ETV Bharat / state

ಪ್ರಯಾಣದ ವೇಳೆ ಯುವತಿ ಅಸ್ವಸ್ಥ: ಆಸ್ಪತ್ರೆಯತ್ತ ಬಸ್ ಚಲಾಯಿಸಿ ಚಿಕಿತ್ಸೆಗೆ ನೆರವಾದ ಚಾಲಕ, ನಿರ್ವಾಹಕ - Driver Conductor Shows Humanity - DRIVER CONDUCTOR SHOWS HUMANITY

ಅಸ್ವಸ್ಥಗೊಂಡ ಯುವತಿಗಾಗಿ ಆಸ್ಪತ್ರೆಯತ್ತ ಬಸ್‌ ಚಲಾಯಿಸಿ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದ ಘಟನೆ ಉಡುಪಿಯಲ್ಲಿ ನಡೆದಿದೆ.

ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ ಚಾಲಕ - ನಿರ್ವಾಹಕ!
ಮಾನವೀಯತೆ ಮೆರೆದ ಖಾಸಗಿ ಬಸ್ ನಿರ್ವಾಹಕ ಮತ್ತು ಚಾಲಕ (ETV Bharat)
author img

By ETV Bharat Karnataka Team

Published : Aug 5, 2024, 5:31 PM IST

ಉಡುಪಿ: ಇಲ್ಲಿನ ಖಾಸಗಿ ಬಸ್​ ಚಾಲಕ ಹಾಗೂ ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ. ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಿಕಿತ್ಸೆಗೆ ನೆರವಾಗಿದ್ದಾರೆ.

ಇಂದು ಬೆಳಗ್ಗೆ ಶಿರ್ವದಿಂದ ಬರುತ್ತಿದ್ದ ನವೀನ್ ಎಂಬ ಖಾಸಗಿ ಬಸ್ ಉಡುಪಿಯ ಹಳೆ ತಾಲೂಕು ಕಚೇರಿ ಬಳಿ ತಲುಪಿದಾಗ ಯುವತಿಯೊಬ್ಬಳು ಬಸ್ಸಿನಲ್ಲೇ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದರು. ಕೂಡಲೇ ಎಚ್ಚೆತ್ತ ಚಾಲಕ ಶಶಿಕಾಂತ್‌ ಮತ್ತು ನಿರ್ವಾಹಕ ಸಲೀಂ ತಕ್ಷಣ ಬಸ್ಸನ್ನು ನೇರವಾಗಿ ಹತ್ತಿರದ ಡಾ.ಟಿ.ಎಂ.ಎ.ಪೈ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ, ಆಕೆಯ ಮನೆಯವರಿಗೆ ಮಾಹಿತಿ ನೀಡಿ ಅವರು ಬರುವವರೆಗೂ ಅಲ್ಲೇ ಇದ್ದು ಸಹಕರಿಸಿದ್ದಾರೆ. ಬಸ್‌ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದರೆ ಕಠಿಣ ಕ್ರಮ; 72 FIR ದಾಖಲಿಸಿದ ಪೊಲೀಸರು - Drunk Driving Cases

ETV Bharat Logo

Copyright © 2025 Ushodaya Enterprises Pvt. Ltd., All Rights Reserved.