ETV Bharat / state

ಬಿಟ್ ಕಾಯಿನ್ ಹಗರಣ: ತಲೆಮರೆಸಿಕೊಂಡ ಡಿವೈಎಸ್​ಪಿ ಸುಳಿವು ನೀಡಿದರೆ ಬಹುಮಾನ; ಎಸ್ಐಟಿ ಘೋಷಣೆ - Bitcoin Scam

ಬಿಟ್ ಕಾಯಿನ್ ಹಗರಣ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿತ ಡಿವೈಎಸ್ಪಿ ಬಗ್ಗೆ ಸುಳಿವು ನೀಡಿದರೆ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಎಸ್​ಐಟಿ ಘೋಷಿಸಿದೆ.

bitcoin scam
ಬಿಟ್ ಕಾಯಿನ್ ಹಗರಣ
author img

By ETV Bharat Karnataka Team

Published : Mar 16, 2024, 8:37 PM IST

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿತ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್​​ ಬಗ್ಗೆ ಸುಳಿವು ನೀಡಿದರೆ ಸೂಕ್ತ ಬಹುಮಾನ ನೀಡುವುದಾಗಿ ಸಿಐಡಿಯ ವಿಶೇಷ ತನಿಖಾ ತಂಡ ಘೋಷಿಸಿದೆ.

bitcoin scam
ಡಿವೈಎಸ್​ಪಿ

ನಾಪತ್ತೆ ಆಗಿರುವ ಶ್ರೀಧರ್ ಪೂಜಾರ್ ವಿರುದ್ಧ ನಗರದ 1 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕಲಂ 82 ರ ನಾಗರಿಕ ಅಪರಾಧ ಸಂಹಿತೆ ಕಾಯ್ದೆ (ಸಿಆರ್​​ಪಿಸಿ) ಅಡಿ ಘೋಷಿತ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೀಗಾಗಿ, ಆರೋಪಿತ ಡಿವೈಎಸ್​​ಪಿ ಇರುವಿಕೆ ಬಗ್ಗೆ ಮಾಹಿತಿ ನೀಡಿದಲ್ಲಿ ಅಥವಾ ಹಿಡಿದು ಕೊಟ್ಟರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಲಾಗಿದೆ.

ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಆರೋಪಿತನ ಬಗ್ಗೆ ಮಾಹಿತಿ ಸಿಕ್ಕರೆ ದೂರವಾಣಿ ಸಂಖ್ಯೆ - 080 22094485/ 22094498 ಹಾಗೂ ಮೊಬೈಲ್ ಸಂಖ್ಯೆ 9480800181, 944819915 ಕ್ಕೆ ಕರೆ ಮಾಡಬಹುದಾಗಿದೆ ಎಂದು ಸಿಐಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮ ಸಂಬಂಧ ಸಿಐಡಿಯ ಎಸ್ಐಟಿ ತಂಡ 2020 ರಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆಗಿನ ಇನ್ಸ್​ಪೆಕ್ಟರ್​​ಗಳಾಗಿದ್ದ ಶ್ರೀಧರ್ ಕೆ. ಪೂಜಾರ್, ಲಕ್ಷ್ಜೀಕಾಂತಯ್ಯ ಹಾಗೂ ಚಂದ್ರಾದರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನನ್ನು ಬಂಧಿಸಿದ್ದು, ಕ್ರಿಪ್ಟೊ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಲಕ್ಷ್ಮೀಕಾಂತಯ್ಯನನ್ನು ಬಂಧಿಸಿತ್ತು.

ಕಳೆದ ತಿಂಗಳು 27 ರಂದು ಸಿಟಿ ಸಿವಿಲ್ ಕೋರ್ಟ್ ಬಳಿ ಡಿವೈಎಸ್​​ಪಿ ಶ್ರೀಧರ್ ಪೂಜಾರ್ ಇರುವ ಬಗ್ಗೆ ಮಾಹಿತಿ ಅರಿತು ಬಂಧಿಸಲು ಹೋಗಿದ್ದ ಎಸ್ಐಟಿ ತಂಡದ ಇನ್ಸ್​ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ಟೀಂನಲ್ಲಿನ ಎಎಸ್ಐ ಭಾಸ್ಕರ್ ಮೇಲೆ ಕಾರು ಹತ್ನಿಸಿ ಪರಾರಿಯಾಗಿದ್ದರು. ಈ ಸಂಬಂಧ ಎಎಸ್ಐ ಭಾಸ್ಕರ್ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಡಿವೈಎಸ್​​ಪಿ ಬಂಧನಕ್ಕೆ ನಿರಂತರ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗದ ಪರಿಣಾಮ ಇದೀಗ ಅವರ ಬಗ್ಗೆ ಸುಳಿವು ನೀಡಿದರೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್​ಐಟಿ ತಿಳಿಸಿದೆ.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಮತ್ತೋರ್ವ ಪೊಲೀಸ್ ಇನ್ಸ್‌ಪೆಕ್ಟರ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.