ಹುಬ್ಬಳ್ಳಿ: "ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ನೀವೇನು ಶುದ್ಧ ಅಲ್ಲ, ಅನ್ನೋ ತರಹ ಹೆದರಿಸಿ, ನಾನು ನಿಮ್ಮದು ಹೊರಗೆ ತೆಗೆಯುತ್ತೇವೆ ಎಂದು ಸಿದ್ದರಾಮಯ್ಯ ಹೆದರಿಸುತ್ತಿದ್ದಾರೆ" ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, "ಕಾಂಗ್ರೆಸ್ ಹೈಕಮಾಂಡ್ಗೆ ಕಮಾಂಡ್ ಇಲ್ಲ. ನಮ್ಮ ರಾಜ್ಯದ ದುರಂತ ನೋಡಿ. ನ್ಯಾಷನಲ್ ಲೆವಲ್ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ A1, A2. ಇಲ್ಲಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ A1, A2" ಎಂದರು.
ಜಮೀರ್ ಹೇಳಿಕೆ ಕೋರ್ಟ್ ಗಮನಿಸುತ್ತೆ: "ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಕೆಲವರು ಬೇಲ್ ಮೇಲೆ ಹೊರಗಡೆ ಇದ್ದಾರೆ. ಎಲ್ಲ ಸಂಗತಿಗಳಿಗೂ ಇವರು ಭಯಭೀತರಾಗಿದ್ದಾರೆ. ಜಮೀರ್ ಅಹಮ್ಮದ್ ಅವರ ಹೇಳಿಕೆಯನ್ನು ಕೋರ್ಟ್ ಗಮನಿಸುತ್ತೆ. ಸಿದ್ದರಾಮಯ್ಯ ಅವರನ್ನು ಬಂಧಿಸುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟದ್ದು. ಅವರು ಕಾನೂನು ಹೋರಾಟ ಮಾಡಬಹುದು, ನಾವು ಕೂಡಾ ಕಾನೂನು ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಯಾವಾಗಲೂ ಸಂವಿಧಾನವನ್ನು ಬುಡಮೇಲು ಮಾಡುವ ಕೆಲಸ ಮಾಡಿದೆ" ಎಂದರು.
ನಡ್ಡಾ, ನಿರ್ಮಲಾ ಸೀತಾರಾಮನ್ ಮೇಲೆ ದೂರು ದಾಖಲಿಸಲು ಆದೇಶ ಕುರಿತು ಪ್ರತಿಕ್ರಿಯಿಸಿ, "ಅದಕ್ಕೆ ಇದಕ್ಕೆ ಹೋಲಿಕೆ ಮಾಡಲು ಆಗುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಅವಧಿಯಲ್ಲಿ ಕೂಡಾ ಎಲೆಕ್ಟೋರಲ್ ಬಾಂಡ್ನಲ್ಲಿ ಹಣ ತೆಗೆದುಕೊಂಡಿದ್ದಾರೆ. ಎಲೆಕ್ಟೋರಲ್ ಬಾಂಡ್ ವಿಚಾರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧವೂ ದೂರು ಆಗಬೇಕಾಗುತ್ತದೆ" ಎಂದರು.
ಅವರೇ ಒಪ್ಪಿಕೊಂಡು ಈಗ ದಿನ ಬೆಳಗಾದರೆ ರಾಜ್ಯಪಾಲರನ್ನು ಬೈತಾರೆ: ಸಿದ್ದರಾಮಯ್ಯ ಅವರು 62 ಕೋಟಿ ಮೌಲ್ಯದ 14 ಸೈಟ್ ಪಡೆದುಕೊಂಡಿದ್ದಾರೆ. ಇದನ್ನು ಅವರೇ ಹೇಳಿದ್ದಾರೆ. ದಿನಾ ಬೆಳಗ್ಗೆ ರಾಜ್ಯಪಾಲರನ್ನು ಬೈತಾರೆ. ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆ ಅಂತಾರೆ. ನೀವು ಇರೋ ಕಾಲದಲ್ಲಿ ಯಾರ ಯಾರ ಮೇಲೆ ಕೇಸ್ ಹಾಕಿದ್ರಿ. ಕೋರ್ಟ್ ಹೇಳಿದ ನಂತರವೂ ಷಡ್ಯಂತ್ರ ಅಂತಾಗಿದ್ರೆ, ಸಿಬಿಐಗೆ ಕೊಡಿ. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಬ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಸಿಬಿಐಗೆ ಕೊಡಲು ಭಯ ಕಾಡ್ತಿದೆಯಾ? ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಅವರ ಕುಟುಂಬ ಮುಖ್ಯ. ರಾಜ್ಯಪಾಲರ ವಿರುದ್ಧ ಮಾತಾಡೋದರಲ್ಲಿ ಯಾವ ಅರ್ಥವೂ ಇಲ್ಲ" ಎಂದರು.
ನೈತಿಕವಾಗಿ ಕಾಂಗ್ರೆಸ್ ದಿವಾಳಿ ಎದ್ದಿದೆ: ಯಡಿಯೂರಪ್ಪ ವಿಚಾರದಲ್ಲಿ ಸಿದ್ದರಾಮಯ್ಯ ಏನು ಹೇಳಿದ್ರು ಎಲ್ಲ ಗೊತ್ತಿದೆ. ಕಾಂಗ್ರೆಸ್ ನೈತಿಕವಾಗಿ ದಿವಾಳಿ ಎದ್ದು ಹೋಗಿದೆ. 2014ರಲ್ಲಿ ಇವರು ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡ್ತೀದ್ದಾರೆ ಅಂತಿದ್ರು. ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು. ನಿಮಗೆ ತಾಕತ್ ಇದ್ದರೆ ಸಿಬಿಐಗೆ ಕೊಡಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಲ್ಲ. ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ಕೊಡಬೇಕು. ಗೋದ್ರಾ ಘಟನೆಯಲ್ಲಿ ಮೋದಿ ಅವರ ಮೇಲೆ ಎಫ್ಐಆರ್ ದಾಖಲಾಗಿರಲಿಲ್ಲ. ಅಮಿತ್ ಶಾ ಅವರನ್ನು ಅರೆಸ್ಟ್ ಮಾಡಿದ್ರು. ಅಮಿತ್ ಶಾ, ಮೋದಿ ಅವರನ್ನು ಸಿಲುಕಿಸಿ ಹಾಕೋ ಪ್ರಯತ್ನ ಮಾಡಿದ್ರು. ಗೋದ್ರಾ ಘಟನೆಯಲ್ಲಿ ಎಲ್ಲೂ ಮೋದಿ ಪಾತ್ರ ಇಲ್ಲ. ಅವರ ಮೇಲೆ ಆರೋಪ ಮಾಡಿದ್ರು. ಕಾಂಗ್ರೆಸ್ ಪ್ರಜಾಪ್ರಭುತ್ವದ ವಿರೋಧಿ ಪಾರ್ಟಿ" ಎಂದರು.
ರೆಡ್ ಹ್ಯಾಂಡ್ ಆಗಿ ಸಿಕ್ಕರೂ ಗವರ್ನರ್ ಮೇಲೆ ಆರೋಪ: "ಅಹಿಂದ ಹೆಸರಲ್ಲಿ ಸಮಾಜವಾದಿ ಎಂದು ಅಡಳಿತ ಕ್ಕೆ ಬಂದವರು. ಮೊದಲು ರೆಡ್ ಹ್ಯಾಂಡ್ ಆಗಿ ಸಿಕ್ಕ ನಂತರ, ಗವರ್ನರ್ ಮೇಲೆ ಆರೋಪ ಮಾಡಿದ್ರು. ನಮ್ಮ ರಾಜ್ಯದ ದುರಂತ ಏನಂದ್ರೆ ರಾಜ್ಯಪಾಲರ ಫೋಟೋಗೆ ಚಪ್ಪಲಿ ಹಾರ ಹಾಕಿದ್ರು. ಆದ್ರು ಸರ್ಕಾರ ಏನೂ ಕ್ರಮ ಕೈಗೊಳ್ಳಲಿಲ್ಲ. ಸಿದ್ದರಾಮಯ್ಯ ಆಡಳಿತ ವ್ಯವಸ್ಥೆ ಯಾವ ರೀತಿ ಇದೆ ಅನ್ನೋದಕ್ಕೆ ಇದು ಉದಾಹರಣೆ. ಸಿದ್ದರಾಮಯ್ಯ ಸಾಮಾನ್ಯವಾಗಿ ನನ್ನ ಪ್ರಶ್ನೆಗೆ ಉತ್ತರ ಕೊಡಲೇ ಇಲ್ಲ. ಅವರಿಗೆ ಅನಕೂಲ ಆಗೋ ಪ್ರಶ್ನೆಗೆ ಉತ್ತರ ಕೊಡ್ತಾರೆ. ರಾಜ್ಯದ ಬಹುತೇಕ ಕಡೆ ವಿಧವಾ ವೇತನ, ವೃದ್ಧಾಪ್ಯ ವೇತನ, ವಿದ್ಯಾರ್ಥಿ ವೇತನ ಬರ್ತಾ ಇಲ್ಲ. ರಾಜ್ಯವನ್ನು ಈ ಸ್ಥಿತಿಗೆ ತಂದು ರಾಜ್ಯಪಾಲರ ಮೇಲೆ ಹರಿಹಾಯ್ದರು. ಹೈಕೋರ್ಟ್ ಸುದೀರ್ಘವಾದ ವಿಚಾರಣೆ ಮಾಡಿದ ಬಳಿಕ ಷಡ್ಯಂತ್ರ ಅಂತಾರೆ. ಏನಿದು ಅನ್ನೋದೆ ಅರ್ಥ ಆಗತ್ತಿಲ್ಲ" ಎಂದರು.
"ಸಿದ್ದರಾಮಯ್ಯ ಸಂಪೂರ್ಣವಾಗಿ ನೈತಿಕತೆ ಬಿಟ್ಟಿದ್ದಾರೆ. ಲೋಕಾಯುಕ್ತ ಎಸ್ಪಿ ಇರಲ್ಲ ಅಂದ್ರೆ ಏನರ್ಥ? ಸ್ನೇಹಮಯಿ ಕೃಷ್ಣ ಎಸ್ಪಿ ಇಲ್ಲ ಎಂದು ದೂರು ಕೊಡುವ ತನಕ ಹೋಗಿದೆ ಅಂದ್ರೆ ಏನರ್ಥ?" ಎಂದು ಜೋಶಿ ಪ್ರಶ್ನಿಸಿದರು.