ಹಾವೇರಿ: ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಸಿಂಚನಾ ಬಸವರಾಜ್ ಓಲೇಕಾರ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. 625 ಅಂಕಕ್ಕೆ 620 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಸಂಪಾದಿಸಿದ್ದಾರೆ. ಕನ್ನಡದಲ್ಲಿ 125, ಹಿಂದಿ - 100, ಇಂಗ್ಲೀಷ್ - 98, ಉಳಿದಂತೆ ಗಣಿತ, ವಿಜ್ಞಾನ, ಸಮಾಜವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ.
ಬಸವರಾಜ್ ಬಾಳಂಬೀಡ ಗ್ರಾಮದಲ್ಲಿ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದಾರೆ. ಮಗಳು ಸಿಂಚನಾ ಹಾವೇರಿಯಲ್ಲಿರುವ ಸೈಂಟಎನ್ಸ್ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ಸಿಂಚನಾಳ ಈ ಸಾಧನೆಗೆ ಶಾಲೆಯ ಸಿಬ್ಬಂದಿ, ಪೋಷಕರು ಬಾಳಂಬೀಡ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮಗಳ ಈ ಸಾಧನೆಗೆ ತಂದೆ ಬಸವರಾಜ್ ಮತ್ತು ತಾಯಿ ಸುರೇಖಾ ಹರ್ಷ ವ್ಯಕ್ತಪಡಿಸಿ, ಮಗಳು ದಿನನಿತ್ಯ ಬಸ್‌ನಲ್ಲಿ ಶಾಲೆಗೆ ಹೋಗಿ ಬಂದು ಮನೆಯಲ್ಲಿ ಓದುತ್ತಿದ್ದಳು. ಏನಾದರೂ ಸಾಧನೆ ಮಾಡುತ್ತಾಳೆ ಅಂದುಕೊಂಡಿದ್ದೆವು. 625ಕ್ಕೆ 625 ಅಂಕ ಪಡೆದುಕೊಳ್ಳುವ ನಿರೀಕ್ಷೆ ಇತ್ತು. ಇದೀಗ 625ಕ್ಕೆ 620 ಅಂಕ ಪಡೆದಿದ್ದಾಳೆ. ಮಗಳ ಸಾಧನೆ ಸಂತಸ ತಂದಿದೆ ಎನ್ನುತ್ತಾರೆ ತಂದೆ ಬಸವರಾಜ್.
ಮೂಲತಃ ಶಾಮಿಯಾನ ಹಾಕುವ ಕಾರ್ಯ ಮಾಡುವ ನಾನು, ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಯಾವುದೇ ಕಾರ್ಯ ನಡೆದರೂ ನಾನೇ ಶಾಮಿಯಾನ ಹಾಕುತ್ತೇನೆ. ಅದರಿಂದ ಜೀವನ ನಡೆಸಿಕೊಂಡು ಬಂದಿದ್ದೇನೆ. ಇದೀಗ ಮಗಳು ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ನನಗೆ ಬಹಳ ಹೆಮ್ಮೆಯಾಗಿದೆ. ಮುಂದೆ ಏನು ಓದಲಿಚ್ಛಿಸುತ್ತಾಳೋ ಅದನ್ನು ಓದಿಸುವದಾಗಿ ಬಸವರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ, ಕುಮಾರಸ್ವಾಮಿಗೆ ಹೈಕೋರ್ಟ್ ನೋಟಿಸ್ - CM Ibrahim Expel case
ಇನ್ನೂ ಸಿಂಚನಾ, ಎಂಬಿಬಿಎಸ್ ಮಾಡಿ ವೈದ್ಯಳಾಗುವ ಕನಸು ಕಂಡಿದ್ದಾಳೆ. ಅವಳ ಕನಸು ನನಸು ಮಾಡಲು ಎಷ್ಟೇ ಕಷ್ಟವಾದರೂ ಸಹ ತಾವು ಪ್ರಯತ್ನಿಸುತ್ತೇವೆ ಎನ್ನುತ್ತಾರೆ ಸಿಂಚನಾ ತಂದೆ ಬಸವರಾಜ್ ಮತ್ತು ತಾಯಿ ಸುರೇಖಾ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಮೊದಲನೆಯವರು ಸಿಂಚನಾ. ಆದರೆ ಎರಡನೇಯವರು ಸಂಜನಾ. ಸಂಜಾನ ಸಹ ಓದಿನಲ್ಲಿ ಮುಂದಿದ್ದಾರೆ. ಓರ್ವ ಮಗಳು ವೈದ್ಯಳನ್ನಾಗಿಸುವ ಮತ್ತು ಮತ್ತೋರ್ವ ಮಗಳನ್ನು ಐಎಎಸ್ ಅಧಿಕಾರಿ ಮಾಡುವ ಕನಸನ್ನು ಈ ಕುಟುಂಬ ಹೊಂದಿದೆ. ಈ ಕುಟುಂಬದ ಆಸೆ ಈಡೇರಲಿ, ಇವರು ಕಂಡ ಕನಸು ನನಸಾಗಲಿ ಎಂಬುದು ನಮ್ಮ ಹಾರೈಕೆ.
ಇದನ್ನೂ ಓದಿ: ಶಿವಮೊಗ್ಗ ಮರ್ಡರ್ ಕೇಸ್: ಗಾಯಗೊಂಡಿದ್ದ ಯಾಸೀನ್ ಖುರೇಷಿ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ - Shivamogga Murder case