ETV Bharat / state

ಅಬಕಾರಿ ಆದಾಯ ಹೆಚ್ಚಿಸಲು ಮದ್ಯದ ದರ ಇಳಿಕೆ: ಯಾವಾಗಿನಿಂದ ನೂತನ ದರ ಜಾರಿ? - Liquor Price Reduced

author img

By ETV Bharat Karnataka Team

Published : Jun 21, 2024, 6:18 PM IST

ರಾಜ್ಯ ಸರ್ಕಾರ ಮದ್ಯದ ಸ್ಲ್ಯಾಬ್‌ವಾರು ದರವನ್ನು ಪರಿಷ್ಕರಿಸಿದ್ದು 18 ಸ್ಲ್ಯಾಬ್‌ವಾರು ಅಬಕಾರಿ ಸುಂಕವನ್ನು 16 ಸ್ಲ್ಯಾಬ್​ಗಳಿಗೆ ಇಳಿಸಿದೆ.

ಅಬಕಾರಿ ಆದಾಯ ಹೆಚ್ಚಳಕ್ಕಾಗಿ ಮದ್ಯದ ದರ ಇಳಿಸಿದ ರಾಜ್ಯ ಸರ್ಕಾರ
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ಬಜೆಟ್​ನಲ್ಲಿ ಘೋಷಿಸಿದಂತೆ ಜುಲೈ 1ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆಯಾಗಲಿದೆ. ಜುಲೈನಿಂದ ದರಗಳನ್ನು ಪರಿಷ್ಕರಿಸುವ ಮೂಲಕ ಒಂದೆಡೆ ಮದ್ಯಪ್ರಿಯರನ್ನು ಖುಷಿ ಪಡಿಸುವುದಷ್ಟೇ ಅಲ್ಲದೇ, ತನ್ನ ಅಬಕಾರಿ ಆದಾಯವನ್ನೂ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ರಾಜ್ಯ ಸರ್ಕಾರದ್ದಾಗಿದೆ.

ಮದ್ಯದ ಸ್ಲ್ಯಾಬ್‌ವಾರು ದರವನ್ನು ಪರಿಷ್ಕರಿಸುವ ಸರ್ಕಾರ ಪ್ರಸ್ತುತ ಇರುವ 18 ಸ್ಲ್ಯಾಬ್‌ವಾರು ಅಬಕಾರಿ ಸುಂಕವನ್ನು 16 ಸ್ಲ್ಯಾಬ್‌ಗಳಿಗೆ ಇಳಿಸಿದೆ. ಅದಕ್ಕನುಗಣವಾಗಿ ಅಬಕಾರಿ ಸುಂಕವನ್ನು ಪರಿಷ್ಕರಿಸಿದೆ. ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿರುವ ಅಬಕಾರಿ ಇಲಾಖೆ ಸಾರ್ವಜನಿಕರಿಂದ ಆಕ್ಷೇಪ, ಸಲಹೆಗಳನ್ನು ಕೋರಿದೆ.

ಪ್ರತಿ ಬಾರಿ ಬಜೆಟ್​ನಲ್ಲಿ ಮದ್ಯದ ದರ ಏರಿಸುತ್ತಿರುವ ಸರ್ಕಾರ ಇದೀಗ ದರ ಇಳಿಕೆಗೆ ಮುಂದಾಗಿದೆ. ಗ್ಯಾರಂಟಿ ಹೊರೆ ತಗ್ಗಿಸುವ ನಿಟ್ಟಿನಲ್ಲಿ 2023-24ರ ಬಜೆಟ್​ನಲ್ಲಿ ಮದ್ಯದ ದರವನ್ನು ಏರಿಸಲಾಗಿತ್ತು. ಇದು ಮದ್ಯಪ್ರಿಯರ ಕಂಗೆಣ್ಣಿಗೆ ಗುರಿಯಾಗಿತ್ತು. ದರ ಏರಿಕೆಯಾದರೂ ರಾಜ್ಯದ ಬೊಕ್ಕಸಕ್ಕೆ ನಿರೀಕ್ಷಿತ ಪ್ರಮಾಣದ ಅಬಕಾರಿ ಆದಾಯ ಸಂಗ್ರಹಿಸಲು ಸಾಧ್ಯವಾಗಿಲ್ಲ. ಸರ್ಕಾರದ ಆದಾಯ ಮೂಲಕ್ಕೆ ಹೊಡೆತ ಬಿದ್ದಿತ್ತು.

ಪರಿಷ್ಕೃತ ದರ ಹೇಗಿರಲಿದೆ?: ಅಬಕಾರಿ ಇಲಾಖೆ ಪ್ರತಿ ಬಾಕ್ಸ್ (8.64/9/12 ಬಲ್ಕ್ ಲೀಟರ್ ಮದ್ಯದ ಬಾಕ್ಸ್)ನ ಘೋಷಿತ ಬೆಲೆಯ ಆಧಾರದಲ್ಲಿ ಸ್ಲ್ಯಾಬ್ ವೈಸ್ ಅಬಕಾರಿ ಸುಂಕ ವಿಧಿಸುತ್ತದೆ. ಪ್ರಸ್ತುತ ಅಬಕಾರಿ ಸುಂಕವನ್ನು 18 ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿತ್ತು. ಇದೀಗ ಪರಿಷ್ಕೃತ ಅಬಕಾರಿ ಸುಂಕದಲ್ಲಿ ಪ್ರಸ್ತುತ ಇರುವ 18 ಸ್ಲ್ಯಾಬ್​ಗಳನ್ನು 16ಕ್ಕೆ ಕಡಿತಗೊಳಿಸಲಾಗಿದೆ.

ಪರಿಷ್ಕೃತ ದರ
ಪರಿಷ್ಕೃತ ದರ (ETV Bharat)

ಪ್ರಸ್ತುತ 18 ಸ್ಲ್ಯಾಬ್ ವೈಸ್ ಘೋಷಿತ ಬೆಲೆ (ಪ್ರತಿ ಬಾಕ್ಸ್) ಪ್ರಕಾರ 0-449ವರೆಗಿನ ಘೋಷಿತ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 215 ರೂ. ವಿಧಿಸಲಾಗುತ್ತಿದೆ. 450- 499 ವರೆಗಿನ ಘೋಷಿತ ದರ ಸ್ಲ್ಯಾಬ್​ಗೆ ಹೆಚ್ಚುವರಿ ಸುಂಕ 294 ರೂ. ಇದೆ. ಇನ್ನು 500- 549 ದರ ಸ್ಲ್ಯಾಬ್​ಗೆ ಸುಂಕ 386 ರೂ., 550- 599 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 497 ರೂ., 600-699 ದರ ಸ್ಲ್ಯಾಬ್​ಗೆ ಸುಂಕ 668 ರೂ., 700-799 ದರ ಸ್ಲ್ಯಾಬ್​ಗೆ ಸುಂಕ 816 ರೂ., 800-899 ದರ ಸ್ಲ್ಯಾಬ್​ಗೆ ಸುಂಕ 870 ರೂ., 900-999 ದರ ಸ್ಲ್ಯಾಬ್​ಗೆ 938 ರೂ. ಸುಂಕ ವಿಧಿಸಲಾಗುತ್ತಿದೆ.

1000-1099 ದರ ಸ್ಲ್ಯಾಬ್​ಗೆ ಅಬಕಾರಿ ಸುಂಕ 982 ರೂ., 1100-1199 ದರ ಸ್ಲ್ಯಾಬ್ ಗೆ ಅಬಕಾರಿ ಸುಂಕ 1102 ರೂ., 1200-1299 ದರ ಸ್ಲ್ಯಾಬ್​ಗೆ ಸುಂಕ 1325 ರೂ., 1300-1399 ದರ ಸ್ಲ್ಯಾಬ್​ಗೆ ಸುಂಕ 1541ರೂ., 1400-1799 ದರ ಸ್ಲ್ಯಾಬ್ ಗೆ ಅಬಕಾರಿ ಸುಂಕ 1667 ರೂ., 1800-2199 ದರ ಸ್ಲ್ಯಾಬ್ ಗೆ ಅಬಕಾರಿ ಸುಂಕ 1860 ರೂ., 2200-4924 ದರ ಸ್ಲ್ಯಾಬ್ ಗೆ ಅಬಕಾರಿ ಸುಂಕ 2124 ರೂ., 4925-7650 ದರ ಸ್ಲ್ಯಾಬ್ ಗೆ ಅಬಕಾರಿ ಸುಂಕ 2483 ರೂ., 7651-15000 ದರ ಸ್ಲ್ಯಾಬ್ ಗೆ ಅಬಕಾರಿ ಸುಂಕ 3571 ರೂ., 15,001 ಮೇಲ್ಪಟ್ಟ ದರ ಸ್ಲ್ಯಾಬ್ ಗೆ ಹೆಚ್ಚುವರಿ ಅಬಕಾರಿ ಸುಂಕ 5358 ರೂ. ಹಾಕಲಾಗುತ್ತಿದೆ.

ಪರಿಷ್ಕೃತ 16 ಸ್ಲ್ಯಾಬ್​ ವೈಸ್ ಘೋಷಿತ ಬೆಲೆಯ ಪ್ರಕಾರ 0-450 ದರ ಸ್ಲ್ಯಾಬ್ ಗೆ ಹೆಚ್ಚುವರಿ ಅಬಕಾರಿ ಸುಂಕ 215 ರೂ. ಇರಲಿದೆ. 451-520 ದರ ಸ್ಲ್ಯಾಬ್ ಗೆ ಸುಂಕ 316 ರೂ. ಪರಿಷ್ಕರಣೆ ಆಗಲಿದೆ. ಇನ್ನು 521-570 ದರ ಸ್ಲ್ಯಾಬ್ ಗೆ ಸುಂಕ 411 ರೂ., 571-650 ದರ ಸ್ಲ್ಯಾಬ್ ಗೆ ಸುಂಕ 523 ರೂ., 651-750 ದರ ಸ್ಲ್ಯಾಬ್ ಗೆ ಸುಂಕ 620 ರೂ., 751-900 ದರ ಸ್ಲ್ಯಾಬ್ ಗೆ ಸುಂಕ 770 ರೂ., 901-1050 ದರ ಸ್ಲ್ಯಾಬ್ ಗೆ ಸುಂಕ 870 ರೂ., 1051-1300 ದರ ಸ್ಲ್ಯಾಬ್ ಗೆ ಸುಂಕ 970 ರೂ., 1301-1800 ದರ ಸ್ಲ್ಯಾಬ್ ಗೆ ಸುಂಕ 1200 ರೂ., 1801-2500 ದರ ಸ್ಲ್ಯಾಬ್ ಗೆ ಸುಂಕ 1400 ರೂ., 2501-5000 ದರ ಸ್ಲ್ಯಾಬ್ ಗೆ ಸುಂಕ 1600 ರೂ., 5001-8000 ದರ ಸ್ಲ್ಯಾಬ್ ಗೆ ಸುಂಕ 2000 ರೂ., 8001-12,500 ದರ ಸ್ಲ್ಯಾಬ್ ಗೆ ಸುಂಕ 2400 ರೂ., 12501-15000 ದರ ಸ್ಲ್ಯಾಬ್ ಗೆ ಸುಂಕ 2600 ರೂ., 15001-20000 ದರ ಸ್ಲ್ಯಾಬ್ ಗೆ ಸುಂಕ 2800 ರೂ. ಮತ್ತು 20000 ಮೇಲ್ಪಟ್ಟ ದರ ಸ್ಲ್ಯಾಬ್ ಗೆ ಹೆಚ್ಚುವರಿ ಅಬಕಾರಿ ಸುಂಕ 3000 ರೂ. ವಿಧಿಸಲಾಗುತ್ತದೆ.

ಮದ್ಯ ಸುಂಕ ಹೆಚ್ಚಿಸಿ ಆದಾಯ ಖೋತಾ: ರಾಜ್ಯ ಸರ್ಕಾರ ಈ ಮುಂಚೆ ಅಬಕಾರಿ ಸುಂಕ ಹೆಚ್ಚಿಸಿ ಅಬಕಾರಿ ಆದಾಯ ಕೊರತೆ ಎದುರಿಸುತ್ತಿದೆ. ಸುಂಕ ಹೆಚ್ಚಿಸಿದ ಕಾರಣ ರಾಜ್ಯದಲ್ಲಿ ಮದ್ಯ ಮಾರಾಟ ಪ್ರಮಾಣ ಇಳಿಕೆಯಾಗಿತ್ತು. ಇದರಿಂದ ಬೊಕ್ಕಸಕ್ಕೆ ಬರುವ ಅಬಕಾರಿ ಆದಾಯವೂ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇದೀಗ ಅಬಕಾರಿ ಸುಂಕ ಕಡಿಮೆ ಮಾಡಲು ನಿರ್ಧರಿಸಿದೆ. ಆ ಮೂಲಕ ನಿರೀಕ್ಷಿತ ಗುರಿ ಮೀರಿ ಅಬಕಾರಿ ಆದಾಯ ಸಂಗ್ರಹಕ್ಕೆ ಮುಂದಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಎರಡು ತಿಂಗಳು ಅಬಕಾರಿ ಆದಾಯ ನಿರೀಕ್ಷಿತ ಗುರಿ ತಲುಪದ ಕಾರಣ ಇದೀಗ ಜುಲೈನಿಂದ ಮದ್ಯದ ದರ ಕಡಿಮೆ ಮಾಡಿ, ಹೆಚ್ಚಿನ ಅಬಕಾರಿ ಆದಾಯ ಸಂಗ್ರಹಿಸಲು ಮುಂದಾಗಿದೆ.

2024-25ರ ಬಜೆಟ್​ನಲ್ಲಿ 38,525 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿ ಇಡಲಾಗಿದೆ. ಆದರೆ ಆರಂಭದಲ್ಲೇ ನಿರೀಕ್ಷಿತ ಅಬಕಾರಿ ಆದಾಯ ಸಂಗ್ರಹ ಸಾಧ್ಯವಾಗುತ್ತಿಲ್ಲ. ಏಪ್ರಿಲ್ ತಿಂಗಳಲ್ಲಿ 2,264 ಕೋಟಿ ರೂ. ಅಬಕಾರಿ ಸಂಗ್ರಹ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 44 ಕೋಟಿ ರೂ. ಅಬಕಾರಿ ಆದಾಯ ಕೊರತೆಯಾಗಿದೆ. ಇನ್ನು ಮೇ ತಿಂಗಳಲ್ಲಿ ಚೇತರಿಕೆ ಕಂಡಿದ್ದು, 3,185 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹಿಸಲಾಗಿದೆ. ಎರಡು ತಿಂಗಳಲ್ಲಿ 118 ಲಕ್ಷ IMLಲಿಕ್ಕರ್ ಬಾಕ್ಸ್ ನ್ನು ಮಾರಾಟ ಮಾಡಲಾಗಿದೆ. ಇನ್ನು 100 ಲಕ್ಷ ಬಿಯರ್ ಬಾಕ್ಸ್ ಮಾರಾಟ ಮಾಡಲಾಗಿದೆ. ಬಜೆಟ್ ಗುರಿಯಂತೆ ಎರಡು ತಿಂಗಳಲ್ಲಿ 6,420 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಬೇಕಾಗಿದೆ. ಆದರೆ, ಎರಡು ತಿಂಗಳಲ್ಲಿ 5,450 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದೆ. ಬಜೆಟ್ ಗುರಿಗಿಂತ 970 ಕೋಟಿ ರೂ. ಕುಂಠಿತವಾಗಿದೆ.

2023-24 ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅಬಕಾರಿ ಮೂಲಕ 36,000 ಕೋಟಿ ಆದಾಯ ಸಂಗ್ರಹದ ಗುರಿ ನಿಗದಿಪಡಿಸಿದ್ದರು. ಆ ನಿಟ್ಟಿನಲ್ಲಿ ಅಬಕಾರಿ ಸುಂಕವನ್ನು 20% ಏರಿಕೆ ಮಾಡಿದ್ದರು. ಆದರೆ, ಆರ್ಥಿಕ ವರ್ಷದಲ್ಲಿ 34,629 ಕೋಟಿ ರೂ‌. ಅಬಕಾರಿ ಆದಾಯ ಸಂಗ್ರಹ ಮಾಡಲು ಸಾಧ್ಯವಾಯಿತು. ಬಜೆಟ್ ಗುರಿಗಿಂತ 1,371 ಕೋಟಿ ರೂ. ಸಂಗ್ರಹ ಕುಂಠಿತವಾಯಿತು. ಮದ್ಯ ದರ ಏರಿಕೆ ಹಿನ್ನೆಲೆಯಲ್ಲಿ ಮಾರಾಟ ಪ್ರಮಾಣ ಕಡಿಮೆಯಾಯಿತು. ಈ ಹಿನ್ನೆಲೆಯಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2022-23 ಸಾಲಿನ ಬಜೆಟ್​ನಲ್ಲಿ 29,000 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿತ್ತು. ಆ ವರ್ಷ 29,920 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹಿಸಲಾಗಿತ್ತು. ಅಂದರೆ ಗುರಿಗಿಂತ ಸುಮಾರು 920 ಕೋಟಿ ರೂ‌. ಹೆಚ್ಚುವರಿ ಆದಾಯ ಸಂಗ್ರಹಿಸಿದೆ. 2022-23 ಸಾಲಿನಲ್ಲಿ ಸುಮಾರು 698 ಲಕ್ಷ IMD ಲಿಕ್ಕರ್ ಬಾಕ್ಸ್ ಮಾರಾಟ ಮಾಡಲಾಗಿತ್ತು. 391 ಲಕ್ಷ ಬಾಕ್ಸ್ ಬಿಯರ್ ಮಾರಾಟ ಮಾಡಲಾಗಿತ್ತು.

ಇದನ್ನೂ ಓದಿ: 7ನೇ ವೇತನ ಆಯೋಗದ ವರದಿ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಸಚಿವ ಹೆಚ್​.ಕೆ.ಪಾಟೀಲ್ - 7th Pay Commission

ETV Bharat Logo

Copyright © 2024 Ushodaya Enterprises Pvt. Ltd., All Rights Reserved.