ಚಾಮರಾಜನಗರ: ಬಿರುಗಾಳಿಯ ರಭಸಕ್ಕೆ ಮನೆಗಳ ಮೇಲ್ಛಾವಣಿ, ಹೆಂಚುಗಳು ಹಾಗೂ ತಗಡಿನ ಶೀಟ್‌ಗಳು ಹಾರಿ ಹೋಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
![Storm effect Chamarajanagar Damage to roofs of houses](https://etvbharatimages.akamaized.net/etvbharat/prod-images/25-03-2024/kn-cnr-01-birugali-mane-av-ka10038_25032024110114_2503f_1711344674_809.jpg)
ಉಮೇಶ್ ಎಂಬವರ ಮನೆಯ ಮೇಲ್ಛಾವಣಿ, ಹೆಂಚು ಹಾಗೂ ಮನೆ ಮೇಲೆ ಹಾದು ಹೋಗಿದ್ದು ವಿದ್ಯುತ್ ಲೈನ್ ಕಿತ್ತು ಹೋಗಿದೆ. ಸಿದ್ದರಾಜು, ಮಲ್ಲಿಗಮ್ಮ, ಗುರುಸಿದ್ದಯ್ಯ ಹಾಗೂ ಗೌರಮ್ಮ ಸೇರಿದಂತೆ ಹಲವರ ಮನೆಗಳ ಮೇಲ್ಛಾವಣಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ಈ ಮನೆಯ ಹೆಂಚುಗಳು ಗಾಳಿಗೆ ಹೊಡೆತಕ್ಕೆ ಸಿಲುಕಿ ಪುಡಿಯಾಗಿವೆ.
![Storm effect Chamarajanagar Damage to roofs of houses](https://etvbharatimages.akamaized.net/etvbharat/prod-images/25-03-2024/kn-cnr-01-birugali-mane-av-ka10038_25032024110114_2503f_1711344674_651.jpg)
ವಿದ್ಯುತ್ ಲೈನ್ ಮೇಲೆ ಮೇಲ್ಛಾವಣಿ ಬಿದ್ದು ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸಿದ್ದಮ್ಮಣಿ, ವೆಂಕಟೇಶ, ಮೀನಾ ಎಂಬವರ ಮನೆಗಳ ಮೂರು ಟಿವಿಗಳು ಸುಟ್ಟು ಹೋಗಿವೆ. ಬಿರುಗಾಳಿಯ ಅವಾಂತರದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಡು ಪ್ರಾಣಿಗಳ ದಾಹ ನೀಗಿಸಲು ನದಿಗೆ ಬೋರ್ವೆಲ್ ನೀರು ಹರಿಸುವ ರೈತ ಪಾಪಣ್ಣ ಭಟ್ಟರು - Borewell Water To River