ETV Bharat / state

ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆಗೆ ಮುಂದಾದ ರಾಜ್ಯ ಕಾಂಗ್ರೆಸ್; ಸೋಲಿನ ವರದಿ ನೀಡಲು ಸಜ್ಜಾದ ಕೈ ನಾಯಕರು! - Congress Review of Defeat

author img

By ETV Bharat Karnataka Team

Published : Jun 11, 2024, 10:13 AM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ದಾಟದೇ ಇರುವಂತಹ ಹಿನ್ನಡೆಗೆ ಕಾರಣ ಏನು ಎಂಬುದರ ಬಗ್ಗೆ ವರದಿ ನೀಡುವಂತೆ ರಾಜ್ಯದ ನಾಯಕರಿಗೆ ರಾಹುಲ್​ ಗಾಂಧಿ ಸೂಚನೆ ನೀಡಿದ್ದಾರೆ.

Congress Meeting
ಕಾಂಗ್ರೆಸ್​ ಸಭೆ (ETV Bharat)

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ‌. ಪಂಚ ಗ್ಯಾರಂಟಿ ಮಧ್ಯೆಯೂ ಎರಡಂಕಿ ದಾಟಲು ಸಾಧ್ಯವಾಗದೇ ಹಿನ್ನಡೆ ಅನುಭವಿಸಿದೆ. ಸೋಲಿ‌ನ ಪರಾಮರ್ಶೆ ನಡೆಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಇದೀಗ ವರದಿ ಸಿದ್ಧಪಡಿಸುತ್ತಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ದೇಶಾದ್ಯಂತ ಕಾಂಗ್ರೆಸ್ ತಕ್ಕಮಟ್ಟಿಗೆ ಉತ್ತಮ ಫಲಿತಾಂಶ ಕಂಡಿದೆ. ಆದರೆ, ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ನಿರೀಕ್ಷಿತ ಫಲಿತಾಂಶ ಕಂಡಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ 15-17 ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿತ್ತು. ಆದರೆ, ಕಾಂಗ್ರೆಸ್ 9 ಸ್ಥಾನವನ್ನು ಮಾತ್ರ ಗೆದ್ದಿದೆ. ಪಂಚ ಗ್ಯಾರಂಟಿ ಹೊರತಾಗಿಯೂ ಲೋಕ ಸಮರದಲ್ಲಿ ರಾಜ್ಯ ಕಾಂಗ್ರೆಸ್​ಗೆ ಹಿನ್ನಡೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಉಳಿದೆಲ್ಲಾ ಭಾಗದಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿದೆ. ಇದರಿಂದ ಆಡಳಿತಾರೂಢ ಕಾಂಗ್ರೆಸ್​ಗೆ ತೀವ್ರ ಮುಖಭಂಗವಾಗಿದೆ.

ಕರ್ನಾಟಕ ಲೋಕಸಮರದಲ್ಲಿ ಹಿನ್ನಡೆಯಾಗಿರುವುದರ ಬಗ್ಗೆ ರಾಹುಲ್ ಗಾಂಧಿ, ಮೊನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದರು. ಸೋಲಿನ ಕಾರಣಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ನಾಯಕರುಗಳಿಗೆ ಸೂಚನೆ ನೀಡಿದ್ದಾರೆ. ಸೋಲಿಗೆ ಸಚಿವರುಗಳು ಹೊಣೆಗಾರರಾಗಿರುತ್ತಾರೆ ಎಂದು ರಾಹುಲ್ ಗಾಂಧಿ ಈಗಾಗಲೇ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅದರಂತೆ ಇದೀಗ ರಾಜ್ಯ ಕಾಂಗ್ರೆಸ್ ಲೋಕಸಮರದಲ್ಲಿನ ಹಿನ್ನಡೆಗಾಗಿನ ಕಾರಣಗಳ ಪರಾಮರ್ಶೆ ಸಭೆ ನಡೆಸಲು ಮುಂದಾಗಿದೆ. ಎರಡು ದಿನಗಳ ಕಾಲ ಪರಾಮರ್ಶೆ ಸಭೆ ನಡೆಸಿ ಹೈ ಕಮಾಂಡ್​ಗೆ ವರದಿ ನೀಡಲಿದೆ.

ಸೋಲಿನ ಪರಾಮರ್ಶೆ ಸಭೆ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರಲು ಕಾರಣದ ಬಗ್ಗೆ ಪರಾಮರ್ಶೆ ನಡೆಸಿ ವರದಿ ನೀಡಲು ರಾಹುಲ್ ಗಾಂಧಿ ಈಗಾಗಲೇ ಸೂಚನೆ ಕೊಟ್ಟಿದ್ದಾರೆ. ಅದರಂತೆ ಜಿಲ್ಲಾವಾರು ಸಭೆ ನಡೆಸಲು ಸಿಎಂ ಹಾಗೂ ಡಿಸಿಎಂ ನಿರ್ಧರಿಸಿದ್ದಾರೆ. ಜಿಲ್ಲಾವಾರು ಲೋಕಸಭೆ ಚುನಾವಣೆಯಲ್ಲಿನ ಫಲಿತಾಂಶದ ಬಗ್ಗೆ ಪರಾಮರ್ಶೆ ನಡೆಸಲು ನಿರ್ಧರಿಸಲಾಗಿದೆ.

"ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಸಭೆ ನಡೆಸಲಾಗುವುದು. ಶೀಘ್ರವೇ ಇದಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ಎಲ್ಲೆಲ್ಲಿ ಏನಾಗಿದೆ ಎನ್ನುವ ಸತ್ಯಶೋಧನೆ ಹಾಗೂ ಪರಿಹಾರ ಹುಡುಕುವ ಕೆಲಸ ಆಗಬೇಕು. ಪ್ರಮುಖ ನಾಯಕರ ಊರುಗಳಲ್ಲೇ ಮತ ಗಳಿಕೆಯಾಗಿಲ್ಲ. ನನ್ನ ಕ್ಷೇತ್ರದ ಅನೇಕ ನಾಯಕರ ಊರಿನಲ್ಲಿ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಇದಕ್ಕೆ ಏನಾದರೂ ಒಂದು ಸಬೂಬು ಹೇಳಿದರೆ ಯಾರು ಕೇಳುವುದಿಲ್ಲ. ಆದ ಕಾರಣ ಪರಿಶೀಲನೆ ನಡೆಸುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಸೋಲಿಗೆ ನೀಡುತ್ತಿರುವ ಕಾರಣಗಳೇನು?: ಕಾಂಗ್ರೆಸ್ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರಲು ಬಿಜೆಪಿ - ಜೆಡಿಎಸ್ ಮೈತ್ರಿ ಪ್ರಮುಖ ಕಾರಣ ಎಂಬುದನ್ನು ಒಪ್ಪಿಕೊಂಡಿದೆ. ದಕ್ಷಿಣ ಕರ್ನಾಟಕದಲ್ಲಿ ಮೈತ್ರಿಯಿಂದ ಒಕ್ಕಲಿಗರು - ಲಿಂಗಾಯತರ ಮತ ಕ್ರೋಢೀಕರಣವಾದ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ ಎಂಬುದನ್ನು ಕೈ ರಾಜ್ಯ ನಾಯಕರು ಒಪ್ಪಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಪ್ರಮುಖವಾಗಿ ನೇಹಾ ಕೊಲೆ ಪ್ರಮುಖ ಕಾರಣವಾಯಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ. ನೇಹಾ ಬರ್ಬರ ಕೊಲೆಗೆ ಲವ್ ಜಿಹಾದ್ ಬಣ್ಣ ಸಿಕ್ಕ ತಕ್ಷಣ ಬಿಜೆಪಿ ಅದನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸುವ ಮೂಲಕ ಲಿಂಗಾಯತ ಮತಗಳು ಕ್ರೋಢೀಕರಣವಾಗಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮತ್ತೊಂದು ಕಾರಣವಾಯಿತು.

ಇನ್ನು ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಪಕ್ಷದೊಳಗಿನ ಆಂತರಿಕ ಕಲಹ ಹಾಗೂ ಒಳ ಏಟು ಕಾಂಗ್ರೆಸ್ ಸೋಲಿಗೆ ಕೊಡುಗೆ ನೀಡಿತು ಎಂದು ಈಗಾಗಲೇ ಕೆಲ ಶಾಸಕರು ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಭಿನ್ನಮತದ ಒಳ ಏಟಿನಿಂದ ಹಲವೆಡೆ ಪಕ್ಷಕ್ಕೆ ನಿರೀಕ್ಷಿತ ಮತ ಲಭಿಸಿಲ್ಲ. ಹೀಗಾಗಿ ನಾಲ್ಕೈದು ಕ್ಷೇತ್ರಗಳಲ್ಲಿ ಆಂತರಿಕ ಕಲಹ, ಒಳ ಏಟು ಕಾಂಗ್ರೆಸ್ ಗೆಲುವಿಗೆ ದೊಡ್ಡ ಏಟು ನೀಡಿದೆ ಎಂದು ಹೇಳಲಾಗುತ್ತಿದೆ.

ಇನ್ನು ಪಂಚ ಗ್ಯಾರಂಟಿಯನ್ನು ಜನರಿಗೆ ಮುಟ್ಟಿಸುವಲ್ಲಿ ವಿಫಲವಾಗಿರುವುದು ಹಿನ್ನಡೆಗೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಯಿಂದ ಪಕ್ಷಕ್ಕೆ ಲಾಭವಾಗಿದೆ. ಆದರೆ, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪಂಚ ಗ್ಯಾರಂಟಿಯ ಚುನಾವಣಾ ಲಾಭ ಕಾಂಗ್ರೆಸ್ ಗೆ ಲಭಿಸಿಲ್ಲ. ಅದರ ಜೊತೆಗೆ ಗ್ಯಾರಂಟಿ ಬಗ್ಗೆ ಬಿಜೆಪಿ ಮಾಡಿದ ಅಪಪ್ರಚಾರವನ್ನು ಸಮಪರ್ಕವಾಗಿ ಎದುರಿಸಲು ವಿಫಲವಾಗಿದ್ದೇವೆ ಎಂಬುದು ಕೆಲ ಹಿರಿಯ ಕೈ ನಾಯಕರ ಅಭಿಪ್ರಾಯವಾಗಿದೆ. ಅತಿಯಾದ ವಿಶ್ವಾಸ, ಕೈ ಕಾರ್ಯಕರ್ತರಲ್ಲಿ ಕಾಣದ ಉತ್ಸಾಹ ಸೇರಿ ಈ ಎಲ್ಲಾ ಅಂಶಗಳು ಪರಾಮರ್ಶೆ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಈ ಸಂಬಂಧ ಸೋಲಿನ ಕಾರಣಗಳ ವರದಿ ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.

ಸಚಿವರ ತಲೆದಂಡ ಆಗುತ್ತಾ?: ಮೊನ್ನೆ ಕೆಪಿಸಿಸಿ ಕಚೇರಿಯಲ್ಲಿ ಸಚಿವರ ಜೊತೆ ನಡೆದ ಪ್ರತ್ಯೇಕ ಸಭೆಯಲ್ಲಿ ರಾಹುಲ್ ಗಾಂಧಿ ಹೊಣೆಗಾರರನ್ನಾಗಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸದ ಸಚಿವರನ್ನು ಹೊಣೆಗಾರರನ್ನಾಗಿಸಲಾಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಆದರೆ ಯಾವುದೇ ಸಚಿವರ ತಲೆದಂಡ ಅನುಮಾ‌ನ ಎನ್ನಲಾಗುತ್ತಿದೆ. ಈ ಸಂಬಂಧ ಸೋಲಿಗೆ ಸಚಿವರುಗಳ ತಲೆದಂಡ ಇಲ್ಲ ಎಂಬ ಬಗ್ಗೆ ಕೆಲ ಸಚಿವರುಗಳೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚುನಾವಣೆ ಹಿನ್ನಡೆಗೆ ಯಾರೋ ಒಬ್ಬರನ್ನು ಹೊಣೆ ಮಾಡಲು ಸಾಧ್ಯವಿಲ್ಲ: ಸಚಿವ ಎಂ.ಬಿ.ಪಾಟೀಲ್ - Minister M B Patil

ETV Bharat Logo

Copyright © 2024 Ushodaya Enterprises Pvt. Ltd., All Rights Reserved.