ETV Bharat / state

ಪಾರ್ಕಿನ್ಸನ್‌ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ MER ಸಿಸ್ಟಮ್‌ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ

ಪಾರ್ಕಿನ್ಸನ್‌ ರೋಗದಿಂದ ಬಳಲುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬರಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ (MER) ಸಿಸ್ಟಮ್‌ ಬಳಸಿ ಶಸ್ತ್ರ ಚಿಕಿತ್ಸೆ ನೀಡಿದೆ.

Dr Raghuram G
ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ ರಘುರಾಮ್ ಜಿ
author img

By ETV Bharat Karnataka Team

Published : Mar 13, 2024, 9:27 PM IST

ಬೆಂಗಳೂರು: ನರಮಂಡಲದ ಸಮಸ್ಯೆಯಿಂದ ಉಂಟಾಗುವ ಮಾರಣಾಂತಿಕ ಪಾರ್ಕಿನ್ಸನ್‌ ರೋಗದಿಂದ ಬಳಲುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬರಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ (MER) ಸಿಸ್ಟಮ್‌” ಬಳಸಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ಫೋರ್ಟಿಸ್‌ ಆಸ್ಪತ್ರೆ ನರ ಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ, ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರಕರ್ ಹಾಗೂ ನರವಿಜ್ಞಾನ ತಂಡವು ನ್ಯೂರೋಸ್ಮಾರ್ಟ್ ಪೋರ್ಟಬಲ್ MER ವ್ಯವಸ್ಥೆಯನ್ನು ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದೆ.

ಈ ಕುರಿತು ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ ರಘುರಾಮ್ ಜಿ ಮಾತನಾಡಿ, ನರಮಂಡಲದಲ್ಲಿ ಆಗುವ ಸಮಸ್ಯೆಯಿಂದ ಉಂಟಾಗುವ ಪಾರ್ಕಿನ್ಸನ್‌ ವಯಸ್ಸಾಗಿರುವ ಜನರಲ್ಲಿ ಕಾಡುತ್ತದೆ. ಈ ಕಾಯಿಲೆ ಬಂದವರಿಗೆ ಇಡೀ ದೇಹ ನಡುಕು ಉಂಟಾಗುತ್ತದೆ. 68 ವರ್ಷದ ಪ್ರಕಾಶ್ ಎಂಬುವರು ಸಹ ಪಾರ್ಕಿನ್ಸನ್‌ ಕಾಯಿಲೆಗೆ ತುತ್ತಾಗಿದ್ದರು.

ಅಷ್ಟೇ ಅಲ್ಲದೆ, ರಕ್ತದೊತ್ತಡ, ಮಧುಮೇಹದಂತಹ ಇತರ ಆರೋಗ್ಯ ಸಮಸ್ಯೆ ಹೊಂದಿದ್ದರು. ಈ ಹಿಂದೆ ಅವರು ತಮ್ಮ ಹೃದಯ, ಬೆನ್ನುಮೂಳೆ, ಅಂಡವಾಯುಗಳ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇಷ್ಟೆಲ್ಲ ಆರೋಗ್ಯ ಸಮಸ್ಯೆ ಹೊಂದಿರುವ ಇಳಿ ವಯಸ್ಸಿನ ಪ್ರಕಾಶ್‌ ಅವರ ಕುತ್ತಿಗೆಯೂ ಸೇರಿದಂತೆ ಇಡೀ ದೇಹವೇ ನಡುಕ ಉಂಟು ಮಾಡುವ ಪಾರ್ಕಿನ್ಸನ್‌ ಕಾಯಿಲೆ ಅವರನ್ನು ಸಂಪೂರ್ಣವಾಗಿ ನಲುಗಿಸಿತ್ತು ಎಂದು ಮಾಹಿತಿ ನೀಡಿದರು.

ಈ ಸುಧಾರಿತ ತಂತ್ರಜ್ಞಾನವು ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (DBS) ಚಿಕಿತ್ಸೆಗೆ ನಿಖರತೆ ನೀಡಲಿದೆ. ಈ ತಂತ್ರಜ್ಞಾನದ ಮೂಲಕ ಮೆದುಳಿನಲ್ಲಿ ಆಗಿರುವ ಸಮಸ್ಯೆಗಳನ್ನು ಸೂಕ್ಷ್ಮ ರೀತಿಯಲ್ಲಿ ವಿಶ್ಲೇಷಣೆ ಮಾಡಿ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಈ ತಂತ್ರಜ್ಞಾನವನ್ನು ದೇಶದಲ್ಲೇ ಮೊದಲ ಬಾರಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಇನ್ನು ಈ ನೂತನ ತಂತ್ರಜ್ಞಾನ ನ್ಯೂರೋಸ್ಮಾರ್ಟ್‌ನಲ್ಲಿ AI ಸಾಮರ್ಥ್ಯಗಳನ್ನು ಬಳಸಿಕೊಂಡು, ರೋಗಿಯು ಎಚ್ಚರವಾಗಿರುವಂತೆ ನೋಡಿಕೊಂಡು ಈ ಚಿಕಿತ್ಸೆ ನೀಡಲಾಗುತ್ತದೆ. ಈ ಮೂಲಕ ಸುಲಭ ಹಾಗೂ ವೇಗವಾಗಿ ಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆಯಾದ ಐದು ದಿನಗಳಲ್ಲೇ ರೋಗಿಯನ್ನು ಡಿಸ್​​ಚಾರ್ಜ್​​​ ಮಾಡಲಾಯಿತು. ಪಾರ್ಕಿನ್ಸನ್‌ ಸಮಸ್ಯೆ ಇರುವ ವಯೋ ವೃದ್ಧರಿಗೆ ಈ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಲಿದೆ ಎಂದು ವಿವರಣೆ ನೀಡಿದರು.

ಇದನ್ನೂಓದಿ: ಕ್ಯಾನ್ಸರ್​ನಿಂದ ಬಳಲುತ್ತಿರುವ ಬಾಲಕನ ಪೊಲೀಸ್ ಆಗುವ ಕನಸು ನನಸು ಮಾಡಿದ ಡಿಸಿಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.