ETV Bharat / state

ಕೋವಿಶೀಲ್ಡ್ ಲಸಿಕೆ ಪಡೆದವರು ಕೂಲ್ ಡ್ರಿಂಕ್ಸ್, ಐಸ್ ಕ್ರೀಂ, ಫ್ರಿಡ್ಜ್ ವಾಟರ್ ಸೇವಿಸಬಾರದು ಎಂಬುದು ವದಂತಿ: ಆರೋಗ್ಯ ಇಲಾಖೆ - Covishield Vaccine - COVISHIELD VACCINE

ಕೋವಿಶೀಲ್ಡ್‌ ಲಸಿಕೆ ಕುರಿತ ವದಂತಿಗಳನ್ನು ನಂಬಬೇಡಿ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

covishield vaccine
ಸಂಗ್ರಹ ಚಿತ್ರ (Etv Bharat)
author img

By ETV Bharat Karnataka Team

Published : May 3, 2024, 9:42 PM IST

ಬೆಂಗಳೂರು: ಕೋವಿಡ್‌ ಸಂದರ್ಭದಲ್ಲಿ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡಿರುವವರು ಫ್ರಿಡ್ಜ್ ನೀರು, ಐಸ್‌ಕ್ರೀಂ ಮತ್ತು ತಂಪು ಪಾನೀಯಗಳನ್ನು ಸೇವಿಸಬಾರದು ಎಂದು ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಇಂತಹ ವದಂತಿಗಳನ್ನು ನಂಬಬೇಡಿ ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟೀಕರಣ ನೀಡಿದೆ.

ಕೋವಿಡ್‌ ಸಂದರ್ಭದಲ್ಲಿ ಕೋವಿಶೀಲ್ಡ್‌ ಹಾಕಿಸಿಕೊಂಡಿರುವವರು ಫ್ರಿಡ್ಜ್ ನೀರು, ಐಸ್‌ಕ್ರೀಂ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ ಎಂಬ ಸುಳ್ಳು ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ತಪ್ಪು ಮಾಹಿತಿ ಬಗ್ಗೆ ಜಾಗ್ರತಿ ವಹಿಸಿ. ಆರೋಗ್ಯ ಇಲಾಖೆಯು ಇಂತಹ ಯಾವುದೇ ಸೂಚನೆಯನ್ನು ಹೊರಡಿಸಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕೋವಿಶೀಲ್ಡ್ ಲಸಿಕೆ ಪಡೆದವರು ತಂಪು ಪಾನೀಯಗಳು, ಫ್ರಿಡ್ಜ್‌ ನೀರು ಹಾಗೂ ಐಸ್ ಕ್ರೀಂ ತಿನ್ನುವುದರಿಂದ ಹೃದಯಾಘಾತವಾಗುವ ಸಾಧ್ಯತೆಯಿದೆ. ಹೀಗಾಗಿ, ಕಡ್ಡಾಯವಾಗಿ ಅವುಗಳನ್ನು ಸೇವಿಸದಂತೆ ಚಿಕ್ಕಬಳ್ಳಾಪುರದ ಸಿದ್ದರಾಮಯ್ಯ ಕಾನೂನು ಮಹಾವಿದ್ಯಾಲಯ ಸೂಚನಾ ಪತ್ರದಲ್ಲಿ ಪ್ರಕಟಿಸಿತ್ತು. ಆರೋಗ್ಯ ಇಲಾಖೆಯ ಮಾಹಿತಿ ತಿಳುವಳಿಕೆ ಪ್ರಕಾರ ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಸುದ್ದಿ ವೈರಲ್‌ ಆದ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿದ್ದರಾಮಯ್ಯ ಕಾನೂನು ಕಾಲೇಜಿಗೆ ನೋಟಿಸ್ ನೀಡಿದೆ. ಜೊತೆಗೆ ಈ ಸುದ್ದಿಯನ್ನು ನಂಬದಂತೆ ಜನತೆಗೆ ಮನವಿ ಮಾಡಿದೆ.

ಇದನ್ನೂ ಓದಿ: ಕೋವಾಕ್ಸಿನ್​ ಸುರಕ್ಷತೆಯ ದಾಖಲೆ ಹೊಂದಿದೆ: ಭಾರತ್​ ಬಯೋಟೆಕ್ ಸ್ಪಷ್ಟನೆ​ - Covid 19 vaccine Covaxin

ETV Bharat Logo

Copyright © 2024 Ushodaya Enterprises Pvt. Ltd., All Rights Reserved.