ETV Bharat / state

ಬೆಂಗಳೂರು: ಹೀಲಿಯಂ ಅನಿಲ ಸೇವಿಸಿ ಟೆಕ್ಕಿ ಆತ್ಮಹತ್ಯೆ - Techie Commits Suicide - TECHIE COMMITS SUICIDE

ಸಾಫ್ಟ್​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬ ಹೀಲಿಯಂ ಅನಿಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

TECHIE COMMITS SUICIDE
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Aug 20, 2024, 8:34 PM IST

ಬೆಂಗಳೂರು: ಬಲೂನ್​ಗೆ ಬಳಸುವ ಹೀಲಿಯಂ ಅನಿಲ ಸೇವಿಸಿ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾಸನದ ಸಕಲೇಶಪುರ ಮೂಲದ ಎಸ್.ಯಾಜ್ನಿಕ್ (24) ಮೃತ ಯುವಕ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯಾಜ್ನಿಕ್, ಕಳೆದ ನಾಲ್ಕು ವರ್ಷಗಳಿಂದ ಮನೆಯಿಂದ ಕೆಲಸ ಮಾಡುತ್ತಿದ್ದ. ಪರಿಸ್ಥಿತಿಗೆ ಅನುಗುಣವಾಗಿ 15 ಅಥವಾ ತಿಂಗಳಿಗೊಮ್ಮೆ ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಕಂಪೆನಿಯ ಕಚೇರಿಗೆ ಭೇಟಿ ನೀಡುತ್ತಿದ್ದ. ಎಂಟೆಕ್ ಪರೀಕ್ಷೆ ಬರೆಯುವುದಾಗಿ ಹೇಳಿ ಆಗಸ್ಟ್ 16ರಂದು ಬೆಳಗ್ಗೆ ನಗರಕ್ಕೆ ಬಂದಿದ್ದ. ನೀಲಾದ್ರಿ ರಸ್ತೆಯಲ್ಲಿರುವ ಹೋಟೆಲ್​​ನ ಕೊಠಡಿಯಲ್ಲಿ ಉಳಿದುಕೊಂಡಿದ್ದನು.

ಇಂದು ಮಧ್ಯಾಹ್ನವಾದರೂ ಹೋಟೆಲ್​​ ಕೊಠಡಿಯಿಂದ ಹೊರಬರದಿದ್ದಾಗ ಅನುಮಾನಗೊಂಡ ಸಿಬ್ಬಂದಿ, ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ನಕಲಿ ಕೀ ಬಳಸಿ ಡೋರ್ ಓಪನ್ ಮಾಡಿ ಒಳನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಪರಿಶೀಲಿಸಿದಾಗ ಮುಖವನ್ನು ಕಪ್ಪು ಪ್ಲಾಸ್ಟಿಕ್ ಕವರ್​​ನಿಂದ ಮುಚ್ಚಿ, ಪೈಪ್ ಮೂಲಕ ಹೀಲಿಯಂ ಅನಿಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಲಸ ಸಿಗದೆ ಹತಾಶೆ: ಮೆಕ್ಯಾನಿಕಲ್ ಇಂಜಿನಿಯರ್​ ಆತ್ಮಹತ್ಯೆಗೆ ಶರಣು - Mechanical Engineering Suicide

ETV Bharat Logo

Copyright © 2025 Ushodaya Enterprises Pvt. Ltd., All Rights Reserved.