ಧಾರವಾಡ: ಮದುವೆ ಸಂಭ್ರಮದ ಮಧ್ಯೆ ಧಾರವಾಡದಲ್ಲಿ ಭಾರಿ ಕಳ್ಳತನ ನಡೆದಿದೆ. ಹೊರವಲಯದ ಸ್ಟಾರ್ ಹೊಟೇಲ್ನಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಮಗನ ಮದುವೆಯಲ್ಲಿ ಕಳ್ಳತನವಾಗಿದೆ. 800ಗ್ರಾಂ ಚಿನ್ನ, ವಜ್ರದ 2 ಉಂಗುರ, 60 ಲಕ್ಷ ರೂ. ನಗದು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗಂಗಾಧರಪ್ಪ ಪಟ್ಟಣಶಟ್ಟಿ ಎಂಬುವರ ಕುಟುಂಬದ ವಿವಾಹ ಕಾರ್ಯಕ್ರಮ ಓಶಿಯನ್ ಪರ್ಲ್ ಹೋಟೆಲ್ನಲ್ಲಿತ್ತು. ಆ ಮದುವೆ ಕಾರ್ಯಕ್ರಮದಲ್ಲಿ ಕಳ್ಳತನ ಮಾಡಿ ಪರಾರಿಯಾಗುವ ಕಳ್ಳರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿನ್ನಾಭರಣ ಹಣ ಇರುವುದನ್ನು ಗಮನಿಸಿ ಬ್ಯಾಗ್ ಕದ್ದಿರುವ ಕಳ್ಳರ ಪೈಕಿ ಒಬ್ಬ ಕಳ್ಳ ಬಾಲಕ ಎಂಬ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನ ಪತ್ತೆಗೆ ಜಾಲ ಬೀಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಮೂವರ ಹಣ, ಚಿನ್ನಾಭರಣ ಕದ್ದೊಯ್ದ ಕಳ್ಳರು