೇಖರ ಚರ್ಚ್ ಸಭಾಭವನದಲ್ಲಿ ಇಂದಿನಿಂದ ಆರಂಭವಾಗಿದೆ. ಸೆ. 8 ರವರೆಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ, ದೇಶ - ವಿದೇಶಗಳ 1,500ಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸಿದ್ದಾರೆ.

ಮಲೇಷ್ಯಾ,`ಜೋರ್ಡಾನ್, ಜಪಾನ್, ಶ್ರೀಲಂಕಾ, ತಾಂಜಾನಿಯಾ ಮುಂತಾದ ದೇಶಗಳಿಂದ ತಂಡಗಳು ಭಾಗವಹಿಸುತ್ತಿವೆ. ಮುಖ್ಯ ತೀರ್ಪುಗಾರರು ಕರಾಟೆಯ ಕೇಂದ್ರಸ್ಥಾನ ಜಪಾನ್‌ನಿಂದ ಆಗಮಿಸಿದ್ದಾರೆ. ವಿಜೇತರಿಗೆ ಸರ್ಟಿಫಿಕೆಟ್ ಹಾಗೂ ಪದಕ ನೀಡಲಾಗುತ್ತಿದೆ. ಇಂದು 6 ರಿಂದ 14 ವರ್ಷದೊಳಗಿನ ಎಲ್ಲ ವಿಧದ ಕಲರ್ ಬೆಲ್ಟ್​ಗಳ ಕರಾಟೆ ಪಟುಗಳಿಗೆ, ಸೆ. 7ರಂದು 14 ವರ್ಷ ಮೇಲ್ಪಟ್ಟವರಿಗೆ ಪಂದ್ಯಾಟ ನಡೆಯಲಿದೆ. 8 ರಂದು ಕಪ್ಪುಬೆಲ್ಟ್​ನವರ ಪಂದ್ಯಗಳು ನಡೆಯಲಿವೆ.

ಮೊದಲ ಬಾರಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ : ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯುತ್ತಿದೆ. ಕೋರ್ಡೆಲ್ ಹಾಲ್‌ನ ಒಳಭಾಗವನ್ನು ಮ್ಯಾಟ್ ಹಾಕಿ ಕರಾಟೆ ಪಂದ್ಯಾಟಗಳಿಗೆ ಸಜ್ಜುಗೊಳಿಸಲಾಗಿದೆ. 1,500 ರಷ್ಟು ಕರಾಟೆ ಪಟುಗಳು, ಜತೆಗೆ ತೀರ್ಪುಗಾರರು, ಟೀಂ ಮ್ಯಾನೇಜರ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಏಕಕಾಲದಲ್ಲಿ 7 ರಿಂದ 9 ಪಂದ್ಯಗಳನ್ನು ನಡೆಸಬಹುದಾಗಿದೆ. ವೈಯುಕ್ತಿಕ ಕಟಾ, ಟೀಂ ಕಟಾ, ಕುಮಿಟೆ ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.

ಈ ಬಗ್ಗೆ ಮಾತನಾಡಿದ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೋ ಅಧ್ಯಕ್ಷ ಸುರೇಂದ್ರ , 'ವಿವಿಧ ದೇಶಗಳಿಂದ 150 ಕರಾಟೆ ಪಟುಗಳು ಬಂದಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಕರಾಟೆ ಪಟುಗಳು ಈ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. 6 ವರ್ಷದಿಂದ 65 ವರ್ಷದವರೆಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ' ಎಂದರು.

ಇದನ್ನೂ ಓದಿ : ಆತ್ಮರಕ್ಷಣೆಗಾಗಿ ವಿದ್ಯಾರ್ಥಿನಿಯರಿಗೆ ಉಚಿತ ಕರಾಟೆ ತರಬೇತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.