ETV Bharat / state

ಹುಬ್ಬಳ್ಳಿ: ಕಚ್ಚಿದ ಹಾವು ಕೊಂದು ಚೀಲದಲ್ಲಿ ತುಂಬಿ ಆಸ್ಪತ್ರೆಗೆ ಬಂದ ಯುವಕ - Snake Bite

author img

By ETV Bharat Karnataka Team

Published : 10 hours ago

Updated : 7 hours ago

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ತನಗೆ ಕಚ್ಚಿದ ಹಾವನ್ನು ಕೊಂದು ಚೀಲದಲ್ಲಿ ಹಾಕಿ ಯುವಕ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಘಟನೆ ಹುಬ್ಬಳ್ಳಿಯ ಇಂಗಳಗಿ ಗ್ರಾಮದಲ್ಲಿ ನಡೆದಿದೆ.

Young man and his Father
ಗಾಯಾಳು ಯುವಕ ಹಾಗು ಹಾವು ಹಿಡಿದಿರುವ ಯುವಕನ ತಂದೆ (ETV Bharat)

ಹುಬ್ಬಳ್ಳಿ: ತಂದೆಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಹಾವು ಕಚ್ಚಿದ್ದು, ಕೂಡಲೇ ಹಾವನ್ನು ಹಿಡಿದುಕೊಂಡು ಯುವಕ‌ ಹಾಗೂ ಆತನ ತಂದೆ ಆಸ್ಪತ್ರೆಗೆ ಬಂದ ಘಟನೆ ಬುಧವಾರ ಸಂಜೆ ಇಂಗಳಗಿ ಗ್ರಾಮದಲ್ಲಿ ನಡೆಯಿತು. ಇಂಗಳಗಿ ಗ್ರಾಮದ ಫಕೀರಪ್ಪ ಅಣ್ಣಿಗೇರಿ ಹಾವು ಕಡಿತಕ್ಕೊಳಗಾದವ.

ಹುಬ್ಬಳ್ಳಿ: ಕಚ್ಚಿದ ಹಾವು ಕೊಂದು ಚೀಲದಲ್ಲಿ ತುಂಬಿ ಆಸ್ಪತ್ರೆಗೆ ಬಂದ ಯುವಕ (ETV Bharat)

ತಂದೆಯೊಂದಿಗೆ ಶೇಂಗಾ ಕೀಳಲು ಹೋಗಿದ್ದಾಗ ಯುವಕನಿಗೆ ಹಾವು ಕಚ್ಚಿದೆ. ಕೂಡಲೇ ಹಾವಿನ ತಲೆ ಜಜ್ಜಿ ಕೊಂದು ಹಾಕಿದ್ದಾನೆ. ನಂತರ ತಂದೆಯ ಜೊತೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಯುವಕನ ತಂದೆ ಈರಪ್ಪ ಅಣ್ಣಿಗೇರಿ ಪ್ರತಿಕ್ರಿಯಿಸಿ, "ಹೊಲದಲ್ಲಿ ಕೆಲಸ ಮಾಡುವಾಗ ಮಗನಿಗೆ ಹಾವು ಕಚ್ಚಿತು. ಕೂಡಲೇ ಹಾವನ್ನು ಜಜ್ಜಿ ಹಾಕಿ ಕೊಂದು ಚೀಲದಲ್ಲಿ ಹಾಕಿಕೊಂಡು ಬಂದು ವೈದ್ಯರಿಗೆ ತೋರಿಸಿದ್ದಾನೆ. ಆಗ ವೈದ್ಯರು ಹೊರ ಹಾಕಲು ಹೇಳಿದರು. ಅದು ಚಿಣಗೇನ ಹಾವು. ಮಗ ವೈದ್ಯರಿಗೆ ಹಾವನ್ನು ತೋರಿಸಿ, ಇದೇ ಹಾವು ಕಚ್ಚಿದೆ, ಚಿಕಿತ್ಸೆ ಕೊಡಿ ಎಂದು ದಾಖಲಾಗಿದ್ದಾನೆ" ಎಂದು ಹೇಳಿದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ಮಂಗಳೂರು: ಕನ್ನಡಿ ಹಾವು ಕಚ್ಚಿದರೂ ವಿಷರಹಿತ ಹಾವೆಂದು ಭಾವಿಸಿದ್ದ ವ್ಯಕ್ತಿ ಸಾವು - Snake Bite

Last Updated : 7 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.