ETV Bharat / state

ನೈಜೀರಿಯನ್ ಯುವತಿಗೆ ಫೋರ್ಟಿಸ್‌ ವೈದ್ಯರಿಂದ ಯಶಸ್ವಿ 'ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್' ಸರ್ಜರಿ - Dual Cochlear Implant Surgery - DUAL COCHLEAR IMPLANT SURGERY

ಶ್ರವಣದೋಷದಿಂದ ಬಳಲುತ್ತಿದ್ದ ನೈಜೀರಿಯಾ ದೇಶದ ಯುವತಿಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಏಕಕಾಲದಲ್ಲಿ ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ನೈಜೀರಿಯನ್ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ನೈಜೀರಿಯನ್ ಯುವತಿಗೆ ಫೋರ್ಟಿಸ್‌ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ (ETV Bharat)
author img

By ETV Bharat Karnataka Team

Published : Jun 11, 2024, 5:59 PM IST

ಬೆಂಗಳೂರು: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೊಳಗಾಗಿ ಬಳಲುತ್ತಿದ್ದ ನೈಜೀರಿಯಾದ 23 ವರ್ಷದ ಯುವತಿಗೆ ಏಕಕಾಲದಲ್ಲೇ 'ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್' ಸರ್ಜರಿ ನಡೆಸುವ ಮೂಲಕ ಎರಡು ಶ್ರವಣ ಸಾಧನಗಳನ್ನು ಒಟ್ಟಿಗೆ ಅಳವಡಿಸುವಲ್ಲಿ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಹಿರಿಯ ಸಲಹೆಗಾರ ಡಾ.ಎಚ್.ಕೆ.ಸುಶೀನ್ ದತ್ ಹಾಗೂ ತಜ್ಞರ ಆರೈಕೆಯಲ್ಲಿ ಈ ಸಂಕೀರ್ಣ ಕಾರ್ಯವಿಧಾನವನ್ನು 9 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ.

ಈ ಕುರಿತು ಮಾತನಾಡಿದ ಡಾ.ಹೆಚ್.ಕೆ.ಸುಶೀನ್ ದತ್, ನೈಜೀರಿಯಾದ ಯುವತಿಗೆ ಮೂರು ವರ್ಷಗಳ ಹಿಂದೆ ಅತಿಯಾದ ವೈರಲ್‌ ಜ್ವರ ಕಾಣಿಸಿಕೊಂಡಿತ್ತು. ಇದರ ತೀವ್ರತೆಯಿಂದ ಕ್ರಮೇಣ ಅವರು ಮೊದಲು ಬಲಕಿವಿಯ ಕೇಳುವ ಶಕ್ತಿ ಕಳೆದುಕೊಂಡರು. ನಂತರ ಎಡ ಕಿವಿಯ ಶ್ರವಣ ಶಕ್ತಿಯೂ ಹೋಯಿತು. ದೊಡ್ಡ ಶಬ್ಧವನ್ನೂ ಸಹ ಅವರು ಕೇಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದರು. ನಮ್ಮ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಕಿವುಡುತನದ ತೀವ್ರತೆ ಅರಿವಾಯಿತು ಎಂದು ಹೇಳಿದರು.

ಇವರಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದ್ದೆವು. ಆದರೆ ಎರಡೂ ಕಿವಿಗಳಿಗೂ ಈ ಸರ್ಜರಿ ಅವಶ್ಯಕತೆ ಇತ್ತು. ಸಾಮಾನ್ಯವಾಗಿ ಈ ಸರ್ಜರಿಯನ್ನು ಒಮ್ಮೆಲೆ ಒಂದು ಕಿವಿಗೆ ಮಾತ್ರ ಮಾಡಲು ಸಾಧ್ಯ. ಆದರೆ, ನಮ್ಮ ತಂಡ ಏಕಕಾಲದಲ್ಲೇ ಎರಡೂ ಕಿವಿಗಳಿಗೂ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿತು. ಇದಕ್ಕೆ ಸೂಕ್ತ ತಂತ್ರಜ್ಞಾನಗಳ ಬಳಕೆಯಿಂದ 9 ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ರವಣ ಸಾಧನಗಳನ್ನು ಅಳಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಪ್ರಸ್ತುತ ಅವರು ನೈಜೀರಿಯಾದಲ್ಲಿ ಶ್ರವಣೇಂದ್ರಿಯ ಮೌಖಿಕ ತರಬೇತಿಯನ್ನು ಪಡೆಯುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಶ್ವದಲ್ಲೇ ಮೊದಲ ಪ್ರಕರಣ; ವ್ಯಕ್ತಿಯ ಮೂರು ವಿಭಿನ್ನ ಕಾಯಿಲೆಗಳಿಗೆ ಏಕಕಾಲದಲ್ಲೇ ಶಸ್ತ್ರಚಿಕಿತ್ಸೆ ನೀಡುವಲ್ಲಿ ವೈದ್ಯರ ತಂಡ ಯಶಸ್ವಿ - doctors team successful

ETV Bharat Logo

Copyright © 2025 Ushodaya Enterprises Pvt. Ltd., All Rights Reserved.