ETV Bharat / state

ಲೋಕಸಭೆ ಚುನಾವಣೆ ಸಂದರ್ಭ ರಾಜ್ಯ ಯಾವಾಗಲೂ ಕಾಂಗ್ರೆಸ್ಸಿನ ಪರ ಒಲವು ತೋರಿದೆ: ಸಚಿವ ಶಿವಾನಂದ ಪಾಟೀಲ್​ - Shivananda Patil - SHIVANANDA PATIL

ಕರ್ನಾಟಕ ಜಾತ್ಯತೀತ ರಾಜ್ಯ ತಿಳುವಳಿಕೆ ಇರತಕ್ಕಂತಹ ರಾಜ್ಯ ಎಂದು ಸಚಿವ ಶಿವಾನಂದ್​ ಪಾಟೀಲ್​ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭ ರಾಜ್ಯ ಯಾವಾಗಲೂ ಕಾಂಗ್ರೆಸ್ಸಿನ ಪರ ಒಲವು ತೋರಿದೆ

author img

By ETV Bharat Karnataka Team

Published : Mar 24, 2024, 5:01 PM IST

ವಿಜಯಪುರ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಜೀವ ತುಂಬಿರುವಂತಹ ರಾಜ್ಯ ಕರ್ನಾಟಕ, ಇಂದಿರಾ ಗಾಂಧಿಯವರು ಇದ್ದಾಗ ಆಗಲಿ ಅಥವಾ ಸೋನಿಯಾ ಗಾಂಧಿಯವರಿರಲಿ ಯಾವಾಗಲೂ ಕೂಡ ಈ ರಾಜ್ಯ ಕಾಂಗ್ರೆಸ್ಸಿನ ಪರ ಒಲವು ತೋರಿದೆ ಎಂದು ಸಚಿವ ಶಿವಾನಂದ ಪಾಟೀಲ್​ ಹೇಳಿದರು.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ಜಾತ್ಯತೀತ ರಾಜ್ಯ ತಿಳುವಳಿಕೆ ಇರತಕ್ಕಂತಹ ರಾಜ್ಯ ಈ ಭರವಸೆ ನಮಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಜೀವ ತುಂಬಿರುವಂತಹ ರಾಜ್ಯ ಇದು. ಬಳಿಕ ವಿಜಯಾನಂದ ಕಾಶಪ್ಪನವರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ನಿರ್ಣಯ ತೆಗೆದುಕೊಂಡ ಮೇಲೆ ಈ ಬಗ್ಗೆ ಚಿಂತನೆ ಮಾಡಬಾರದು. ಕಳೆದ ಬಾರಿ ಅವರಿಗೆ ಟಿಕೆಟ್ ಕೊಟ್ಟಿದ್ದೀವಿ, ನಾನೇ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವನಿದ್ದೆ. ನನ್ನ ಶಕ್ತಿಮೀರಿ ಪ್ರಯತ್ನ ಮಾಡಿದೆ ಇದು ವಿಜಯಾನಂದರಿಗೂ ಗೊತ್ತಿದೆ.

ಸರ್ವೆ ರಿಪೋರ್ಟ್​ನಲ್ಲಿ ಹೆಸರಿಲ್ಲ ಅಂತ ವೀಣಾ ಕಾಶಪ್ಪನವರ ಕಣ್ಣೀರು ಹಾಕಿದ ವಿಚಾರಕ್ಕೆ, ಇದನ್ನು ಸರ್ವೇ ಮಾಡಿದವರನ್ನು ಕೇಳಬೇಕು, ನಾನು ಹೇಗೆ ಹೇಳಲಿ. ವೈಯಕ್ತಿಕವಾಗಿ ವಿಜಯಾನಂದ ಕಾಶಪ್ಪನವರ ಭೇಟಿಯಾಗಿ ಮನವೊಲಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೂರಕ್ಕೆ ನೂರು ಪ್ರಯತ್ನ ಮಾಡ್ತೀನಿ, ನಾನು ಅವರಿಗೆ ಮೂರು ಬಾರಿ ಫೋನ್ ಮಾಡಿದ್ದೆ, ಭೇಟಿಯಾಗುವ ಬಗ್ಗೆಯೂ ಕೇಳಿದ್ದೇನೆ, ಅವರು ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಇನ್ನೂ ಟಿಕೆಟ್ ಕೈತಪ್ಪಿದ್ದಕ್ಕೆ ರಕ್ಷಿತಾ ಈಟಿ ಕಣ್ಣೀರು ಹಾಕಿದ ವಿಚಾರಕ್ಕೆ, ರಕ್ಷಿತಾ ಈಟಿ ಹೇಳಿದ್ದಾರಲ್ಲ, ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ ಅಂತ. ಅದನ್ನ ಯಾರು ಹೇಳಲ್ಲ, ಕಣ್ಣೀರು ಎಲ್ಲರಿಗೂ ಇರುತ್ತೆ. ಯಾರು ಟಿಕೆಟ್ ಗಾಗಿ ಅರ್ಜಿ ಹಾಕಿರುತ್ತಾರೋ ಅವರಿಗೆ ಸಿಗಬೇಕು ಅನ್ನುವ ಆಸೆ ಇರುತ್ತೆ. ಅದು ಸ್ವಾಭಾವಿಕ, ಇಂದಲ್ಲ ನಾಳೆ ಅವರಿಗೆ ಭವಿಷ್ಯ ಇದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೂ ನಾಲ್ಕು ವರ್ಷ ಎರಡು ತಿಂಗಳ ಇದೆ, ಸಾಕಷ್ಟು ಅವಕಾಶಗಳಿವೆ, ವೀಣಾ ಕಾಶಪ್ಪನವರಿಗೆ ಏನಾದರೂ ಬೇರೆ ಅವಕಾಶ ಕೊಡಬಹುದು ಎಂದು ಹೇಳಿದರು.

ಬರೀ ಮಂತ್ರಿಗಳ ಮಕ್ಕಳು ಮತ್ತು ಬಂಧುಗಳಿಗೆ ಟಿಕೆಟ್‌ ನೀಡಲಾಗಿದೆ ವಿಚಾರಕ್ಕೆ, ಮೀಡಿಯಾಗಳಲ್ಲಿ ಮಂತ್ರಿಗಳು, ಮಕ್ಕಳು ಅಂತಾ ಹೇಳುತ್ತಾರೆ. ಆದರೇ ಮಂತ್ರಿಗಳ ಮಕ್ಕಳು ಸಮರ್ಥರು ಅಸಮರ್ಥರು ಅನ್ನೋದನ್ನು ವಿಶ್ಲೇಷಣೆ ಮಾಡಬೇಕು ಎಂದರು.

ಇದನ್ನೂ ಓದಿ: ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ: ಸಿ.ಎಂ ಸಿದ್ದರಾಮಯ್ಯ - Loksabha Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.