ETV Bharat / state

ನೀರಿನ ಬಕೆಟ್​ಗೆ​ ಬಿದ್ದು ಆರೋಗ್ಯ ಸ್ಥಿತಿ ಗಂಭೀರ: 11 ತಿಂಗಳ ಮಗು ಜೀವ ಉಳಿಸಿದ ವೈದ್ಯ, ಆಂಬ್ಯುಲೆನ್ಸ್​ ಚಾಲಕನಿಗೆ ಸನ್ಮಾನ - Baby Life Saved - BABY LIFE SAVED

ಆಟವಾಡುವಾಗ ಆಕಸ್ಮಿತವಾಗಿ ನೀರಿನ ಬಕೆಟ್​ಗೆ ಬಿದ್ದು ಅಪಾಯಕ್ಕೊಳಗಾದ ಮಗುವಿಗೆ ಡಾಕ್ಟರ್ ಮತ್ತು ಆಂಬ್ಯುಲೆನ್ಸ್​ ಚಾಲಕ ಮರುಜನ್ಮ ನೀಡಿ ಪ್ರಶಂಸೆಗೆ ಭಾಜನರಾಗಿದ್ದಾರೆ.

ಮಗುವಿಗೆ ಮರುಜನ್ಮ ಕೊಟ್ಟ ವೈದ್ಯ, ಆಂಬ್ಯುಲೆನ್ಸ್​ ಚಾಲಕ
ಮಗುವಿಗೆ ಮರುಜನ್ಮ ಕೊಟ್ಟ ವೈದ್ಯ, ಆಂಬ್ಯುಲೆನ್ಸ್​ ಚಾಲಕ (ETV Bharat)
author img

By ETV Bharat Karnataka Team

Published : Sep 29, 2024, 7:05 PM IST

Updated : Sep 29, 2024, 9:44 PM IST

ಉಡುಪಿ: ಆಟವಾಡುವಾಗ ಆಕಸ್ಮಿಕವಾಗಿ ನೀರಿನ ಬಕೆಟ್​ಗೆ ಬಿದ್ದು ಅಪಾಯಕ್ಕೊಳಗಾದ ಮಗುವನ್ನು ಡಾಕ್ಟರ್ ಮತ್ತು ಆಂಬ್ಯುಲೆನ್ಸ್​ ಚಾಲಕ ಬದುಕಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಂಡ್ಲೂರಿನ ಮೌಲಾನಾ ಕಲಿಮುಲ್ಲಾ ಎಂಬವರ 11 ತಿಂಗಳ ಮಗು ಬಾತ್​​ರೂಮ್​ನಲ್ಲಿ ನೀರಾಟ ಆಡುತ್ತಿದ್ದಾಗ ನೀರಿನ ಬಕೆಟ್​ ಒಳಗೆ ಬಿದ್ದು ಉಸಿರುಗಟ್ಟಿದ್ದರಿಂದ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತ್ತು. ತಕ್ಷಣ ಮನೆಯವರು ಕಂಡ್ಲೂರಿನ ಮಂಜುಶ್ರೀ ಕ್ಲಿನಿಕ್​ಗೆ ಮಗುವನ್ನು ಕರೆದೊಯ್ದಿದ್ದರು. ಅಲ್ಲಿನ ಡಾ. ಪ್ರಶಾಂತ್ ಶೆಟ್ಟಿ ತುರ್ತು ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್​ನಲ್ಲಿ ಮಣಿಪಾಲ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು.

ಮಗು ಜೀವ ಉಳಿಸಿದ ವೈದ್ಯ, ಆಂಬ್ಯುಲೆನ್ಸ್​ ಚಾಲಕನಿಗೆ ಸನ್ಮಾನ (ETV Bharat)

ಚಾಲಕ ಅಯ್ಮಾನ್, ಆಂಬ್ಯುಲೆನ್ಸ್​ ಅನ್ನು ಶರವೇಗದಲ್ಲಿ ಮಣಿಪಾಲ ಆಸ್ಪತ್ರೆಗೆ ತಲುಪಿಸಿದ್ದರು. ಹೆಚ್ಚಿನ ಚಿಕಿತ್ಸೆಯ ನಂತರ ಕಂದಮ್ಮ ಸಂಪೂರ್ಣ ಚೇತರಿಸಿಕೊಂಡು ತಾಯಿಯ ಮಡಿಲು ಸೇರಿದೆ. ಮಗುವಿಗೆ ಮರುಜನ್ಮ ಕೊಟ್ಟ ಡಾ. ಪ್ರಶಾಂತ್ ಶೆಟ್ಟಿ ವಕ್ವಾಡಿ ಮತ್ತು ಆಂಬ್ಯುಲೆನ್ಸ್ ಚಾಲಕ ಅಯ್ಮಾನ್​ ಅವರನ್ನು ಮಗುವಿನ ಪೋಷಕರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ಬಲಕ್ಕೆ ಹೃದಯ, ಎಡಕ್ಕೆ ಲಿವರ್​: ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದ ಬೆಳಗಾವಿಯ ವಿಶಿಷ್ಟ ಮಹಿಳೆ! - WORLD HEART DAY

Last Updated : Sep 29, 2024, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.