ETV Bharat / state

'ಮೋದಿ ಮೋದಿ' ಎಂಬ ಘೋಷಣೆ ಮೂಲಕ ಸಚಿವರಿಗೆ ಸ್ವಾಗತ: ಮುಜುಗರಕ್ಕೊಳಗಾದ ಸಚಿವ ತಂಗಡಗಿ - Shivaraj Tangadagi - SHIVARAJ TANGADAGI

ಕನಕಗಿರಿಯ ಗರುಡೋತ್ಸವದಲ್ಲಿ ಭಾಗಿಯಾಗಲು ಸಚಿವ ಶಿವರಾಜ್ ತಂಗಡಗಿ ಬರುತ್ತಿದ್ದಂತೆ ಉತ್ಸವದಲ್ಲಿ ನೆರೆದ ಅಪಾರ ಜನಸ್ತೋಮದ ಮಧ್ಯೆ ಯುವಕರು, ಮೋದಿ ಮೋದಿ ಎಂದು ಘೋಷಣೆ ಕೂಗಿದರು.

Shivaraj Tangadagi  PM Narendra Modi Minister Shivaraj Tangadagi
ಮೋದಿ ಮೋದಿ ಎಂಬ ಘೋಷಣೆ ಮೂಲಕ ಸಚಿವರಿಗೆ ಸ್ವಾಗತ: ಮುಜುಗರಕ್ಕೆ ಒಳಗಾದ ಶಿವರಾಜ್ ತಂಗಡಗಿ
author img

By ETV Bharat Karnataka Team

Published : Mar 31, 2024, 2:33 PM IST

ಮೋದಿ ಮೋದಿ ಎಂಬ ಘೋಷಣೆ ಮೂಲಕ ಸಚಿವರಿಗೆ ಸ್ವಾಗತ: ಮುಜುಗರಕ್ಕೆ ಒಳಗಾದ ಶಿವರಾಜ್ ತಂಗಡಗಿ

ಗಂಗಾವತಿ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಕನಕಗಿರಿಯ ಕನಕಾಚಲ ದೇವಸ್ಥಾನದ ಜಾತ್ರೆ ಮತ್ತು ರಥೋತ್ಸವದಲ್ಲಿ ಗರುಡೋತ್ಸವದಲ್ಲಿ ಭಾನುವಾರ ಭಾಗವಹಿಸಿದ್ದರು. ಈ ವೇಳೆ ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ತಂಗಡಗಿ ಅವರನ್ನು ಮುಜುಗರಕ್ಕೀಡು ಮಾಡಿದ ಪ್ರಸಂಗ ನಡೆಯಿತು.

ವಿದ್ಯಾರ್ಥಿಗಳು, ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂಬ ಆಕ್ಷೇಪಾರ್ಹ ಹೇಳಿಕೆಯನ್ನು ಸಚಿವ ತಂಗಡಗಿ ಇತ್ತೀಚೆಗೆ ನೀಡಿದ್ದರು. ಆದ್ರೆ, ಇಂದು ಗರುಡೋತ್ಸವದಲ್ಲಿ ಭಾಗಿಯಾಗಲು ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನದ ಮುಂಭಾಗ ಬರುತ್ತಿದ್ದಂತೆಯೇ ಉತ್ಸವದಲ್ಲಿ ನೆರೆದ ಅಪಾರ ಜನಸ್ತೋಮದ ಮಧ್ಯೆ ಇದ್ದ ಯುವಕರು, ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಈ ವೇಳೆ ವಿಚಲಿತರಾದ ತಂಗಡಗಿ ತಮ್ಮ ಬೆಂಬಲಿಗರೊಂದಿಗೆ ಮುಂದೆ ಹೆಜ್ಜೆ ಹಾಕಿದರು.

ಕೇವಲ ಕನಕಗಿರಿ ಉತ್ಸವದಲ್ಲಿ ಮಾತ್ರವಲ್ಲ, ತಂಗಡಗಿ ಹೋಗುತ್ತಿರುವ ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಲ್ಲಿಯೂ ಯುವಕರು ಮೋದಿ ಮೋದಿ ಪರವಾಗಿ ಘೋಷಣೆ ಕೂಗುವ ಮೂಲಕ ಅವರನ್ನು ಮುಜುಗುರಕ್ಕೀಡು ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಹ್ಲಾದ್​ ಜೋಶಿಯವರನ್ನು ಎದುರಿಸಲು ನಾನೊಬ್ಬನೇ ಸಾಕು: ಫಕೀರ ದಿಂಗಾಲೇಶ್ವರ ಸ್ವಾಮೀಜಿ - Prahlad Joshi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.