ETV Bharat / state

ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮ ಹಗರಣದ ಸದ್ದು: ಆಡಳಿತ - ಪ್ರತಿ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ - Valmiki Corporation scam

ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮ ಹಗರಣದ ಸದ್ದು ಜೋರಾಗಿದೆ. ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, 10 ನಿಮಿಷಗಳ ಕಾಲ ಸದನ ಮುಂದೂಡಲಾಗಿತ್ತು.

SPEAKER ADJOURNED THE HOUSE  MONSOON SESSION  BENGALURU  VALMIKI CORPORATION SCAM ASSEMBLY
ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮ ಹಗರಣದ ಸದ್ದು (ETV Bharat)
author img

By ETV Bharat Karnataka Team

Published : Jul 16, 2024, 1:03 PM IST

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣದ ಚರ್ಚೆಗೂ ಮುನ್ನ ಭ್ರಷ್ಟಾಚಾರದ ಕುರಿತಂತೆ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಉಂಟಾದ ಪ್ರಸಂಗ ಇಂದು ವಿಧಾನಸಭೆಯಲ್ಲಿ ನಡೆಯಿತು. ಸದನದಲ್ಲಿ ಗದ್ದಲ ತೀವ್ರಗೊಂಡ ಹಿನ್ನೆಲೆ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯ ವೇಳೆಯ ನಂತರ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ, ಹಣ ವರ್ಗಾವಣೆ ಕುರಿತು ನಿನ್ನೆಯಿಂದ ಆರಂಭವಾಗಿರುವ ಚರ್ಚೆಯನ್ನು ಮುಂದುವರಿಸಲು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಸೂಚನೆ ನೀಡಿದರು.

ಅಶೋಕ್ ಅವರು ಮಾತನಾಡಲು ಎದ್ದು ನಿಂತಾಗ ಆಡಳಿತ ಪಕ್ಷದ ಆಸನದಲ್ಲಿ ಡಿಸಿಎಂ ಡಿ.ಕೆ‌.ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾತ್ರ ಇದ್ದರು. ಆಗ ಆರ್ಥಿಕ ಇಲಾಖೆಯ ಅಧಿಕಾರಿಗಳು ಸದನದಲ್ಲಿ ಇಲ್ಲವೆಂದು ಅಶೋಕ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಅಶ್ವತ್ಥ ನಾರಾಯಣ, ಸುರೇಶ್ ಕುಮಾರ್ ಬೆಂಬಲ ವ್ಯಕ್ತಪಡಿಸಿದರು.

ಈ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳು ಸದನಕ್ಕೆ ಆಗಮಿಸಿದರು. ಆರ್ಥಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿಲ್ಲದಿರುವುದನ್ನು ಕಂಡು ಪ್ರತಿಪಕ್ಷಗಳ ನಾಯಕರು ಮಾತನಾಡುವಾಗ ಕನಿಷ್ಠ ಆರ್ಥಿಕ ಇಲಾಖೆಯ ಅಧಿಕಾರಿಗಳಾದರು ಹಾಜರಿರಬೇಕು ಎಂದರು. ಆಗ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಸಮಯ ವ್ಯರ್ಥ ಮಾಡುವುದು ಬೇಡ ಚರ್ಚೆ ಮುಂದುವರಿಸಿ, ಸಂಬಂಧಪಟ್ಟ ಅಧಿಕಾರಿಗಳು ಬರುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶ್ವತ್ಥ ನಾರಾಯಣ ಅವರು ಹಠಕ್ಕೆ ಬಿದ್ದಂತೆ ಮುಖ್ಯಮಂತ್ರಿಗಳ ಮೇಲೆ ಆರೋಪ ಬಂದಿದೆ. ಹಾಗಾಗಿ ಅವರು ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು ಕಲಾಪದಲ್ಲಿ ಹಾಜರಿರಬೇಕು. ಅವರನ್ನು ಕರೆಸಿ ಎಂದು ಒತಾಯಿಸಿದರು. ಇದರಿಂದ ಎರಡೂ ಕಡೆ ವಾಗ್ವಾದ ನಡೆದವು. ವಾಲ್ಮೀಕಿ ನಿಗಮ ಹಗರಣ ಆರ್ಥಿಕ ಇಲಾಖೆಯ ಆದ್ಯತೆಯನ್ನು ಹೊಂದಿದೆ. ಮುಖ್ಯಮಂತ್ರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.

ಇದರಿಂದ ಸಿಟ್ಟಾದ ಡಿ.ಕೆ. ಶಿವಕುಮಾರ್ ಅವರು, ಏಕವಚನದಲ್ಲಿ 'ನೀನು ಭ್ರಷ್ಟಾಚಾರದ ಪಿತಾಮಹ' ಎಂದು ಆಶ್ವತ್ಥನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಬಿಜೆಪಿ ಶಾಸಕರನ್ನು ಕೆರಳಿಸಿತು. ಬಿಜೆಪಿ ಸದಸ್ಯರು ಎದ್ದು ನಿಂತು ಗದ್ದಲ ಆರಂಭಿಸಿದರು. ಇದಕ್ಕೆ ಜೆಡಿಎಸ್ ನಾಯಕ ಸದಸ್ಯರು ಕೈಜೋಡಿಸಿದರು. ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಸೂಕ್ತ ಸಮಜಾಯಿಸಿ ನೀಡಬೇಕು. ಕ್ಷಮೇ ಕೇಳಬೇಕು ಎಂದು ಅಶ್ವತ್ಥನಾರಾಯಣ ಪಟ್ಟು ಹಿಡಿದರು. ಆರೋಪ ಮಾಡಲಾದ ಪದಗಳನ್ನು ಕಡತದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.

ಇದರಲ್ಲಿ ಮುಖ್ಯಮಂತ್ರಿ ಅವರ ಪಾತ್ರವಿದೆ ಎಂದು ಹೇಳಿರುವುದು ಸರಿ ಇದೆಯೇ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು. ಯಾವುದೇ ನೋಟಿಸ್ ನೀಡದೇ ನಮ್ಮ ಪಕ್ಷದ ಶಾಸಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಕ್ಷೇಪಿಸಿದರು. ನಿಯಮಾವಳಿಗಳನ್ನು ಮೀರಿ ಸದಸ್ಯರ ಹೆಸರು ಹೇಳಬಹುದೇ?. ನಾನು ನಿಮ್ಮ ಹೆಸರನ್ನು ಹೇಳಬಹುದೇ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ವಾದ, ಪ್ರತಿವಾದ ನಡೆದು ಗದ್ದಲ ಉಂಟಾಗಿದ್ದರಿಂದ ಸಮಯ ವ್ಯರ್ಥ ಮಾಡುವುದು ಬೇಡ ಚರ್ಚೆ ಮುಂದುವರಿಸಿ ಎಂದು ಉಪಸಭಾಧ್ಯಕ್ಷರು ಸಲಹೆ ನೀಡಿದರು. ಆಗ ಬಿಜೆಪಿ ಶಾಸಕರು, ಕಾಂಗ್ರೆಸ್​​ನವರು ದಲಿತರ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು, ಆಪರೇಷನ್ ಕಮಲದ ಮೂಲಕ ಯಾರು ಲೂಟಿ ಮಾಡಿದ್ದು ಎಂದು ಪ್ರತಿ ದಾಳಿ ನಡೆಸಿದರು. ಅಷ್ಟರಲ್ಲೇ ಪೀಠಕ್ಕೆ ಆಗಮಿಸಿದ ಸ್ಪೀಕರ್ ಯು.ಟಿ. ಖಾದರ್, ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಆದರೆ ಎರಡು ಕಡೆಯಿಂದಲೂ ಗದ್ದಲ ಹೆಚ್ಚಾಗಿದ್ದರಿಂದ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಓದಿ: 2ನೇ ದಿನದ ವಿಧಾನಸಭೆ ಮುಂಗಾರು ಅಧಿವೇಶನ: ನೇರಪ್ರಸಾರ - Assembly Session

ETV Bharat Logo

Copyright © 2024 Ushodaya Enterprises Pvt. Ltd., All Rights Reserved.