ETV Bharat / state

ಜಂಬೂಸವಾರಿಗೆ ಮೆರುಗು ನೀಡಲು ಸಜ್ಜಾಗುತ್ತಿರುವ ಸ್ತಬ್ಧಚಿತ್ರಗಳು: ಈ ಬಾರಿಯ ವಿಶೇಷತೆಗಳೇನು? - DASARA TABLEAUX

ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮೆರಗು ನೀಡುವ ಸ್ತಬ್ಧಚಿತ್ರಗಳ ತಯಾರಿ ಭರದಿಂದ ಸಾಗುತ್ತಿದೆ.

ಜಂಬೂಸವಾರಿಗೆ ಮೆರಗು ನೀಡಲಿ ಸಜ್ಜಾಗುತ್ತಿರುವ ಸ್ತಬ್ಧಚಿತ್ರಗಳು
ಜಂಬೂಸವಾರಿಗೆ ಮೆರಗು ನೀಡಲಿ ಸಜ್ಜಾಗುತ್ತಿರುವ ಸ್ತಬ್ಧಚಿತ್ರಗಳು (ETV Bharat)
author img

By ETV Bharat Karnataka Team

Published : Oct 9, 2024, 5:14 PM IST

ಮೈಸೂರು: ದಸರಾ ಜಂಬೂಸವಾರಿಗೆ ಮೆರುಗು ನೀಡುವ ಸ್ತಬ್ಧಚಿತ್ರಗಳ ತಯಾರಿ ಭರದಿಂದ ಸಾಗುತ್ತಿದೆ. ನಾಡಿನ ಕಲೆ, ವಾಸ್ತುಶಿಲ್ಪ, ಪ್ರವಾಸೋದ್ಯಮ, ಜಾನಪದ, ಸಮಾನತೆ, ಭ್ರಾತೃತ್ವ ಹಾಗೂ ಸಂವಿಧಾನದ ಮಹತ್ವ ಮೊದಲಾದ ಪರಿಕಲ್ಪನೆ ಇಟ್ಟುಕೊಂಡು ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಬಾರಿ 31 ಜಿಲ್ಲೆಗಳಿಂದ 31 ಹಾಗೂ ವಿವಿಧ ಇಲಾಖೆಗಳ 19 ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿವೆ.

ಈ ಕುರಿತು ಸ್ತಬ್ಧಚಿತ್ರಗಳ ಉಪ ಸಮಿತಿ ಅಧ್ಯಕ್ಷ ಪ್ರಶಾಂತ್‌ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಈ ಎಲ್ಲಾ ಸ್ತಬ್ಧಚಿತ್ರಗಳು ನಗರದ ಬಂಡಿಪಾಳ್ಯ ಎಪಿಎಂಸಿ ಯಾರ್ಡ್​ನಲ್ಲಿ ತಯಾರಾಗುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೂ ನಿರ್ಮಿಸಲಾದ ಸುಮಾರು 2,500 ಕಿ.ಮೀ. ಉದ್ದದ ಮಾನವ ಸರಪಳಿ ಸ್ತಬ್ಧಚಿತ್ರ, ಭಾರತೀಯ ರೈಲ್ವೆ ಪ್ರಗತಿ ನೋಟ ಸ್ತಬ್ಧಚಿತ್ರ, ಸಿಎಫ್​ಟಿಆರ್​ಐನ ಹೊಸ ಆವಿಷ್ಕಾರಗಳು, ಮೈಸೂರು ರೇಷ್ಮೆ ಸೀರೆ, ಶ್ರೀಗಂಧದ ಉತ್ಪನ್ನಗಳು, ನಂದಿನಿ ಹಾಲಿನ ಉತ್ಪನ್ನಗಳ ಕುರಿತ ಸ್ತಬ್ಧಚಿತ್ರಗಳು. ಪ್ರವಾಸೋದ್ಯಮ ಇಲಾಖೆ ಹಾಗೂ ಜನಸ್ನೇಹಿ ಪೊಲೀಸ್​, ಸೈಬರ್‌ ಕ್ರೈಂ ಬಗ್ಗೆ ಅರಿವು ಮೂಡಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿವೆ" ಎಂದು ತಿಳಿಸಿದರು.

ಜಂಬೂಸವಾರಿಗೆ ಮೆರುಗು ನೀಡಲು ಸಜ್ಜಾಗುತ್ತಿರುವ ಸ್ತಬ್ಧಚಿತ್ರಗಳು (ETV Bharat)

"31 ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯ ಹೊಯ್ಸಳರ ಕಾಲದ ಬೇಲೂರು ಚೆನ್ನಕೇಶವ ಹಾಗೂ ಹಳೇಬೀಡಿನ ದೇವಾಲಯ, ಕೋಲಾರದ ಕೋಟಿ ಲಿಂಗೇಶ್ವರ ದೇವಾಲಯ, ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ, ಬೀದರ್​ನ ಚನ್ನಪಟ್ಟಣ ಬಸವ ದೇವರು, ಚಾಮರಾಜನಗರದ ಸೋಲಿಗರ ಸೊಗಡು, ಕೊಡಗಿನ ಹಾರಂಗಿ ಜಲಾಶಯದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ" ಎಂದರು.

"ಇನ್ನು ಮೈಸೂರು ಜಿಲ್ಲೆಯ ಸಂಸತ್‌ ಭವನ, ಅನುಭವ ಮಂಟಪ, ಬುದ್ಧ, ಬಸವ, ಅಂಬೇಡ್ಕರ್​ ಪ್ರತಿಕೃತಿಗಳು, ಉತ್ತರ ಕನ್ನಡದ ಮುರುಡೇಶ್ವರ ದೇವಸ್ಥಾನ ಹಾಗೂ ಶಿವನ ಸ್ತಬ್ಧಚಿತ್ರಗಳನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ನೋಡಬಹುದಾಗಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು ದಸರಾ: ಅರಮನೆ ಮುಂಭಾಗ ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.