ಶಿವಮೊಗ್ಗ: ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗ ಪ್ರೆಸ್ ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ನನ್ನನ್ನು ಹೋರಾಟಗಾರ ಅಂತ ಗುರುತಿಸಿದ್ದಾರೆ. ನನ್ನ ಹೋರಾಟಕ್ಕೆ ಯಶಸ್ಸು ಸಿಗಬೇಕಾದರೆ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಿ. ರಾಷ್ಟ್ರಮಟ್ಟದಲ್ಲಿ ಬದಲಾವಣೆಯಾದರೆ ವಿಐಎಸ್ಎಲ್ ಅನ್ನು 100ಕ್ಕೆ 100ರಷ್ಟು ಪ್ರಾರಂಭಿಸುತ್ತೇವೆ. ಎಂಪಿಎಂ ರಾಜ್ಯ ಮಟ್ಟದಲ್ಲಿಯೇ ಇರುವುದರಿಂದ ನಾವೇ ಪ್ರಾರಂಭಿಸುತ್ತೇವೆ. ಕಳೆದ 15 ವರ್ಷಗಳಿಂದ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿರಲಿಲ್ಲ. ಈಗ ಮನೆ ಮನೆಗೆ ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬೇರೆಯವರ ಒಡಕಿನಲ್ಲಿ ನಮ್ಮ ಗೆಲುವು ಬಯಸುವುದಿಲ್ಲ: ಬೇರೆಯವರ ಒಡಕಿನಲ್ಲಿ ನಮ್ಮ ಗೆಲುವನ್ನು ನಾವು ಕಾಣುತ್ತಿಲ್ಲ. ಈಶ್ವರಪ್ಪನವರು ತಮ್ಮ ಮಗನಿಗೆ ಸೀಟು ಸಿಗದ ಕಾರಣಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಈಗ ರಾಘವೇಂದ್ರ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನೆಲ್ಲಾ ಜನ ನೋಡುತ್ತಿರುತ್ತಾರೆ ಎಂದರು.
ಗೀತಾ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ಹಕ್ಕಿಲ್ಲ. ಅವರು ಶಿವಮೊಗ್ಗದ ಒಳ್ಳೆಯ ಸಂಸದರಾಗುತ್ತಾರೆ. ಈ ಬಾರಿ ಮತದಾರರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜನ ಗ್ಯಾರಂಟಿಯ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ: ಎರಡನೇ ಹಂತದ ಲೋಕಸಭೆ ಚುನಾವಣೆ: ಮನೆಯಿಂದಲೇ 34,110 ಮಂದಿ ಮತದಾನ - Vote from Home