ETV Bharat / state

ಒಂದು ಹನುಮಧ್ವಜ ಇಳಿಸಿದರೆ ಸಾವಿರಾರು ಧ್ವಜ ಹಾರಿಸಬೇಕಾಗುತ್ತದೆ: ಸರ್ಕಾರಕ್ಕೆ ಸುನೀಲ್‍ಕುಮಾರ್ ಎಚ್ಚರಿಕೆ - ಸುನೀಲ್‍ಕುಮಾರ್

ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಸುನೀಲ್‍ಕುಮಾರ್
ಸುನೀಲ್‍ಕುಮಾರ್
author img

By ETV Bharat Karnataka Team

Published : Jan 28, 2024, 4:25 PM IST

ಬೆಂಗಳೂರು : ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಶನಿವಾರ ರಾತ್ರಿ ಹನುಮಧ್ವಜ ಹಾರಿಸಲಾಗಿತ್ತು. ಆದರೆ ಪೊಲೀಸರನ್ನು ಬಳಸಿ ಧ್ವಜ ಕೆಳಗೆ ಇಳಿಸಿದ್ದು ಖಂಡನೀಯ. ಒಂದು ಧ್ವಜ ಇಳಿಸಿದರೆ, ಸಾವಿರಾರು ಧ್ವಜ ಹಾರಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಅವರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಗೃಹ ಇಲಾಖೆ ನೇರ ಹೊಣೆ ಆಗಲಿದೆ ಅಂತ ಸರ್ಕಾರಕ್ಕೆ ಎಚ್ಚರಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ದೊಡ್ಡ ವಿವಾದ ಮಾಡಲು ಹೊರಟಿದ್ದಾರೆ. ಇದು ಆಕ್ಷೇಪಾರ್ಹ. ಗ್ರಾಮದ ಜನ ಒಗ್ಗಟ್ಟಾಗಿ ಹನುಮ ಧ್ವಜ ಹಾರಿಸಲು ಮುಂದಾಗಿದ್ದಾರೆ. ಅಲ್ಲದೆ, ಸ್ಥಳೀಯರ ಮೇಲೆ ಲಾಠಿ ಪ್ರಹಾರ ನಡೆದಿದೆ. ಏಕೆ ಇಳಿಸಲಾಗುತ್ತಿದೆ ಎಂದು ಕೇಸರಿ ವಿರೋಧಿ ಸರ್ಕಾರ ಸ್ಪಷ್ಟಪಡಿಸಬೇಕು. ಸ್ವತಃ ಸಿದ್ದರಾಮಯ್ಯ ನನಗೆ ಕೇಸರಿ ಕಂಡರೆ ಆಗಲ್ಲ ಅಂದಿದ್ದರು ಎಂದು ಕಿಡಿಕಾರಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಹಜವಾಗಿ ಎಲ್ಲರ ಮನೆ ಮೇಲೆ ಕೇಸರಿ ಧ್ವಜ ಹಾರಿಸಲಾಗಿತ್ತು. ಜೊತೆಗೆ ನಂದಾ ದೀಪ ಹಚ್ಚಿದ್ದರು. ಆ ಗ್ರಾಮದಲ್ಲಿ ಕೂಡ ಧ್ವಜ ಹಾರಿಸಿ, ರಾಮನ ಫೋಟೋ ಹಾಕಿ ಪೂಜೆ ಮಾಡಿದ್ದಾರೆ. ಇದನ್ನು ಸರ್ಕಾರ ಸಹಿಸುತ್ತಿಲ್ಲ. ಇನ್ಯಾವುದನ್ನು ಸಹಿಸ್ತೀರಾ? ಎಂದು ಕೇಳಿದ್ದಾರೆ.

ಹಿಂದೂ ಧ್ವಜ ಹಾರಿಸೋದನ್ನು ತಡೆಯುತ್ತೀರಾ? ರಾಜ್ಯದ ಎಲ್ಲೆಂದರಲ್ಲಿ ಹಸಿರು ಧ್ವಜ ಹಾರಾಡುತ್ತಿದೆ. ಅದನ್ನು ನಾವು ತೋರಿಸುತ್ತೇವೆ. ತೆರವು ಕ್ರಮ ಕೈಗೊಳ್ಳುತ್ತಿರಾ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಅನಧಿಕೃತ ಧ್ವಜ ತೆರವಿಗೆ ಸರ್ಕಾರದ ನಿರ್ದೇಶನ, ಕ್ರಮ ಏನಿದೆ? ಎಂದು ಸ್ಪಷ್ಟಪಡಿಸುವಂತೆ ಸುನೀಲ್​ ಕುಮಾರ್ ಆಗ್ರಹಿಸಿದ್ದಾರೆ.

ಒಂದು ಕಡೆ ಕಾಂಗ್ರೆಸ್ ನಾಯಕರು ಅಯೋಧ್ಯೆಗೆ ಹೋಗಲ್ಲ ಅಂತಾರೆ. ಮತ್ತೊಂದು ಕಡೆ ಪೊಲೀಸರನ್ನು ಬಳಸಿ ಕೇಸರಿ ಧ್ವಜ ಇಳಿಸುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ. ನಮ್ಮ ನಾಯಕರು ಮಂಡ್ಯ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಊರಿನ ಜನ ಸ್ವಯಂಪ್ರೇರಿತರಾಗಿ ಧ್ವಜ ಹಾರಿಸಿದ್ದಾರೆ. ಸರ್ಕಾರ ಕೇಸರಿ ವಿರೋಧಿ ನೀತಿಯಿಂದ ಹೊರಗೆ ಬರಬೇಕು. ಕಾಂಗ್ರೆಸ್ಸಿಗರು ತಮ್ಮ ನಿಲುವನ್ನ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕ ಸಿ ಟಿ ರವಿ ಕಿಡಿ : ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಅಯೋಧ್ಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಹಾರಿಸಲಾಗಿದ್ದ ಹನುಮ ಧ್ವಜ ಇಳಿಸಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಸಿ ಟಿ ರವಿ ಅವರು ಕಿಡಿಕಾರಿದ್ದಾರೆ. ಮನೆ ಮನೆಯಲ್ಲೂ ಹನುಮ ಧ್ವಜ ಹಾರಿಸುವ ಅಭಿಯಾನದ ಮೂಲಕ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಬೇಕಾಗಿ ಜನರಲ್ಲಿ ಮನವಿ ಮಾಡಿದ್ದಾರೆ‌.

ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಹನುಮ ಧ್ವಜವನ್ನು ನಿಷೇಧಿಸಿದೆಯೇ? ನಿಷೇಧ ಮಾಡದಿದ್ದರೆ, ಅನುಮತಿ ಪಡೆದು ಧ್ವಜ ಸ್ತಂಭಕ್ಕೆ ಕಟ್ಟಿದ ಹನುಮಧ್ವಜವನ್ನು ಕಿತ್ತು ಹಾಕಿದ್ದು ಯಾಕೆ?. ಅಧಿಕಾರಿಗಳ ಉದ್ಧಟತನವಾದರೆ ಕೂಡಲೇ ಅವರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಿ. ಆಳುವವರ ಮರ್ಜಿಗೆ ಅನುಗುಣವಾಗಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರೆ, ನಿಮಗೆ ಹಿಂದೂ ಎಂದು ಕರೆದುಕೊಳ್ಳುವ ಯಾವ ನೈತಿಕತೆಯೂ ಉಳಿದಿಲ್ಲ. ನನ್ನ ಹೆಸರಿನಲ್ಲಿ ರಾಮ ಇದ್ದಾನೆ, ನಾನೂ ಹಿಂದೂ ಎಂದು ಹೇಳಿಕೊಳ್ಳುವ ಯಾವ ನೈತಿಕತೆಯೂ ಇಲ್ಲ ಎಂದು ಟ್ವೀಟ್ ಮೂಲಕ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ನೀವು ಮಾಡಿರುವುದು ಜನರ ಭಾವನೆಗಳನ್ನು ಕೆಣಕುವ ಕೆಲಸ. ಅಧಿಕಾರದ ಬಲದಿಂದ, ಅಧಿಕಾರದ ಮದದಿಂದ ಆಡಳಿತ ಯಂತ್ರದ ದುರುಪಯೋಗ ಮಾಡಿ ಧ್ವಜ ಇಳಿಸಿರಬಹುದು. ಇದೇ ಜನ ನಿಮ್ಮನ್ನು ಅಧಿಕಾರದಿಂದ ಇಳಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಈ ಹಿಂದೂ ವಿರೋಧಿ ನೀತಿಯನ್ನು ಕಟುವಾಗಿ ಖಂಡಿಸುತ್ತೇನೆ. ಮನೆ ಮನೆಯಲ್ಲೂ ಹನುಮ ಧ್ವಜ ಹಾರಿಸುವ ಅಭಿಯಾನದ ಮೂಲಕ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಬೇಕಾಗಿ ಎಕ್ಸ್​ ಮೂಲಕ ಜನರಲ್ಲಿ ಸಿ ಟಿ ರವಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಸನಾತನ ಧರ್ಮ ಟೀಕೆ ಮಾಡುವುದೇ ಇಂಡಿಯಾ ಮೈತ್ರಿಕೂಟದ ಹಿಡನ್ ಅಜೆಂಡಾ: ಮಾಜಿ ಸಚಿವ ಸುನೀಲ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.