ETV Bharat / state

ನೇಹಾ ಸಾವಿನ ಮೇಲೆ ರಾಜಕಾರಣ ಮಾಡಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ: ಶ್ರೀನಿವಾಸ ಮಾನೆ ಆರೋಪ - MLA SRINIVAS MANE

ನೇಹಾ ಹಿರೇಮಠ ಸಾವಿನಲ್ಲಿ ಕೆಲವರು ರಾಜಕಾರಣ ಮಾಡಿ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ.

ಶ್ರೀನಿವಾಸ ಮಾನೆ ಆರೋಪ
ಶ್ರೀನಿವಾಸ ಮಾನೆ ಆರೋಪ
author img

By ETV Bharat Karnataka Team

Published : Apr 21, 2024, 4:43 PM IST

ಶ್ರೀನಿವಾಸ ಮಾನೆ ಆರೋಪ

ಹುಬ್ಬಳ್ಳಿ: ನೇಹಾ ಸಾವಿನಲ್ಲಿ ಅನ್ಯ ಕೋಮಿನ ಯುವಕ ಭಾಗಿಯಾಗಿರುವ ಕಾರಣಕ್ಕೆ ರಾಜಕಾರಣ ಮಾಡಿ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಎಲ್ಲರ ಜವಾಬ್ದಾರಿ ಇರುತ್ತದೆ. ಅಂತರಾಳದಲ್ಲಿ ಮಾನವೀಯತೆ ಇಟ್ಟುಕೊಂಡು, ಸಂತ್ರಸ್ತ ಕುಟುಂಬಕ್ಕೆ ಶಕ್ತಿ ತುಂಬಿ, ಅವರ ಜೊತೆಗೆ ಇರಬೇಕು. ಈ ಸಮಯದಲ್ಲಿ ಸಾವಿನ ಲಾಭ ಪಡೆಯುವುದು ತಪ್ಪು ಎಂದರು.

ನೇಹಾ ಕೊಲೆ ವೈಯಕ್ತಿಕ ಹಿನ್ನೆಲೆಯಲ್ಲಿ ನಡೆದಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಮೃತಳ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಸಿಎಂ ಕೂಡಾ ಇಂತಹ ಘಟನೆಗಳು ವೈಯಕ್ತಿಕ ಕಾರಣದಿಂದ ನಡೆದಿರಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ವೈಯಕ್ತಿಕ ಅಜೆಂಡಾ ಎಂಬುದು ಎರಡು ಸೈಡ್ ಇರಬೇಕೆಂದಿಲ್ಲ, ಒನ್ ಸೈಡ್ ಕೂಡಾ ಇರಬಹುದು. ಅವನಿಗೆ ಸಿಗದೇ ಇರೋದಕ್ಕೆ ಅವರು ವೈಯಕ್ತಿಕ ಅಜೆಂಡಾ ಇಟ್ಟುಕೊಂಡು ಕೊಲೆ ಮಾಡಿರಬಹುದು. ವೈಯಕ್ತಿಕ ಅಂತಾ ಹೇಳಿದರೇ ಸಂತ್ರಸ್ತ ಕುಟುಂಬಕ್ಕೆ ಅವಮಾನ ಮಾಡಿದ ಹಾಗೇ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಮಾನೆ ಸಮರ್ಥಿಸಿಕೊಂಡರು.

ಸಾವಿನಲ್ಲಿ ರಾಜಕಾರಣ ಮಾಡಬಾರದು. ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆಯನ್ನು ಈ ಸಂದರ್ಭದಲ್ಲಿ ಧೈರ್ಯದಿಂದ ಹೇಳಬೇಕಾಗುತ್ತದೆ. ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು. ಕಾಂಗ್ರೆಸ್ ತುಷ್ಟೀಕರಣದಿಂದ ಇಂತಹ ಘಟನೆಗಳು ನಡೆಯುತ್ತವೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದಲ್ಲಿರುವ ಪ್ರತಿಯೊಬ್ಬರ ರಕ್ತದ ಕಣದಲ್ಲಿ ಬಸವತತ್ವ ಇದೆ. ಬಸವತತ್ವ ಇರದೇ ಇರುವವರು ಕಾಂಗ್ರೆಸ್ ಹೊರಗಡೆ ಇದ್ದಾರೆ. ಇಂತಹ ಕೃತ್ಯಕ್ಕೆ ಯಾರು ಪ್ರೋತ್ಸಾಹ ಕೊಡುವುದಿಲ್ಲ. ಅಂಜುಮನ್ ಸಂಸ್ಥೆ ಕೂಡಾ ನೇಹಾ ಬೆನ್ನಿಗೆ ನಿಂತಿದೆ. ಅಷ್ಟೇ ಅಲ್ಲದೇ ಮುನವಳ್ಳಿಯ ಮುಸ್ಲಿಂ ಸಮುದಾಯ ಫಯಾಜ್ ಕುಟುಂಬದ ರಕ್ಷಣೆ ಮಾಡಿಲ್ಲ, ನೇಹಾಳಿಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಕೈಯಲ್ಲಿ ದೇಶ ಸುರಕ್ಷಿತವಾಗಿರಲು ಸಾಧ್ಯವಿಲ್ಲ: ಯಡಿಯೂರಪ್ಪ - Yediyurappa

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.