ETV Bharat / state

ಮೈಸೂರು: ಕೇರಳಿಗನಾದರೂ, ಈ ಲಾಯರ್​ಗೆ ಕನ್ನಡವೇ ಉಸಿರು - LAWYER KANNADA LOVE

ವಕೀಲ ಪಿ.ಪಿ.ಬಾಬುರಾಜ್ ಅವರು ಹುಟ್ಟಿದ್ದು, ಬೆಳೆದಿದ್ದು ಕೇರಳದಲ್ಲಿ, ಓದಿದ್ದು ಎಲ್ಲವೂ ಮಲಯಾಳಂನಲ್ಲಿ, ಆದರೆ, ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ.

Advocate PP Baburaj
ವಕೀಲ ಪಿ.ಪಿ.ಬಾಬುರಾಜ್ (ETV Bharat)
author img

By ETV Bharat Karnataka Team

Published : Nov 1, 2024, 9:02 AM IST

ಮೈಸೂರು: ಬಾಲ್ಯ ಜೀವನ, ಓದಿದ್ದು, ಬೆಳೆದಿದ್ದು ಎಲ್ಲವೂ ಕೇರಳದಲ್ಲಿ. ಆದರೆ, ಕನ್ನಡದವರಂತೆ ಕನ್ನಡ ಭಾಷೆಯನ್ನು ಸೊಗಸಾಗಿ ಮಾತನಾಡುತ್ತಾ, ನ್ಯಾಯಾಲಯದಲ್ಲಿ ಕನ್ನಡದಲ್ಲಿಯೇ ವಾದ ಮಾಡಿ ಹಲವು ಪ್ರಕರಣವನ್ನು ಗೆಲ್ಲುವ ಮೂಲಕ, ಕನ್ನಡಪ್ರೇಮ ಮೆರೆದವರು ವಕೀಲ ಪಿ.ಪಿ.ಬಾಬುರಾಜ್.

ಹೌದು, ಒಂದು ಕಾಲದಲ್ಲಿ ಪತ್ರಕರ್ತನಾಗಿ ಮೈಸೂರಿಗೆ ಎಂಟ್ರಿ ಕೊಟ್ಟ ಬಾಬುರಾಜ್ ಅವರು, ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ವಕೀಲ ವೃತ್ತಿ ಆರಂಭಿಸಿ ಕನ್ನಡದಲ್ಲಿಯೇ 6 ಪುಸ್ತಕಗಳನ್ನು ಬರೆದಿದ್ದಾರೆ.

ಕೇರಳದ ತ್ರಿಶೂರಿನಲ್ಲಿ 1965ರಲ್ಲಿ ಜನಿಸಿದ ಪಿ.ಪಿ.ಬಾಬುರಾಜ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿವರೆಗೂ ಅಲ್ಲಿಯೇ ಓದಿ, ವೀಕ್ಷಣಂ ಮಳಿಯಾಳಂ ದಿನಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಮಲಯಾಳಂ ಎಕ್ಸ್​ಪ್ರೆಸ್​ನಲ್ಲಿ ಕೆಲಸ ಮಾಡಿ, 1991ರಿಂದ 1993ರವರೆಗೆ ಗುಜರಾತಿನಲ್ಲಿ ಒಂದು ಇಂಗ್ಲಿಷ್ ಮಾಸಿಕದಲ್ಲಿ ಉಪಸಂಪಾದಕರಾಗಿದ್ದರು. ಕೊಡಗಿನ ಉಷಾ ಅಂಬ್ರೋಸ್ ಅವರನ್ನು 1992ರಲ್ಲಿ ಭೇಟಿಯಾದ ಬಾಬುರಾಜ್, ಅವರೊಂದಿಗೆ 1994ರಲ್ಲಿ ವಿವಾಹವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮೈಸೂರಿನಲ್ಲಿ ನೆಲೆಸಿದರು.

the-lawyer-from-kerala-has-extreme-love-for-kannada
ಮೈಸೂರು: ಕೇರಳಿಗನಾದರೂ, ಈ ಲಾಯರ್​ಗೆ ಕನ್ನಡವೇ ಉಸಿರು (ETV Bharat)

ಕನ್ನಡ ಒಂದಕ್ಷರವೂ ಗೊತ್ತಿರಲಿಲ್ಲ: ವಿವಾಹವಾಗಿ ಮೈಸೂರಿನಲ್ಲಿಯೇ ನೆಲೆಸಿದ್ದ ಬಾಬುರಾಜ್ ಅವರಿಗೆ ಆಗ ಕನ್ನಡದ ಒಂದಕ್ಷರವೂ ಗೊತ್ತಿರಲಿಲ್ಲ. ಮನೆಯಲ್ಲಿ ಕನ್ನಡ ಪತ್ರಿಕೆಗಳು ಬರುತ್ತಿದ್ದವು. ಅವುಗಳನ್ನು ತಿರುವಿ ಹಾಕುತ್ತಾ, ಜೋರಾಗಿ ಓದುತಿದ್ದರು. ಪತ್ನಿ ಉಷಾ ತಿದ್ದಿ ಹೇಳುತ್ತಿದ್ದರು. ಜೊತೆಯಲ್ಲಿ ಕನ್ನಡ ಸಿನೆಮಾಗಳನ್ನು ನೋಡುತ್ತಾ ಕನ್ನಡಕ್ಕೆ ಮಾರುಹೋದ ಇವರು, ಆರು ತಿಂಗಳಲ್ಲಿ ಕನ್ನಡ ಓದಲು ಬರೆಯಲು ಸ್ವಲ್ಪ ಮಟ್ಟಿಗೆ ಕಲಿತರು. ಆದರೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಲು ವರ್ಷಗಟ್ಟಲೆ ತೆಗೆದುಕೊಂಡರು.

ಇವರ ಪತ್ನಿ ಉಷಾ ಅವರ ಸಂಪಾದಕತ್ವದಲ್ಲಿ ಇಬ್ಬರು ಸೇರಿ ಇಬ್ಬನಿ ಎನ್ನುವ ಮಾಸಪತ್ರಿಕೆ ಆರಂಭಿಸಿದರು. ಅಂದಿನಿಂದ ಕರ್ನಾಟಕದ ಪ್ರಗತಿಪರ ಚಿಂತಕರ ಪರಿಚಯವಾಯಿತು. ಆದರೆ, ಆದಾಯ ಬರದೇ ಪತ್ರಿಕೆ ನಿಲ್ಲಿಸುವ ಹಂತಕ್ಕೆ ಹೋಯಿತು. ಕೆಲಸದ ಒತ್ತಡದ ನಡುವೆಯೂ 2001ರಲ್ಲಿ ಜೆಎಸ್​ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಮುಗಿಸಿ, ವಕೀಲ ವೃತ್ತಿ ಆರಂಭಿಸಿದರು. ಅಂದಿನಿಂದ ಮತ್ತಷ್ಟು ಕನ್ನಡ ಪ್ರೇಮ ಹೆಚ್ಚಾಯಿತು.

ಕೆಲವು ಕಾಲ ಎನ್‌ಜಿಓಗಳಲ್ಲಿ ಕೆಲಸ ಮಾಡಿ, ಅನೇಕ ತರಬೇತಿ ಕಾರ್ಯಕ್ರಮಗಳನ್ನು ಬಹುತೇಕ ಕನ್ನಡದಲ್ಲಿ ನಡೆಸಿಕೊಟ್ಟರು. ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದ್ದು, ಇಬ್ಬನಿ ಪತ್ರಿಕೆಯಲ್ಲಿ ಇದ್ದಾಗ, 2000ದಲ್ಲಿ ಪತ್ರಿಕೆ ಕಾರ್ಯ ನಿಲ್ಲಿಸಿದಾಗ, ಆಂದೋಲನ ಪತ್ರಿಕೆಗೆ ಲೇಖನ ಬರೆಯುತ್ತಿದ್ದರು. ನಂತರ ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಕನ್ನಡ ಜನಮನ ಪತ್ರಿಕೆಯಲ್ಲಿ ವಾರದ ಅಂಕಣ ಬರೆದರು.

ಬಾಲನ್ಯಾಯ ವ್ಯವಸ್ಥೆ: ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ತೊಡಗಿದ್ದಾಗ ಚೊಚ್ಚಲ ಬಾರಿಗೆ ಕನ್ನಡದಲ್ಲಿಯೇ ಮಕ್ಕಳ ಹಕ್ಕುಗಳು ಮತ್ತು ಬಾಲನ್ಯಾಯ ವ್ಯವಸ್ಥೆ ಪುಸ್ತಕ ಬರೆದರು. ನಂತರ, ಪತ್ರಕರ್ತ ಆರ್. ಸ್ವಾಮಿ ಆನಂದ್ ಅವರ ಜೀರೋ ಬಜೆಟ್ ಕೃಷಿ ಬಗೆಗಿನ ಪುಸ್ತಕವನ್ನು ಮಲಯಾಳಂ ಭಾಷೆಗೆ ಅನುವಾದ ಮಾಡಿದರು. ಪ್ರಕೃತಿ ಚಿಕಿತ್ಸಕ ಡಾ. ಜೇಕಬ್ ವಡಕನ್ಚೇರಿ ಅವರ ಮಧುಮೇಹದ ಕುರಿತ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದರು.

ವಕೀಲ ಪಿ.ಪಿ.ಬಾಬುರಾಜ್ ಅವರು ಹುಟ್ಟಿದ್ದು, ಬೆಳೆದಿದ್ದು ಕೇರಳದಲ್ಲಿ, ಓದಿದ್ದು ಎಲ್ಲವೂ ಮಲಯಾಳಂನಲ್ಲಿ, ಆದರೆ, ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ. (ETV Bharat)

ಮಕ್ಕಳ ರಕ್ಷಣೆ: ಯಾರ ಹೊಣೆ: ವಿಷವರ್ತುಲದಲ್ಲಿ ಅನ್ನದಾತ, ಔಷಧಗಳಿಲ್ಲದ ಆರೋಗ್ಯ ಜೀವನ ಪುಸ್ತಕಗಳನ್ನು ಕನ್ನಡದಲ್ಲಿ ಬರೆದರು. ವಿಚಾರವಾದಿ ಸಾಹಿತಿ ಭಗವಾನ್ ಅವರ "ರಾಮಮಂದಿರ ಯಾರಿಗೆ" ಎಂಬ ಪುಸ್ತಕವನ್ನು ಮಲಯಾಳಂಗೆ ಅನುವಾದಿಸಿದ್ದಾರೆ. ನನ್ನ ಕನ್ನಡ ಲೇಖನಗಳ ಸಂಗ್ರಹ "ಮಕ್ಕಳ ರಕ್ಷಣೆ: ಯಾರ ಹೊಣೆ" ಮೈಸೂರಿನ ರೂಪ ಪ್ರಕಾಶನ ಹೊರತಂದಿದೆ. ಕುವೆಂಪು ಕೃತಿಗಳನ್ನು ಮಲಯಾಳಂಗೆ ಅನುವಾದಿಸಬೇಕೆಂಬ ಮಹತ್ವದ ಆಲೋಚನೆ ಕೂಡ ಇವರಿಗಿದೆ. ವಕೀಲನಾಗಿ ಇಂಗ್ಲಿಷ್ ಜೊತೆಗೆ ಕನ್ನಡದಲ್ಲೂ ವಾದ ಮಂಡಿಸುತ್ತೇನೆ. ಹೆಚ್ಚು ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದಿ ಕನ್ನಡಿಗರಾಗಿದ್ದಾರೆ. ಗಂಗೋತ್ರಿಯಲ್ಲಿ ಅಧ್ಯಾಪಕರಿಗೆ ಸವಾಲು ಹಾಕಿ ವಿಷಯವನ್ನು ಕನ್ನಡದಲ್ಲಿ ಅಚ್ಚುಕಟ್ಟಾಗಿ ಬರೆದು ಸೈ ಎನ್ನಿಸಿಕೊಂಡು ಕನ್ನಡ ಭಾಷೆ ಪ್ರೀತಿಯನ್ನು ಸುರಿಯುತ್ತಿದ್ದಾರೆ.

ಇದನ್ನೂ ಓದಿ: ಕುಂದಾನಗರಿಯಲ್ಲಿ ಮಧ್ಯರಾತ್ರಿಯೇ ಮುಗಿಲು ಮುಟ್ಟಿದ ರಾಜ್ಯೋತ್ಸವ ಸಂಭ್ರಮ: ಕುಣಿದು ಕುಪ್ಪಳಿಸಿದ ಸಾವಿರಾರು ಕನ್ನಡಿಗರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.