ETV Bharat / state

ಮುಡಾ ಬದಲಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾದ ಸರ್ಕಾರ: ಮಸೂದೆ ಮಂಡನೆಗೆ ಸಂಪುಟ ಸಭೆ ಅಸ್ತು - MUDA FORMATION

ಮುಡಾ ರದ್ದುಗೊಳಿಸಿ ಅದರ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆ ಮಂಡನೆಗೆ ಅಸ್ತು ಎಂದಿದೆ.

MUDA  BELAGAVI  WINTER SESSION 2024  ಮುಡಾ ಪ್ರಾಧಿಕಾರ ರಚನೆ
ವಿಧಾನ ಸೌಧ, ಬೆಂಗಳೂರು (IANS)
author img

By ETV Bharat Karnataka Team

Published : Dec 14, 2024, 6:41 AM IST

ಬೆಳಗಾವಿ: ನಿವೇಶನ ಹಂಚಿಕೆ ಹಗರಣಗಳಿಂದ ಕುಖ್ಯಾತಿಗೆ ಒಳಗಾಗಿರುವ ಮುಡಾಗೆ ರಾಜ್ಯ ಸರ್ಕಾರ ದೊಡ್ಡ ಸರ್ಜರಿ ಮಾಡಿದೆ. ರಾಜ್ಯ ಸರ್ಕಾರ ಇದೀಗ ಮುಡಾ ರದ್ದುಗೊಳಿಸಿ ಅದರ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದೆ. ಆ ನಿಟ್ಟಿನಲ್ಲಿ ಶುಕ್ರವಾರ ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆ ಮಂಡನೆಗೆ ಅಸ್ತು ಎಂದಿದೆ.

ಬಿಡಿಎ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ: ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ, ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವನ್ನು ಬಿಡಿಎ ಮಾದರಿಯಲ್ಲಿ ರಚಿಸಲು ತೀರ್ಮಾನಿಸಿದೆ. ಆ ಮೂಲಕ ಪ್ರಸಕ್ತ ಇರುವ ಮುಡಾ ರದ್ದಾಗಲಿದೆ. ಮುಡಾದ ಎಲ್ಲಾ ಅಧಿಕಾರ, ಬಾಧ್ಯತೆ, ಹೊಣೆಗಾರಿಕೆ, ಆಸ್ತಿಗಳು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಲಿದೆ.

ಶುಕ್ರವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ. ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆಯಾಗಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಮುಡಾ ಭಾರಿ ವಿವಾದ ಸೃಷ್ಟಿಸಿದೆ. ಸುಮಾರು 1,500 ಪರ್ಯಾಯ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇನ್ನಷ್ಟು ಬಲ ತುಂಬುವ ಪ್ರಯತ್ನಕ್ಕೆ ಮುಂದಾಗಿದೆ.

ಸ್ವತಂತ್ರ ತೀರ್ಮಾನ ಕೈಗೊಳ್ಳಲು ಅವಕಾಶ: ಮುಡಾ ಇಷ್ಟು ದಿನ ನಗರಾಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿತ್ತು. ಆದರೆ ಇನ್ನು ಮುಂದೆ ನಗರಾಭಿವೃದ್ಧಿ ಇಲಾಖೆಯಡಿ ಬಂದರೂ, ಬಿಡಿಎಯಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸ್ವಾತಂತ್ರ್ಯ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಲು ಮುಂದಾಗಿದೆ. ಬಿಡಿಎಯಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯವ್ಯಾಪ್ತಿ ವಿಸ್ತರಿಸಿ ಕೆಲ ಹೆಚ್ಚುವರಿ ಅಧಿಕಾರ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕವಾಗಿ ಹೊಸ ಅಧಿನಿಯಮ ರಚಿಸಲು ಮಸೂದೆ ಮಂಡಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ರಾಜ್ಯದಲ್ಲಿನ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅನ್ವಯವಾಗುವ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987ರ ಅಡಿ ಕಾರ್ಯನಿರ್ವಹಿಸುತ್ತಿದೆ.

2011ನೇ ಸಾಲಿನ ಜನಗಣತಿಯಂತೆ ಮೈಸೂರು ನಗರದ ಜನಸಂಖ್ಯೆಯು 8,93,062 ಇದ್ದು, ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ಜನಸಂಖ್ಯೆ 16,96,577 ಇರುತ್ತದೆ. ಪ್ರಸ್ತುತದಲ್ಲಿ ಮೈಸೂರು ನಗರ 10 ಲಕ್ಷ ಜನಸಂಖ್ಯೆ ಹೊಂದುವ ಸಾಧ್ಯತೆ ಇದ್ದು, ಸದರಿ ನಗರ ಮೆಟ್ರೋಪಾಲಿಟನ್ ನಗರದ ಎಲ್ಲ ಲಕ್ಷಣಗಳನ್ನು ಹೊಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ, ಆಯವ್ಯಯ ಮತ್ತು ಇತರೆ ಕಾರ್ಯಚಟುವಟಿಕೆಗಳು ವಿಸ್ತಾರವಾಗಿ ವಿಸ್ತರಿಸಿಕೊಂಡಿರುತ್ತದೆ. ಅತಿ ವೇಗ ಮತ್ತು ಬೃಹತ್ ಪ್ರಮಾಣದ ಬೆಳವಣಿಗೆಗಳಿಂದಾಗಿ ಪ್ರಾಧಿಕಾರ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಪ್ರತ್ಯೇಕ ಅಧಿನಿಯಮ ರಚಿಸಲು ಸರ್ಕಾರ ತೀರ್ಮಾನಿಸಿದೆ.

ಮೈಸೂರು ನಗರ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿದ್ದು, ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಹಾಗೂ ಮೈಸೂರು ನಗರದ ಜನಸಂಖ್ಯೆಯೂ ಸಹ ಅತಿ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕವಾಗಿ ಹೊಸ ಅಧಿನಿಯಮವನ್ನು ರಚಿಸಲು ಪ್ರಸ್ತಾಪಿಸಿ ಕರಡು ಅಧಿನಿಯಮವನ್ನು ಸಿದ್ಧಪಡಿಸಲಾಗಿದೆ.

ಕರಡು ಮಸೂದೆಯಲ್ಲೇನಿದೆ?: ಕರಡು ಮಸೂದೆಯಂತೆ ಮೈಸೂರು ಸ್ಥಳೀಯ ಯೋಜನಾ ಪ್ರದೇಶ ರಚಿಸಲಾಗುವ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬರಲಿದೆ. ಪ್ರಾಧಿಕಾರ ಅಧ್ಯಕ್ಷರನ್ನು ಹೊಂದಿರಲಿದೆ. ಓರ್ವ ಹಣಕಾಸು ಸದಸ್ಯ, ಓರ್ವ ಇಂಜಿನಿಯರ್, ಒಬ್ಬ ಟೌನ್ ಪ್ಲಾನರ್, ವಾಸ್ತುಶಿಲ್ಪ ಅನುಭವ ಇರುವ ವ್ಯಕ್ತಿ, ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ, ಒಬ್ಬ ಶಾಸಕ, ಕಾರ್ಯದರ್ಶಿ, ಎಸ್​ಸಿ, ಎಸ್​ಟಿ ಸಮುದಾಯದ ತಲಾ ಒಬ್ಬರು, ಮಹಿಳೆಯೊಬ್ಬರು ಸೇರಿ ನಾಲ್ವರು ಪ್ರಾಧಿಕಾರದ ಸದಸ್ಯರಾಗಿಲಿದ್ದಾರೆ.

ಪ್ರಾಧಿಕಾರ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬಹುದಾಗಿದೆ. ಜೊತೆಗೆ ಸರ್ಕಾರದ ಪೂರ್ವಾನುಮತಿ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದಾಗಿದೆ. ಭೂ ಸ್ವಾಧೀನ, ಸುಧಾರಣಾ ತೆರಿಗೆ ವಿಧಿಸುವ ಅಧಿಕಾರ, ಭೂಮಿ ಮತ್ತು ಕಟ್ಟಡಗಳಿಗೆ ತೆರಿಗೆ ವಿಧಿಸುವುದು, ರಸ್ತೆ ನಿರ್ವಹಣೆ, ಬಡಾವಣೆ ನಿರ್ಮಾಣ ಸೇರಿದಂತೆ ಕೆಲ ಹೆಚ್ಚುವರಿ ಅಧಿಕಾರವನ್ನು ನೀಡಲಾಗಿದೆ.

ಇದನ್ನೂ ಓದಿ: ಸಿಎಂ ವಿರುದ್ಧ ಮತ್ತೊಂದು ದೂರು ದಾಖಲಿಸಲು ಲೋಕಾಯುಕ್ತರಿಗೆ ಸ್ನೇಹಮಯಿ ಕೃಷ್ಣ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.