ETV Bharat / state

'ನನ್ನ ತಿಥಿ ಬೇಡ, ಪ್ರತಿ ವರ್ಷ ಗಾಂಧಿ ಜಯಂತಿ ಆಚರಿಸಿ': ಅಪ್ಪಟ ಗಾಂಧಿವಾದಿಯ ಸ್ಫೂರ್ತಿದಾಯಕ ಕಥೆ - Gandhi Jayanti - GANDHI JAYANTI

ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧಿ ಬಸಪ್ಪನವರ ಕುಟುಂಬದ ಸದಸ್ಯರೆಲ್ಲರೂ ಪ್ರತಿ ವರ್ಷವೂ ಗಾಂಧಿ ಜಯಂತಿ ಆಚರಿಸಿಕೊಂಡು ಬರುತ್ತಿದೆ. ಈ ಕುಟುಂಬಸ್ಥರು ತಮ್ಮ ತಂದೆಯವರ ಮಾತಿನಂತೆ ಯುವ ಜನತೆಗೆ ಗಾಂಧೀಜಿ ತತ್ವ, ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

7 ದಶಕಗಳಿಂದ ಗಾಂಧಿ ಜಯಂತಿ ಆಚರಿಸುತ್ತಿತ್ತಾ ಬರುತ್ತಿರುವ ಗಾಂಧಿ ಬಸಪ್ಪ ಕುಟುಂಬ
7 ದಶಕಗಳಿಂದ ಗಾಂಧಿ ಜಯಂತಿ ಆಚರಿಸುತ್ತಿರುವ ಗಾಂಧಿ ಬಸಪ್ಪ ಕುಟುಂಬ (ETV Bharat)
author img

By ETV Bharat Karnataka Team

Published : Oct 2, 2024, 7:29 AM IST

ಶಿವಮೊಗ್ಗ: ಇಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆ ನಡೆಯುತ್ತಿದೆ. ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗತ್ತಿನ ಕೋಟ್ಯಂತರ ಜನರಿಗೆ ಗಾಂಧೀಜಿ ಆದರ್ಶಪ್ರಾಯ. ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು 'ಅಂತಾರಾಷ್ಟ್ರೀಯ ಅಹಿಂಸಾ ದಿನ'ವನ್ನಾಗಿಯೂ ಆಚರಣೆ ಮಾಡಲಾಗುತ್ತದೆ.

ಮಹಾನ್​ ವ್ಯಕ್ತಿಯ ತತ್ವ, ಸಿದ್ಧಾಂತವನ್ನು ಕಳೆದ ಏಳು ದಶಕಗಳಿಂದ ಶಿವಮೊಗ್ಗದ ಕುಟುಂಬವೊಂದು ಅನುಸರಿಸುತ್ತಾ ಬರುತ್ತಿದೆ. ನಗರದ ಸ್ವಾತಂತ್ರ್ಯ ಹೋರಾಟಗಾರಾದ ಗಾಂಧಿ ಬಸಪ್ಪನವರ ಕುಟುಂಬದ ಸದಸ್ಯರೆಲ್ಲರೂ ಪ್ರತಿ ವರ್ಷ ನಗರದ ಕುವೆಂಪು ರಂಗಮಂದಿರದಲ್ಲಿ ಗಾಂಧಿ ಜಯಂತಿ ಆಚರಿಸಿಕೊಂಡು ಬರುತ್ತಿದ್ದು, ಯುವಜನರಿಗೆ ಗಾಂಧೀಜಿಯ ಆದರ್ಶಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಗಾಂಧಿ ಬಸಪ್ಪ ಪುತ್ರರ ಪ್ರತಿಕ್ರಿಯೆ (ETV Bharat)

ಬಸಪ್ಪನವರ ಪರಿಚಯ: ಗಾಂಧೀಜಿ ಕರೆ ನೀಡಿದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಬಸಪ್ಪನವರು ಸ್ವಾತಂತ್ಯ ಹೋರಾಟಕ್ಕೆ ಅಡಿಯಿಡುತ್ತಾರೆ. ಶಿವಮೊಗ್ಗದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸೇರಿ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ತಮ್ಮ ಹೋರಾಟಗಳಿಂದ ಅನೇಕ ಸಲ ಸೆರೆವಾಸವನ್ನೂ ಅನುಭವಿಸಿದ್ದಾರೆ.

ಗಾಂಧೀಜಿ ಹತ್ಯೆ ನಡೆದಾಗ ಬಸಪ್ಪನವರು ತೀವ್ರ ಆಘಾತಕ್ಕೀಡಾಗಿದ್ದರು. ಮೂರು ದಿನಗಳ ಕಾಲ ತಮ್ಮ ಕೋಣೆಯಲ್ಲೇ ಇದ್ದು, ಯಾರೊಂದಿಗೂ ಮಾತನಾಡದೆ ಚರಕದಲ್ಲಿ ನೂಲು ನೇಯುತ್ತಾ ಉಪವಾಸ ಮಾಡಿದ್ದರು. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ನಾಗಪ್ಪ ಶ್ರೇಷ್ಠಿಗಳು ಬಂದು ಬಸಪ್ಪನವರನ್ನು ಸಮಾಧಾನಪಡಿಸಿ, ನೀರು ಕುಡಿಸುವ ಮೂಲಕ ಉಪವಾಸ ಅಂತ್ಯಗೊಳಿಸಿದ್ದರು.

ಗಾಂಧಿ ಬಸಪ್ಪ
ಗಾಂಧಿ ಬಸಪ್ಪ (ETV Bharat)

ಬಸಪ್ಪನವರು ಗಾಂಧಿ ಬಸಪ್ಪ ಆಗಿದ್ದು ಹೇಗೆ?: ಗಾಂಧೀಜಿಯ ತತ್ವ, ಸಿದ್ಧಾಂತಗಳನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಗಾಂಧಿ ಜಯಂತಿಯಂದು ತಾವೇ ಸಹ ಸಂಸ್ಥಾಪಕರಾಗಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಶಾಲಾ ಆವರಣದಲ್ಲಿ ಉಪನ್ಯಾಸ, ಚರ್ಚೆ, ಭಜನೆ ನಡೆಸಿಕೊಂಡು ಬರುತ್ತಿದ್ದರು. ಹೀಗಾಗಿ ಇವರನ್ನು ಜನರು 'ಗಾಂಧಿ ಬಸಪ್ಪ' ಎಂದು ಕರೆಯಲು ಪ್ರಾರಂಭಿಸಿದ್ದರು.

ಗಾಂಧಿ ಬಸಪ್ಪನವರು ಬದುಕಿನ ಕೊನೆಯ ದಿನಗಳಲ್ಲಿ ತಮ್ಮ ನಾಲ್ವರು ಗಂಡು ಮಕ್ಕಳು ಹಾಗೂ ಕುಟುಂಬಸ್ಥರನ್ನು ಕರೆಯಿಸಿ 2 ಲಕ್ಷ ರೂಪಾಯಿ ಠೇವಣಿ ಇಟ್ಟು, ಇಹಲೋಕ ತ್ಯಜಿಸಿದ್ದರು. ನಂತರ ತನ್ನ ತಿಥಿ ಮಾಡದೆ ತನ್ನಂತೆಯೇ ಪ್ರತಿ ವರ್ಷ ಗಾಂಧಿ ಜಯಂತಿ ಆಚರಿಸಬೇಕು ಎಂದು ಹೇಳಿ ಮರಣ ಹೊಂದಿದ್ದರು. ಗಾಂಧಿ ಬಸಪ್ಪನವರ ಮಕ್ಕಳು ತಮ್ಮ ತಂದೆಯ ಹಣದ ಜೊತೆಗೆ ತಾವೂ ಸಹ ಹಣ ಸೇರಿಸಿ ಠೇವಣಿ ಇಟ್ಟು ಗಾಂಧಿ ಜಯಂತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಗಾಂಧಿ ಬಸಪ್ಪ
ಗಾಂಧಿ ಬಸಪ್ಪ (ETV Bharat)

ಗಾಂಧಿ ಬಸಪ್ಪನವರ ಪುತ್ರ ಅಶೋಕ ಕುಮಾರ್ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, "ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಜನರಲ್ಲಿ ರಾಷ್ಟ್ರೀಯತೆಯ ಮನೋಭಾವವಿತ್ತು.‌ ಆಗ ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಕೊಡಸಬೇಕೆಂಬ ಕಿಚ್ಚಿತ್ತು. ನಮ್ಮ ತಂದೆ ಗಾಂಧಿ ಬಸಪ್ಪನವರಿಗೆ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾದ ನಾಗಪ್ಪ ಶ್ರೇಷ್ಠಿಗಳು ಹಾಗೂ ದಿನಕರ, ಗಿರಿಮಾಜಿ ರಾಜಗೋಪಾಲ್ ಅವರು ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಒಡನಾಟವಿತ್ತು" ಎಂದರು.

ಗಾಂಧೀವಾದಿಯಾಗಿ ಬೆಳೆದ ಬಸಪ್ಪ: "ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಬಿಡಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಪ್ರಭಾತಪೇರಿ ಹೊರಟು ಸ್ವಾತಂತ್ರ್ಯದ ಕಿಚ್ಚನ್ನು ಎಲ್ಲರಲ್ಲೂ ಹರಡುತ್ತಿದ್ದರು. ಆಗ ನಮ್ಮ ತಂದೆ ಗಾಂಧೀಜಿ ಅವರ ಪ್ರಭಾವಕ್ಕೊಳಗಾಗಿ ಗಾಂಧೀವಾದಿ ಆಗುತ್ತಾರೆ. ಸ್ವತಃ ಚರಕದಲ್ಲಿ ನೂಲು ನೇಯುವುದು, ಗಾಂಧಿ ವಿಚಾರಧಾರೆಯನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಾರೆ. ಅಸಹಕಾರ, ದೇಶ ಬಿಟ್ಟು ತೂಲಗಿ, ಉಪ್ಪಿನ‌ ಸತ್ಯಾಗ್ರಹದಲ್ಲಿ ಭಾಗಿಯಾಗಿ ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಜೈಲು ವಾಸ ಅನುಭವಿಸುತ್ತಾರೆ" ಎಂದು ಸ್ಮರಿಸಿದರು.

ದ ರಾ ಬೇಂದ್ರೆ  ಅವರೊಂದಿಗೆ ಗಾಂಧಿ ಬಸಪ್ಪ
ದ.ರಾ.ಬೇಂದ್ರೆ ಅವರೊಂದಿಗೆ ಗಾಂಧಿ ಬಸಪ್ಪ (ETV Bharat)

ಗಾಂಧಿ ಬಸಪ್ಪನವರ ಮತ್ತೊಬ್ಬ ಪುತ್ರ ಸತೀಶ್ ಮಾತನಾಡಿ, "ಮಹಾತ್ಮ ಗಾಂಧಿಜಿಯವರು ಸ್ವಾತಂತ್ರ್ಯಕ್ಕಾಗಿ ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದ ನಂತರ ನಮ್ಮ ತಂದೆ ಅವರ ಮಾತಿನ ಪ್ರಭಾವಕ್ಕೊಳಗಾಗಿ ಹೋರಾಟಕ್ಕೆ ಧುಮುಕಿದ್ದರು. ನಂತರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಆಗ ಜೈಲುವಾಸವನ್ನೂ ಅನುಭವಿಸಿದ್ದರು. ಗಾಂಧೀಜಿ ಹತ್ಯೆಯ ನಂತರ ನಮ್ಮ ತಂದೆ ತುಂಬ ಚಿಂತೆಗೀಡಾಗಿದ್ದರು. ಗಾಂಧೀಜಿ ಅವರ ತತ್ವ, ಸಿದ್ಧಾಂತವನ್ನು ಹರಡಬೇಕೆಂದು ತೀರ್ಮಾನಿಸಿ, ಗಾಂಧಿ ಜಯಂತಿಯಂದು ಅವರ ತತ್ವ ಹಾಗೂ ಚಿಂತನೆಯನ್ನು ಜನರಿಗೆ ತಿಳಿಸತೊಡಗಿದರು" ಎಂದು ನೆನೆದರು.

"ನಮ್ಮ ಮನೆಗೆ ವಂದೇ ಮಾತರಂ ಎಂದು ಹೆಸರಿಟ್ಟರು. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಿ, ಸ್ವಾತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದರು. ತಂದೆಯವರು 1999ರಲ್ಲಿ ನಿಧನರಾದರು. ಅದಕ್ಕೂ ಮುಂಚೆ ನಮ್ಮ ಕುಟುಂಬಸ್ಥರೆಲ್ಲರನ್ನು ಕರೆಸಿ ಪ್ರತಿ ವರ್ಷ ನನ್ನ ತಿಥಿ ಆಚರಿಸದೇ ಮಹಾತ್ಮ ಗಾಂಧೀಜಿಯ ಜನ್ಮ ದಿನವನ್ನು ಆಚರಿಸಬೇಕೆಂದು ತಿಳಿಸಿದರು. ಅಂದಿನಿಂದ ನಮ್ಮ ಸಹೋದರರೆಲ್ಲರೂ ಸೇರಿ ಗಾಂಧಿ ಜಯಂತಿ ಆಚರಣೆ ಹಾಗೂ ಗಾಂಧೀಜಿ ಅವರ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.

ಗಾಂಧಿ ಬಸಪ್ಪ
ಗಾಂಧಿ ಬಸಪ್ಪ (ETV Bharat)

ಸ್ಥಳೀಯರಾದ ಉಲ್ಲಾಸ್ ಮಾತನಾಡಿ, "ಗಾಂಧಿ ಬಸಪ್ಪನವರ ಕುಟುಂಬದವರು ಪ್ರತಿ ವರ್ಷ ಗಾಂಧಿ ಜಯಂತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರ ಆಚಾರ, ವಿಚಾರವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಗಾಂಧಿ ತತ್ವ, ಸಿದ್ಧಾಂತ ಇಂದಿಗೂ ಪ್ರಸ್ತುತ. ನಮ್ಮಂತಹ ಯುವ ಪಿಳಿಗೆಗೆ ಅವರ ತತ್ವ ಮಾರ್ಗದರ್ಶನವಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗ: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ, ಅಧಿಕಾರಿಗಳಿಂದ ದಾಳಿ - Chinese Garlic

ETV Bharat Logo

Copyright © 2024 Ushodaya Enterprises Pvt. Ltd., All Rights Reserved.