ETV Bharat / state

ಬಾಗಲಕೋಟೆ: ನೋವು ನಿವಾರಣೆ ಹೆಸರಲ್ಲಿ ಭಕ್ತರಿಗೆ ಕೊಡಲಿ ಏಟು ಕೊಡುತ್ತಿದ್ದ ಪೂಜಾರಿ ಅರೆಸ್ಟ್ - priest arrested - PRIEST ARRESTED

ಬೆನ್ನು, ಹೊಟ್ಟೆ ನೋವು ಎಂದು ಬರುತ್ತಿದ್ದ ಭಕ್ತರಿಗೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಿದ್ದ ಪೂಜಾರಿ ವಿರುದ್ಧ ಮೂಢನಂಬಿಕೆ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ನೋವು ನಿವಾರಣೆ ಹೆಸರಲ್ಲಿ ಭಕ್ತರಿಗೆ ಕೊಡಲಿ ಏಟು ಕೊಡುತ್ತಿದ್ದ ಪೂಜಾರಿ ಅರಸ್ಟೆ
ನೋವು ನಿವಾರಣೆ ಹೆಸರಲ್ಲಿ ಭಕ್ತರಿಗೆ ಕೊಡಲಿ ಏಟು ಕೊಡುತ್ತಿದ್ದ ಪೂಜಾರಿ ಅರಸ್ಟೆ (ETV Bharat)
author img

By ETV Bharat Karnataka Team

Published : Jul 14, 2024, 5:30 PM IST

ಎಸ್​ಪಿ ಅಮರನಾಥ ರೆಡ್ಡಿ (ETV Bharat)

ಬಾಗಲಕೋಟೆ: ಬೆನ್ನು, ಹೊಟ್ಟೆ, ಮೈ ಕೈ ನೋವು ಎಂದು ಬರುವ ಭಕ್ತರಿಗೆ ಕೊಡಲಿಯಿಂದ ಹೊಡೆದು ನೋವು ನಿವಾರಿಸುವುದಾಗಿ ಮೌಢ್ಯಾಚರಣೆ ಮಾಡುತ್ತಿದ್ದ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿ ಲಿಂಗೇಶ್ವರ ದೇವಸ್ಥಾನದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಕ್ಕಪ್ಪ ಗಡ್ಡದ್ ಬಂಧಿತ ಪೂಜಾರಿ.

ಈ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಲೋಕಾಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಅರ್ಚಕ ಜಕ್ಕಪ್ಪ ಗಡ್ಡದ್ ಅವರ ತೋಟದ ಮನೆಗೆ ಪ್ರತಿ ಭಾನುವಾರ ಹೊಟ್ಟೆ, ಬೆನ್ನು, ಕಾಲು ನೋವು ಎಂದು ಭಕ್ತರು ಬರುತ್ತಾರೆ. ಹೊಟ್ಟೆ ನೋವು ಇದ್ದಂತಹವನ್ನು ನೆಲದ ಮೇಲೆ ಮಲಗಿಸಿ ಹೊಟ್ಟೆಯ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾರೆ. ಬೆನ್ನು ನೋವು ಇದ್ದವರಿಗೆ ಬೆನ್ನಿನ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾರೆ. ಅರ್ಚಕ ತನ್ನ ಸ್ವಂತ ಲಾಭಕ್ಕಾಗಿ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಅವರು ಕೊಡಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಇದನ್ನು ಗಮನಿಸಿದ ಲೋಕಾಪುರ ಠಾಣೆಯ ಪಿಎಸ್​ಐ, ಮೂಢನಂಬಿಕೆ ನಿಷೇಧ ಕಾಯಿದೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

​ಈ ರೀತಿ 12 ವರ್ಷಗಳಿಂದ ಮಾಡುತ್ತಿರುವುದಾಗಿ ಪೂಜಾರಿ ಹೇಳಿದ್ದಾರೆ. ಕೊಡಲಿಯಿಂದ ಗಾಯಗೊಂಡ ಯಾರಾದರೂ ಪ್ರಕರಣ ನೀಡಿದರೆ ದಾಖಲಿಸಿಕೊಳ್ಳುತ್ತೇವೆ. ಜನರು ಇಂತಹ ಮೂಢನಂಬಿಕೆಗೆ ಮಾರು ಹೋಗಬಾರದು ಎಂದು ಎಸ್​ಪಿ ಮನವಿ ಮಾಡಿದರು.

ಇದನ್ನೂ ಓದಿ: ಉಡುಪಿ: ಅಣ್ಣಪ್ಪ ಪಂಜುರ್ಲಿ ದೈವದ ಮೊರೆ ಹೋದ ಪಾಕಿಸ್ತಾನ ಮೂಲದ ಕುಟುಂಬ - PAKISTAN BASED FAMILY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.