ETV Bharat / state

ಭಾರತೀಯ ಕ್ರೀಡಾ ಪ್ರಾಧಿಕಾರ ಕುಸ್ತಿ ಡಿಪ್ಲೊಮಾ ಕೋಚಿಂಗ್ ಕೋರ್ಸ್: ರಾಜ್ಯದ ಏಕೈಕ ಕುಸ್ತಿ ಪಟು ಆಯ್ಕೆ - WRESTLING DIPLOMA COACHING COURSE - WRESTLING DIPLOMA COACHING COURSE

ಕಾಮನ್ ವೆಲ್ತ್ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದ ರಫೀಕ್ ಹೋಳಿ ಇದೀಗ ಭಾರತೀಯ ಕ್ರೀಡಾ ಪ್ರಾಧಿಕಾರ ಕುಸ್ತಿ ಡಿಪ್ಲೊಮಾ ಕೋಚಿಂಗ್ ಕೋರ್ಸ್​ಗೆ ರಾಜ್ಯದಿಂದ‌ ಆಯ್ಕೆ ಆಗಿದ್ದಾರೆ. ರಫೀಕ್​ ಅವರು ತಮ್ಮ ಮನದ ಮಾತುಗಳ ಮೂಲಕ ಎಲ್ಲ ಕೋಚ್​ಗಳಿಗೆ ಧನ್ಯವಾದ ತಿಳಿಸಿದ್ದಾರೆ.

STATE WRESTLERS SELECT SPORTS AUTHORITY OF INDIA  WRESTLER RAFIQ HOLI  DAVANAGERE
ಕುಸ್ತಿ ಪಟು ರಫೀಕ್ ಹೋಳಿ ಹೇಳಿಕೆ (ETV Bharat)
author img

By ETV Bharat Karnataka Team

Published : Jul 23, 2024, 7:25 PM IST

ಕುಸ್ತಿ ಪಟು ರಫೀಕ್ ಹೋಳಿ ಹೇಳಿಕೆ (ETV Bharat)

ದಾವಣಗೆರೆ: ಕರ್ನಾಟಕ ರಾಜ್ಯದ ಪೈಲ್ವಾನ್ ರಫೀಕ್ ಹೋಳಿ ಭಾರತೀಯ ಕ್ರೀಡಾ ಪ್ರಾಧಿಕಾರ ಕುಸ್ತಿ ಡಿಪ್ಲೊಮಾ ಕೋಚಿಂಗ್ ಕೋರ್ಸ್​​ಗೆ ಆಯ್ಕೆಯಾಗಿದ್ದಾರೆ. ಇವರು ರಾಜ್ಯದಿಂದ ಆಯ್ಕೆ ಆಗಿರುವ ಏಕೈಕ ಕುಸ್ತಿ ಪಟು ಕೂಡ ಹೌದು. ಮೂಲತಃ ಧಾರವಾಡ ಜಿಲ್ಲೆಯ ನಿವಾಸಿಯಾಗಿರುವ ರಫೀಕ್, ಕಷ್ಟಪಟ್ಟು ಕುಸ್ತಿ ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ನೂರಾರು ಕುಸ್ತಿ ಪಟುಗಳು ಕೋರ್ಸ್​ಗೆ ಅರ್ಜಿ ಹಾಕಿದ್ದರು. ಅಂತಿಮವಾಗಿ ಆಯ್ಕೆ‌ಯಾಗಿರುವ 25 ಜನ ಕ್ರೀಡಾಪಟಗಳ ಪಟ್ಟಿಯಲ್ಲಿ ರಫೀಕ್ ಹೋಳಿ ಆಯ್ಕೆ ಆಗಿದ್ದಾರೆ. ಬರುವ ಸೋಮವಾರದಿಂದ ಪಂಜಾಬ್ ರಾಜ್ಯದ ಪಟಿಯಾಲದ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ‌ಆರಂಭ ಆಗಲಿರುವ ಕೋಚಿಂಗ್ ಕೋರ್ಸ್​ಗೆ ರಫೀಕ್ ತೆರಳಲಿದ್ದಾರೆ.

ವಿಶ್ವ ಕುಸ್ತಿ ಚಾಂಪಿಯನ್​ಶಿಪ್ ಸೇರಿದಂತೆ ಹತ್ತಾರು ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ರಫೀಕ್ ಹೋಳಿ ಸದ್ಯ ಪುಣೆಯ ಡಿಫೆನ್ಸ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಆಯ್ಕೆಯಾದ ಸುದ್ದಿ ತಿಳಿದ ದಾವಣಗೆರೆಯ ಸ್ಪೋರ್ಟ್ಸ್ ಹಾಸ್ಟೆಲ್​ನ ಕ್ರೀಡಾಪಟುಗಳಲ್ಲಿ ಸಂತಸ ಮನೆ ಮಾಡಿದೆ.

ರಫೀಕ್ ಹೇಳಿದ್ದೇನು: ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಸ್ತಿ ಪಟು ರಫೀಕ್ ಹೋಳಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಆಡಿ ಪದಕಗಳನ್ನು ಗಳಿಸಿದ್ದೇನೆ. ಇದಕ್ಕೆ ಕಾರಣಕರ್ತರಾದ ಕೋಚ್​ಗಳಿಗೆ ನಮಿಸಿತ್ತೇನೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಕುಸ್ತಿ ಡಿಪ್ಲೊಮಾ ಕೋಚಿಂಗ್ ಕೋರ್ಸ್​ಗೆ ಅರ್ಜಿ ಹಾಕಿದ್ದೆ. ಒಟ್ಟು ಐದು ಸಾವಿರ ಜನ ಅರ್ಜಿ ಹಾಕಿದ್ರು. ನಾನು ಕೋರ್ಸ್​ಗೆ ಆಯ್ಕೆ ಆಗಿರುವುದು ಸಂತಸ ತಂದಿದೆ. ಕರ್ನಾಟಕ ರಾಜ್ಯದಿಂದ ನಾನು ಒಬ್ಬನೇ ಆಯ್ಕೆ ಆಗಿದ್ದೇನೆ. ಹಲವರಿಗೆ ನಾನು ತರಬೇತುದಾರ ಆಗಬೇಕೆಂಬ ಆಸೆ ಇದೆ‌ ಎಂದು ಹೇಳಿದರು.

ಓದಿ: ವಿದೇಶಗಳಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಕ್ರೀಡಾಪಟುಗಳಿವರು: ಕರ್ನಾಟಕದ ಆಟಗಾರನಿಗೂ ಅವಕಾಶ - Indian origin in Paris Olympic

ETV Bharat Logo

Copyright © 2025 Ushodaya Enterprises Pvt. Ltd., All Rights Reserved.