ETV Bharat / state

ಸೋತ ಲೋಕಸಭಾ ಕ್ಷೇತ್ರಗಳ ನಾಯಕರಿಗೆ ಬಿಜೆಪಿ ಉಸ್ತುವಾರಿ ವಾರ್ನಿಂಗ್: ಅವಲೋಕನಾ ಸಭೆಯಲ್ಲಿ ನಡೆದಿದ್ದೇನು? - BJP review meeting - BJP REVIEW MEETING

ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವ 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಅವಲೋಕನಾ ಸಭೆ ಇಂದು ನಡೆಯಿತು. ಪಕ್ಷದ ಸೋಲಿಗೆ ಕಾರಣರಾದ ನಾಯಕರಿಗೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಬಿಸಿ ಮುಟ್ಟಿಸಿದರು.

ಬಿಜೆಪಿಯ ಅವಲೋಕನಾ ಸಭೆ
ಬಿಜೆಪಿಯ ಅವಲೋಕನಾ ಸಭೆ (ETV Bharat)
author img

By ETV Bharat Karnataka Team

Published : Jul 8, 2024, 9:01 PM IST

ಬೆಂಗಳೂರು: ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವ 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಅವಲೋಕನಾ ಸಭೆ ಮುಗಿದಿದೆ. ಗೆಲ್ಲುವ ಅವಕಾಶವಿದ್ದ ಮೂರು ಕ್ಷೇತ್ರ ಕಳೆದುಕೊಳ್ಳಲು ಸ್ಥಳೀಯ ನಾಯಕರ ಅಸಹಕಾರ ಕಾರಣಗಿದ್ದು, ಒಂದು ಕ್ಷೇತ್ರದಲ್ಲಿ ಚುನಾವಣೆಗೆ ಮೊದಲೇ ಸೋಲೊಪ್ಪಿದ ನಡೆ ಹಾಗೂ ಮೂರು ಕ್ಷೇತ್ರಗಳಲ್ಲಿ ಹಲವು ಕಾರಣಗಳಿಂದಾಗಿ ಪಕ್ಷಕ್ಕೆ ಸೋಲಾಗಿದೆ ಎನ್ನುವ ಮಾಹಿತಿ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಪಕ್ಷದ ನಿರ್ದೇಶನ ಪಾಲಿಸದೇ ಅಸಹಕಾರ ತೋರಿರುವ ನಾಯಕರಿಗೆ ಬಿಸಿ ಮುಟ್ಟಿಸಿಯೇ ವಸ್ತುಸ್ಥಿತಿಯ ವಿವರಗಳನ್ನು ರಾಜ್ಯ ಉಸ್ತುವಾರಿ ಹೈಕಮಾಂಡ್​ಗೆ ತಲುಪಿಸಿದ್ದಾರೆ.

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಎರಡು ದಿನಗಳ ಕಾಲ ಸೋತ ಕ್ಷೇತ್ರಗಳ ಅವಲೋಕನಾ ಸಭೆಯನ್ನು ನಡೆಸಲಾಯಿತು. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲ ದಿನ ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ ಕ್ಷೇತ್ರಗಳ ಸಭೆ ನಡೆಸಿದರೆ. ಎರಡನೇ ದಿನ ಬೀದರ್, ಚಿಕ್ಕೋಡಿ, ಚಾಮರಾಜನಗರ ಕ್ಷೇತ್ರಗಳ ಸಭೆ ನಡೆಸಲಾಯಿತು.

ದಾವಣಗೆರೆ ಕ್ಷೇತ್ರದ ಕುರಿತ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಈ ಏಳು ಕ್ಷೇತ್ರಗಳಲ್ಲಿ ಕಲಬುರಗಿ, ಬೀದರ್, ಚಿಕ್ಕೋಡಿ ಕ್ಷೇತ್ರಗಳ ಸೋಲಿಗೆ ರಾಜ್ಯ ಉಸ್ತುವಾರಿಗಳು ಗರಂ ಆದರು. ಹೊಂದಾಣಿಕೆ ರಾಜಕಾರಣ, ಅಸಹಕಾರದಂತಹ ನಡೆ ಪಕ್ಷ ವಿರೋಧಿ ಚಟುವಟಿಕೆಗೆ ಸಮವಾಗಿರಲಿದೆ. ಪಕ್ಷದ ನಿರ್ದೇಶನ ಪಾಲಿಸದೇ ಪಕ್ಷದ ಹಿನ್ನಡೆಗೆ ಕಾರಣವಾಗಿದ್ದೀರಿ. ಇಂತಹ ವರ್ತನೆ ಮರುಕಳಿಸಿದರೆ ಕ್ರಮ ಖಚಿತ ಎಂದು ನೇರವಾಗಿಯೇ ಸ್ಥಳೀಯ ಪ್ರಭಾವಿ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಚಾಮರಾಜನಗರ ವಿಚಾರದಲ್ಲಿಯೂ ಸ್ಥಳೀಯ ನಾಯಕರು ಯುದ್ದಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದ ಮನೋಭಾವ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಹೊಂದಾಣಿಕೆಯಿಂದ ಕಲಬುರಗಿ ಸೋಲು: ಕಳೆದ ಬಾರಿ ಕಾಂಗ್ರೆಸ್​ನ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ವಶಕ್ಕೆ ಪಡೆದಿದ್ದ ಕಲಬುರಗಿ ಕ್ಷೇತ್ರವನ್ನು ಈ ಬಾರಿ ಕಳೆದುಕೊಂಡಿದ್ದಕ್ಕೆ ಅವಲೋಕನಾ ಸಭೆಯಲ್ಲಿ ಅಭ್ಯರ್ಥಿಯನ್ನೂ ಒಳಗೊಂಡಂತೆ ಸ್ಥಳೀಯ ಮುಖಂಡರಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಅಂಕಿ - ಅಂಶಗಳೊಂದಿಗೆ ಕುಳಿತಿದ್ದ ರಾಜ್ಯ ಉಸ್ತುವಾರಿ, ಸ್ಥಳೀಯ ನಾಯಕರಿಂದ ಇಂಚಿಂಚೂ ವಿವರಣೆ ಪಡೆದುಕೊಂಡರು. ಜಿಲ್ಲಾ ಘಟಕದ ವಿರುದ್ಧವೇ ಆರೋಪ ಬರುತ್ತಿದ್ದಂತೆ ಕೆರಳಿದ ಅಗರ್ವಾಲ್, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನಸಭೆ ಚುನಾವಣೆ ವೇಳೆ ಪಡೆದ ಮತಕ್ಕಿಂತ ಕಡಿಮೆ ಮತ ಬಂದಿದೆ ಎಂದರೆ ಸೋಲಿಗೆ ಒಳಮೈತ್ರಿಯೇ ಕಾರಣವಲ್ಲವೇ ಎಂದು ಸ್ಥಳೀಯ ನಾಯಕರನ್ನು ತರಾಟೆ ತೆಗೆದುಕೊಂಡರು.

ಈ ವೇಳೆ ಕೆಲವರು ಅಭ್ಯರ್ಥಿ ಡಾ. ಉಮೇಶ್ ಜಾದವ್ ವಿರುದ್ಧವೇ ಬೆರಳು ತೋರಿದ್ದು, ಸಭೆ ಮುಖಂಡರ ನಡುವಿನ ಆರೋಪ - ಪ್ರತ್ಯಾರೋಪಕ್ಕೆ ವೇದಿಕೆಯಾಯಿತು. ಕೂಡಲೇ ಮಧ್ಯಪ್ರವೇಶ ಮಾಡಿದ ವಿಜಯೇಂದ್ರ, ಜಿಲ್ಲೆಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಯಾರೆಲ್ಲ ಪಕ್ಷದ ವಿರುದ್ಧ ಮಸಲತ್ತು ಮಾಡಿದ್ದಾರೆ ಎಂದು ಗೊತ್ತು, ಇಂತಹ ನಡೆ ಮರುಕಳಿಸಿದರೆ ಶಿಸ್ತುಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಳಜಗಳಕ್ಕೆ ಬೀದರ್ ಸೋಲು: ಬೀದರ್​ನಲ್ಲಿ ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ ಸೋಲಿಗೆ ಒಳಜಗಳಗಳೇ ಕಾರಣ ಎನ್ನುವುದು ಅವಲೋಕನಾ ಸಭೆಯಲ್ಲಿ ಸ್ಪಷ್ಟವಾಗಿದೆ. ಸ್ಥಳೀಯ ನಾಯಕರು ಹಾಗೂ ಅಭ್ಯರ್ಥಿ ನಡುವಿನ ಕಲಹಕ್ಕೆ ಪಕ್ಷ ನಷ್ಟವನ್ನು ಅನುಭವಿಸುವಂತಾಯಿತು ಎಂದು ರಾಜ್ಯ ಉಸ್ತುವಾರಿ ಅಗರ್ವಾಲ್ ನೇರವಾಗಿಯೇ ಸ್ಥಳೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ವರಿಷ್ಠರು ಅಭ್ಯರ್ಥಿಯನ್ನು ಫೈನಲ್ ಮಾಡಿದ ಮೇಲೆ ಕೆಲಸ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಒಳಜಗಳ, ತಟಸ್ಥ ನಿಲುವು ತಳೆದ ಕಾರಣ ಪಕ್ಷಕ್ಕೆ ಹೊಡೆತ ಬಿದ್ದಿದೆ. ನಿಮ್ಮಂತಹವರಿಂದ ದೇಶದಲ್ಲಿ ಇದೇ ರೀತಿ 50 ರಿಂದ 60 ಸ್ಥಾನಗಳಲ್ಲಿ ಸೋತಿದ್ದೇವೆ ಎಂದು ಗರಂ ಆದರು, ಅಲ್ಲದೇ ಅಭ್ಯರ್ಥಿಯಾದ ನೀವು ಕೇಂದ್ರ ಸಚಿವರಾಗಿದ್ದವರು. ಪರಿಸ್ಥಿತಿ ತಿಳಿಗೊಳಿಸಿ ಸಮಸ್ಯೆ ಪರಿಹರಿಸಿಕೊಳ್ಳದಿದ್ದದ್ದು ಏಕೆ ಎಂದು ಪ್ರಶ್ನಿಸಿದರು. ಇದೇ ರೀತಿ ಮುಂದುವರಿದರೆ ಮುಲಾಜಿಲ್ಲದೇ ಕ್ರಮವಾಗಲಿದೆ ಎಂದು ಪರಾಜಿತ ಅಭ್ಯರ್ಥಿ ಭಗವಂತ ಖೂಬಾ, ಬೀದರ್ ಜಿಲ್ಲೆಯ ಪಕ್ಷದ ಶಾಸಕರು, ಪ್ರಮುಖರು, ಪದಾಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದರು ಎಂದು ಪಕ್ಷದ ಮೂಲಗಳು ಹೇಳಿವೆ.

ನಿರ್ಲಕ್ಷ್ಯಕ್ಕೆ ಚಿಕ್ಕೋಡಿ ಸೋಲು: ಚಿಕ್ಕೋಡಿ ಸೋಲಿಗೆ ಕತ್ತಿ ಕುಟುಂಬವನ್ನೂ ಒಳಗೊಂಡಂತೆ ಕ್ಷೇತ್ರದ ಪ್ರಮುಖ ನಾಯಕರ ಹೆಸರು ಉಲ್ಲೇಖಿಸಿಯೇ ಅಗರ್ವಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಹಿರಿಯ ಮುಖಂಡರು ಏನು ಮಾಡಿದರು ಎಂದು ಗೊತ್ತಿದೆ. ಕೆಲವರಂತೂ ಕಾಂಗ್ರೆಸ್ ಅಭ್ಯರ್ಥಿ ಜತೆಗೆ ಕೈಜೋಡಿಸಿರುವ ಮಾಹಿತಿಯಿದೆ. ಹಿರಿಯ ಮುಖಂಡರು ದೂರ ಉಳಿದ ಕಾರಣಕ್ಕೆ ಬೆಂಬಲಿಗರು ಬರಲಿಲ್ಲ. ನಿಮ್ಮ ಮೇಲಿಟ್ಟ ನಿರೀಕ್ಷೆ ಹುಸಿ ಮಾಡಿದಿರಿ ಎಂದು ತರಾಟೆಗೆ ತೆಗೆದುಕೊಂಡರು. ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಆರೋಪಕ್ಕೆ ಸ್ಥಳೀಯ ನಾಯಕರು ಮುಂದಾಗುತ್ತಿದ್ದಂತೆ ಲೋಕಸಭೆ ಚುನಾವಣೆಗೆ ಉಸ್ತುವಾರಿಯಾಗಿದ್ದೆ ಎನ್ನುವುದು ನೆನಪಿರಲಿ. ಪ್ರತಿಯೊಂದು ಕ್ಷೇತ್ರದ ಮಾಹಿತಿ, ವಿವರಗಳು ನನ್ನ ಬಳಿಯಿವೆ. ಇನ್ಮುಂದೆ ಇಂತಹದ್ದೆಲ್ಲಾ ನಡೆಯಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು ಎಂದು ತಿಳಿದು ಬಂದಿದೆ.

ಹೋರಾಟವೇ ಮಾಡದೇ ಚಾಮರಾಜನಗರ ಸೋಲು: ನಮ್ಮ ಪಕ್ಷದ ಸಂಸದರಿದ್ದರು ಎನ್ನುವುದೊಂದನ್ನು ಬಿಟ್ಟು ಚಾಮರಾಜನಗರದಲ್ಲಿ ಯಾವುದೇ ರೀತಿಯ ಉತ್ಸಾಹ, ಹುಮ್ಮಸ್ಸು ಕಂಡುಬರಲಿಲ್ಲ. ಚುನಾವಣೆ ಎದುರಿಸುವುದು ಹೀಗಾ ಎಂದು ಕ್ಷೇತ್ರದ ಸ್ಥಳೀಯ ನಾಯಕರನ್ನು ರಾಧಾಮೋಹನ್ ದಾಸ್ ಅಗರ್ವಾಲ್ ತೀವ್ರ ತರಾಟೆ ತೆಗೆದುಕೊಂಡರು. ಚುನಾವಣೆಗೆ ಮುನ್ನವೇ ಸೋಲೊಪ್ಪಿಕೊಂಡ ಮನೋಭಾವವಿತ್ತು. ಹೋರಾಟವೇ ಇಲ್ಲದಿದ್ದರೆ ಗೆಲುವು ಹೇಗೆ ಸಿಗಲಿದೆ?. ಇಂತಹ ಧೋರಣೆ ಸರಿಯಲ್ಲ, ಮುಖಂಡರು ಮುಂದಾಳತ್ವ ವಹಿಸಬೇಕು. ಕಾರ್ಯಕರ್ತರ ಪಡೆಯನ್ನು ಅಂತಿಮ ಕ್ಷಣದವರೆಗೂ ಹುರಿದುಂಬಿಸಿ ಮುನ್ನಡೆಸಿಕೊಂಡು ಹೋಗಬೇಕು. ಇಂತಹ ನಿರ್ಲಕ್ಷ್ಯಧೋರಣೆ ಸಹಿಸಲ್ಲ. ಇನ್ಮುಂದೆ ಇಂತಹದ್ದಕ್ಕೆಲ್ಲಾ ಅವಕಾಶವಿಲ್ಲ. ಕೆಲಸ ಮಾಡಲೇಬೇಕು ಎಂದು ತಾಕೀತು ಮಾಡಿದರು ಎನ್ನಲಾಗಿದೆ.

ರಾಜುಗೌಡಗೆ ಕ್ಲಾಸ್: ರಾಯಚೂರು ಲೋಕಸಭಾ ಕ್ಷೇತ್ರದ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಾಗಿದ್ದು ರಾಜಾ ಅಮರೇಶ್ವರ ನಾಯಕ್‌ಗೆ ಟಿಕೆಟ್ ಕೊಡಬೇಡಿ ಎಂದು ಕಾರ್ಯಕರ್ತರು ವರದಿ ನೀಡಿದ್ದರೂ ಅವಕಾಶ ಕಲ್ಪಿಸಿದ್ದೇ ಸೋಲಿಗೆ ಕಾರಣ. ಹೈಕಮಾಂಡ್ ನಿರ್ಧಾರದಂತೆ ಎಲ್ಲ ಸೇರಿ ಕೆಲಸ ಮಾಡಿದ್ದೇವೆ. ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕರಿಗೆ ವರ್ಚಸ್ಸು ಇಲ್ಲದ ಕಾರಣ ಸೋಲಾಗಿದೆ ಎನ್ನುವ ವಿವರಗಳನ್ನು ಉಸ್ತುವಾರಿಗಳ ಮುಂದಿಡಲಾಯಿತು. ಈ ವೇಳೆ ಜಿಲ್ಲೆಯ ನಾಯಕ ರಾಜ್ಯ ಉಪಾಧ್ಯಕ್ಷರೂ ಆದ ರಾಜುಗೌಡ ಗೈರಾಗಿದ್ದರು. ಇದಕ್ಕೆ ಕಿಡಿಕಾರಿದ ಉಸ್ತುವಾರಿಗಳು, ಹುದ್ದೆ ಕೇವಲ ಹೆಸರಿಗೆ ಮಾತ್ರ ಎನ್ನುವವರ ಅಗತ್ಯ ಪಕ್ಷಕ್ಕಿಲ್ಲ. ಕೆಲಸ ಮಾಡುವುದಾದರೆ ಮಾಡಿ ಇಲ್ಲವೇ ಹೊರಹೋಗಿ ಎಂದು ಖಡಕ್ ಸಂದೇಶ ರವಾನಿಸಿದರು. ಇಂತಹ ವರ್ತನೆಗಳೇ ಪಕ್ಷಕ್ಕೆ ಹಿನ್ನಡೆ ತರಲಿವೆ, ಕೆಲಸ ಮಾಡದವರ ಅಗತ್ಯ ಪಕ್ಷಕ್ಕಿಲ್ಲ ಎನ್ನುವುದು ಎಲ್ಲರಿಗೂ ನೆನಪಿರಲಿ ಎಂದು ಸೂಚಿಸಿದರು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಸೋಲಿಗೆ ಅಭ್ಯರ್ಥಿ ಬದಲಾವಣೆ ಕಾರಣವಲ್ಲ. ಸಂಗಣ್ಣ ಕರಡಿ ಸ್ಪರ್ಧಿಸಿದ್ದರೆ ಇನ್ನೂ ಹೆಚ್ಚು ಅಂತರದಲ್ಲಿ ಪಕ್ಷ ಸೋಲುತ್ತಿತ್ತು. ಟಿಕೆಟ್ ಘೋಷಣೆ ಸ್ವಲ್ಪ ವಿಳಂಬವಾಗಿದ್ದರಿಂದ ತಯಾರಿ ಕಷ್ಟವಾಯ್ತು. ಹಿಟ್ನಾಳ್ ಕುಟುಂಬದ ಬಗ್ಗೆ ಅನುಕಂಪ ಕೆಲಸ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆಗಳು ಸ್ಪಷ್ಟವಾಗದ ಹಿನ್ನಲೆಯಲ್ಲಿ ಸಂಘಟನೆಗೆ ಒತ್ತು ನೀಡುವ ಸಲಹೆ ನೀಡಲಾಯಿತು. ಇನ್ನುಳಿದಂತೆ ಬಳ್ಳಾರಿ ಕ್ಷೇತ್ರದ ಸೋಲಿನ ನೈತಿಕ ಹೊಣೆಯನ್ನು ಮಾಜಿ ಸಚಿವ ಬಿ.ಶ್ರೀರಾಮುಲು ವಹಿಸಿಕೊಂಡರು. ಸಭೆಯಲ್ಲಿಯೇ ಈ ಕುರಿತು ಪ್ರಸ್ತಾಪಿಸಿದ ಶ್ರೀರಾಮುಲು ಸೋಲಿನ ಹೊಣೆ ವಹಿಸಿಕೊಂಡು ತಪ್ಪು ಮರುಕಳಿಸಿದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದರು. ಇದನ್ನು ಮಾಧ್ಯಮಗಳ ಮುಂದೆ ಸ್ವತಃ ಶ್ರೀರಾಮುಲು ಅವರೇ ಹೇಳಿಕೊಂಡಿದ್ದಾರೆ.

ಸುರಪುರ ಸೋಲಿಗೆ ಜೆಡಿಎಸ್ ಕಡೆ ಬೆರಳು ಬೇಡ: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ರಾಜುಗೌಡ ಸೋಲುವುದಕ್ಕೆ ಜೆಡಿಎಸ್ ಕಾರಣ ಎಂದು ಸಭೆಯಲ್ಲಿ ಸ್ಥಳೀಯ ನಾಯಕರು ನೇರವಾಗಿ ಆರೋಪ ಮಾಡಿದ್ದಾರೆ. ಅಸಹಕಾರವೇ ಸೋಲಿಗೆ ಕಾರಣ ಎಂದಿದ್ದಾರೆ. ಆದರೆ ಇದನ್ನು ಒಪ್ಪದ ರಾಜ್ಯ ಉಸ್ತುವಾರಿ, ಮೊದಲು ನಾವು ಪೂರ್ಣ ಪ್ರಮಾಣದ ಪ್ರಯತ್ನ ಮಾಡಿದ್ದೇವೆಯೇ?. ಮಿತ್ರಪಕ್ಷದ ಸಹಕಾರ ಬೇಕು. ಆದರೆ ಅದರ ಮೇಲೆಯೇ ಅವಲಂಬನೆಯಾಗಬಾರದು. ನಮ್ಮ ಬೇಸ್ ಗಟ್ಟಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ಕ್ಷೇತ್ರದ ಅವಲೋಕನಾ ಸಭೆಯನ್ನು ಹಲವು ಕಾರಣಗಳಿಂದಾಗಿ ಮುಂದೂಡಿಕೆ ಮಾಡಲಾಗಿದೆ. ಈ ಕ್ಷೇತ್ರವೂ ಕೂಡ ಮುಖಂಡರ ನಡುವಿನ ಪ್ರತಿಷ್ಠಿಯ ಕಾರಣದಿಂದಾಗಿಯೇ ಕಳೆದುಕೊಳ್ಳಲಾಗಿದೆ ಎನ್ನುವ ಪ್ರಾಥಮಿಕ ವರದಿ ಇದ್ದರೂ ವಸ್ತುಸ್ಥಿತಿಯ ಕುರಿತು ಚರ್ಚೆ ನಡೆಯಬೇಕಿದ್ದು, ಮತ್ತೊಂದು ದಿನ ಸಭೆ ನಿಗದಿಪಡಿಸಲು ನಿರ್ಧರಿಸಲಾಗಿದೆ.

ಏಳೂ ಕ್ಷೇತ್ರಗಳ ಸ್ಥಳೀಯ ಮುಖಂಡರು, ಶಾಸಕರು,ಮಾಜಿ ಶಾಸಕರಿಗೆ ಖಡಕ್ ವಾರ್ನಿಂಗ್ ನೀಡಿರುವ ರಾಜ್ಯ ಉಸ್ತುವಾರಿ ಇನ್ಮುಂದೆ ಪಕ್ಷ ಸೂಚನೆ ನಿರ್ಲಕ್ಷ್ಯ ಸಹಿಸಲ್ಲ. ಲೋಕಸಭಾ ಚುನಾವಣೆಯಲ್ಲಿನ ಹಿನ್ನಡೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮರುಕಳಿಸಬಾರದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, "ಸೋಲಿನ ಅವಲೋಕನ ಗೆಲುವಿಗೆ ಸೋಪಾನ. ಅದರಂತೆ ನಮ್ಮ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ಸೋತಿರುವ ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಕುರಿತು ಅವಲೋಕನ ಸಭೆ ನಡೆಸಲಾಯಿತು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿನ ಕಾರಣಗಳನ್ನು ಅವಲೋಕಿಸಿ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಿರುವ ಪಕ್ಷದ ಕಾರ್ಯಕ್ರಮಗಳು, ಸಂಘಟನಾತ್ಮಕ ಚಟುವಟಿಕೆಗಳೂ ಸೇರಿದಂತೆ ಮುಂದಿನ ಹೋರಾಟಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬೆಳಗಾವಿಗೆ ಗ್ರ್ಯಾಂಡ್ ಎಂಟ್ರಿ: ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು - Priyanka Jarakiholi arrived

ETV Bharat Logo

Copyright © 2024 Ushodaya Enterprises Pvt. Ltd., All Rights Reserved.