ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನೂತನ ಕಮಿಷನರ್ ಆಗಿ ಎನ್.ಶಶಿಕುಮಾರ್ ಅಧಿಕಾರ ಸ್ವೀಕರಿಸುತ್ತಿದಂತೆ ರೌಡಿಶೀಟರ್ಗಳಿಗೆ ನಡುಕ ಶುರುವಾಗಿದೆ. ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಮೂರನೇ ದಿನವೇ ಕಾರ್ಯಚರಣೆಗಿಳಿದಿದ್ದು, ರೌಡಿಶೀಟರ್ಗಳು ಹಾಗೂ ಗಾಂಜಾ ಪೆಡ್ಲರ್ಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಪೊಲೀಸ್ ಏರಿಯಾ ಡಾಮಿನೇಷನ್ ಕ್ರಮ ಕೈಗೊಂಡು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ 33 ಜನ ರೌಡಿಶೀಟರ್ಗಳನ್ನೂ, 17 ಜನ ಹಳೇ MO ಗಳನ್ನೂ, 5 ಜನ ಹಳೆಯ ಗಾಂಜಾ ಮಾರಾಟಗಾರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದವರ ಈ ಹಿಂದಿನ ಹಾಗೂ ಇಂದಿನ ನಡವಳಿಕೆ ಹಾಗೂ ಅವರ ಚಟುವಟಿಕೆಯ ಬಗ್ಗೆ ಪರಿಶೀಲನೆ ನಡೆಸಿದ್ದು, ಎಚ್ವರಿಕೆ ನೀಡಿದ್ದಾರೆ.
ಅಲ್ಲದೆ ಸಾರ್ವಜನಿಕ ಸ್ಥಳಗಳಾದ ಲೇ ಔಟ್ಗಳಲ್ಲಿ, ರಸ್ತೆಗಳಲ್ಲಿ ಕುಳಿತು ಮದ್ಯವನ್ನು ಸೇವಿಸುತ್ತಿದ್ದ 24 ಜನರನ್ನೂ ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ 24 ಜನರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ನಕಲಿ ಶೇರು ಟ್ರೇಡಿಂಗ್: ಮಂಗಳೂರಿನ ವ್ಯಕ್ತಿಗೆ 74 ಲಕ್ಷ ರೂ. ವಂಚನೆ - Fake Stock Trading