ಬೆಂಗಳೂರು: ಎಸ್ಐಟಿ ಸರಿಯಾಗಿ ಕೆಲಸ ಮಾಡ್ತಿದೆ. ನಮಗೆ, ಸಿಎಂಗೆ ಯಾವುದನ್ನು ಬ್ರೀಫ್ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಹಾಸನ ಜೆಡಿಎಸ್ ಸಂಸದರ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ವಿಚಾರವಾಗಿ ಅವರು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಎಸ್ಐಟಿ ರಿಪೋರ್ಟ್ ಮಂಡ್ಯ ಶಾಸಕರಿಗೆ ಸಿಗುತ್ತೆ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅನೇಕ ವಿಚಾರವನ್ನು ಸಾರ್ವಜನಿಕಗೊಳಿಸುವ ಹಾಗಿಲ್ಲ. ಅದು ತನಿಖೆ ಆಗ್ತಿದೆ. ಮಂಡ್ಯ ಶಾಸಕರಿಗೆ ಯಾರು ಬ್ರೀಫ್ ಮಾಡ್ತಾರೆ?. ಆರೋಪ ಮಾಡೋದು ಸುಲಭ. ಎಸ್ಐಟಿ ಸರಿಯಾಗಿ ಕೆಲಸ ಮಾಡುತ್ತೆ. ಯಾವ ಮುಲಾಜಿಗೆ ಒಳಪಡಲ್ಲ ಎಂದರು.
ಪ್ರಜ್ವಲ್‌ನನ್ನು ವಿದೇಶದಿಂದ ಕರೆ ತರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರೊಸೀಜರ್ ನಡೆಯುತ್ತಿದೆ, ಅದು ನಿಲ್ಲಲ್ಲ. ಅವರನ್ನು ಕರೆದುಕೊಂಡು ಕಾನೂನು ಕ್ರಮ ಕೈಗೊಳ್ಳುವರೆಗೂ ಕ್ರಮ ತೆಗೆದುಕೊಳ್ಳುತ್ತೇವೆ. ಬಿಜೆಪಿಯವರು ಸರ್ಕಾರ ಒಳ್ಳೆಯ ಕೆಲಸ ಮಾಡುತ್ತದೆ ಅಂತ ಹೇಳಲ್ಲ ಎಂದು ಹೇಳಿದರು.
ಅಂಜಲಿ ಹತ್ಯೆ ಆರೋಪಿ ಅರೆಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಆರೋಪಿಯ ಬಂಧನವಾಗಿದೆ. ಕಾನೂನಿನ ಕ್ರಮ ಆಗುತ್ತೆ. ಇದ್ರಲ್ಲಿ ಯಾವುದೇ ಮುಲಾಜಿಲ್ಲ. ಪೊಲೀಸರ ಲೋಪವೂ ಇದೆ. ಅದಕ್ಕೆ ಸಸ್ಪೆಂಡ್ ಮಾಡಲಾಗಿದೆ. ಮೊದಲೇ ದೂರು ಕೊಟ್ಟಿಲ್ಲ, ತಿಳಿಸಿದ್ದರು ಎಂಬ ವಿಚಾರವಿದೆ. ಅವರ ಪೋಷಕರು ಮೊದಲೇ ಹೇಳಿದ್ದೆವು ಅಂದಿದ್ದಾರೆ ಎಂದು ತಿಳಿಸಿದರು.
ಇಂದು ಸಿಎಂ ಸಭೆ ವಿಚಾರವಾಗಿ ಮಾತನಾಡಿ, ಯಾವ ವಿಚಾರನೋ ಗೊತ್ತಿಲ್ಲ. ಅಜೆಂಡಾ ಇನ್ನೂ ಸಿಕ್ಕಿಲ್ಲ. ಮಳೆ ಪ್ರಾರಂಭವಾಗಿದೆ. ಆದರೆ ಬರಗಾಲದ ಪರಿಣಾಮ ಇನ್ನೂ ಕಡಿಮೆಯಾಗಿಲ್ಲ. ಈ ವಿಚಾರವೂ ಸಿಎಂ ಚರ್ಚೆ ಮಾಡ್ತಾರೆ ಅಂದು ಕೊಂಡಿದ್ದೇನೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಕೊಲೆ ಆರೋಪಿ ಬಂಧನ: ರೈಲಿನಿಂದ ಬಿದ್ದು, ತಲೆ ಮುಖಕ್ಕೆ ಗಾಯ - Anjali Murder Accused Arrested