ETV Bharat / state

ನೈರುತ್ಯ ರೈಲ್ವೆಯಿಂದ ಛತ್ ಪೂಜೆ ಹಬ್ಬಕ್ಕೆ ವಿಶೇಷ ರೈಲು ಸೇವೆ - SPECIAL TRAIN SERVICE

ಈ ವಿಶೇಷ ರೈಲು 22 ಬೋಗಿಗಳನ್ನು ಹೊಂದಿದ್ದು, ರೈಲು ನಿಲ್ಲುವ ನಿಲ್ದಾಣಗಳ ವಿವರವಾದ ಸಮಯಕ್ಕಾಗಿ ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್ www.enquiry.indianrail.gov.in ಅನ್ನು ಪರಿಶೀಲಿಸಲು ತಿಳಿಸಲಾಗಿದೆ.

Hubballi Railway Station
ಹುಬ್ಬಳ್ಳಿ ರೈಲು ನಿಲ್ದಾಣ (ETV Bharat)
author img

By ETV Bharat Karnataka Team

Published : Nov 3, 2024, 3:46 PM IST

ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಛತ್ ಪೂಜೆ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು, ನೈಋತ್ಯ ರೈಲ್ವೆಯಿಂದ ಕೆಎಸ್​ಆರ್ ಬೆಂಗಳೂರು-ದಾನಾಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚರಿಸಲಿದೆ.

ವಿವರಗಳು ಈ ಕೆಳಗಿನಂತಿವೆ: ರೈಲು ಸಂಖ್ಯೆ 06259/06260 ಕೆಎಸ್​ಆರ್ ಬೆಂಗಳೂರು-ದಾನಾಪುರ-ಎಸ್​ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್)

ರೈಲು ಸಂಖ್ಯೆ 06259 ನವೆಂಬರ್ 4ರಂದು ಮಧ್ಯಾಹ್ನ 12ಕ್ಕೆ ಕೆಎಸ್​ಆರ್ ಬೆಂಗಳೂರಿನಿಂದ ಹೊರಡುತ್ತದೆ ಮತ್ತು ನವೆಂಬರ್ 6ರಂದು ಬೆಳಗ್ಗೆ 9ಕ್ಕೆ ದಾನಾಪುರವನ್ನು ತಲುಪುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06260 ದಾನಾಪುರದಿಂದ ನವೆಂಬರ್ 8ರಂದು ರಾತ್ರಿ 8.50ಕ್ಕೆ ಹೊರಟು ನವೆಂಬರ್ 10ರಂದು ಸಂಜೆ 5.40ಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ತಲುಪಲಿದೆ.

ರೈಲು ಎರಡೂ ದಿಕ್ಕುಗಳಲ್ಲಿ ಈ ಕೆಳಗಿನ ನಿಲ್ದಾಣಗಳಲ್ಲಿ ನಿಲ್ಲಲಿದೆ: ಯಲಹಂಕ, ಧರ್ಮಾವರಂ, ಡೋನ್​, ಕಾಚಿಗುಡಾ, ಕಾಜಿಪೇಟ್, ಬಲ್ಹರ್ಷಾ, ನಾಗ್ಪುರ, ಇಟಾರ್ಸಿ, ಜಬಲ್ಪುರ್, ಕಟ್ನಿ, ಸತ್ನಾ, ಪ್ರಯಾಗ್​ರಾಜ್ ಛೋಕಿ, ಪಿಟಿ, ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಅರಾ ಜಂಕ್ಷನ್.

ವಿಶೇಷ ರೈಲು 22 ಬೋಗಿಗಳನ್ನು ಒಳಗೊಂಡಿರುತ್ತದೆ. ಪ್ರತಿ ನಿಲ್ದಾಣದಲ್ಲಿ ವಿವರವಾದ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್ www.enquiry.indianrail.gov.in ಅನ್ನು ಪರಿಶೀಲಿಸಲು ವಿನಂತಿಸಲಾಗಿದೆ. NTES ಅಪ್ಲಿಕೇಶನ್ ಬಳಸಿ ಅಥವಾ 139 ಅನ್ನು ಡಯಲ್ ಮಾಡಿ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಆದ್ಯತೆ ತಿಳಿಯಲು ರೈಲ್ವೆ ಇಲಾಖೆ ಸಮೀಕ್ಷೆ: ವಿಶೇಷ ರೈಲು ಮಾಹಿತಿಯ ಎಸ್​ಎಂಎಸ್​ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.