ETV Bharat / state

ಕೆ.ಎಸ್‌.ಈಶ್ವರಪ್ಪ ಬಳಿ ಆಸ್ತಿ ಎಷ್ಟಿದೆ? ಸಂಪೂರ್ಣ ವಿವರ - K S Eshwarappa Asset

ಕೆ.ಎಸ್.ಈಶ್ವರಪ್ಪನವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ.

author img

By ETV Bharat Karnataka Team

Published : Apr 12, 2024, 8:40 PM IST

Etv Bharat
Etv Bharat

ಶಿವಮೊಗ್ಗ: ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್​.ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದರು.

ಪತ್ನಿ ಜಯಲಕ್ಷ್ಮೀ ಅವರಿಗೆ 15 ಲಕ್ಷ ರೂ ಸಾಲ ನೀಡಿರುವುದು, ಇಬ್ಬರ ಹೆಸರಲ್ಲೂ ಸ್ವಂತ ವಾಹನ ಇಲ್ಲದಿರುವುದು, ತಮ್ಮ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗದಿರುವ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಈಶ್ವರಪ್ಪ ಬಳಿ 25 ಲಕ್ಷ ರೂ., ಪತ್ನಿ ಜಯಲಕ್ಷ್ಮೀ ಬಳಿ 2 ಲಕ್ಷ ರೂ ನಗದು ಇದೆ. ಕೆಎಸ್‌ಸಿಎ ಬ್ಯಾಂಕ್‌ನ ಶಾಸಕರ ಭವನ ಶಾಖೆಯಲ್ಲಿ ಈಶ್ವರಪ್ಪ ಹೆಸರಿನಲ್ಲಿ ಎರಡು ಖಾತೆಗಳಿವೆ. ಒಂದರಲ್ಲಿ 1.38 ಲಕ್ಷ ರೂ., ಮತ್ತೊಂದು ಖಾತೆಯಲ್ಲಿ 1,699 ರೂ. ಠೇವಣಿ ಇದೆ. ಬ್ಯಾಂಕ್‌ ಆಫ್‌ ಬರೋಡಾದ ಶಿವಮೊಗ್ಗ ಶಾಖೆಯಲ್ಲಿ ಎರಡು ಖಾತೆ ಇದೆ. ಒಂದರಲ್ಲಿ 5.45 ಲಕ್ಷ ರೂ. ಮತ್ತೊಂದರಲ್ಲಿ 1 ಲಕ್ಷ ರೂ. ಹಣ ಇದೆ. ಪತ್ನಿ ಜಯಲಕ್ಷ್ಮೀ ಹೆಸರಿನಲ್ಲಿ ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಖಾತೆ ಇದ್ದು, 77 ಸಾವಿರ ರೂ. ಇದೆ.

ವಿವಿಧ ಸಂಸ್ಥೆಗಳಲ್ಲಿ ಈಶ್ವರಪ್ಪ ಹೂಡಿಕೆ: ಈಶ್ವರಪ್ಪ ಬೆಂಗಳೂರಿನ ವಿಶ್ವ ವಿನಾಯಕ ಬಿಲ್ಡ್‌ ಟೆಕ್‌ನಲ್ಲಿ 9 ಲಕ್ಷ ರೂ, ಪ್ರೊಫೆಷನಲ್‌ ಗ್ಲೋಬಲ್‌ ಇನ್‌ಫ್ರಾನಲ್ಲಿ 40 ಲಕ್ಷ ರೂ., ಪಾಲುದಾರಿಕೆ ಸಂಸ್ಥೆ ಮೈಸೂರಿನ ವರ್ಸೋಕೆಮ್‌ನಲ್ಲಿ 1.50 ಲಕ್ಷ ರೂ, ಶಿವಮೊಗ್ಗದ ಉಡುಪು ಫ್ಯಾಷನ್ಸ್​ನಲ್ಲಿ 20 ಲಕ್ಷ ರೂ, ಶಿವಮೊಗ್ಗದ ಮಾರಿಕಾಂಬ ಮೈಕ್ರೋ ಫೈನಾನ್ಸ್‌ನಲ್ಲಿ 15 ಲಕ್ಷ ರೂ, ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘದಲ್ಲಿ 50 ಸಾವಿರ ರೂ, ಬೆಂಗಳೂರಿನ ರೆಟ್ರಾ ಲೈಫ್‌ ಸೈನ್ಸಸ್‌ನಲ್ಲಿ 9 ಲಕ್ಷ ರೂ, ಶಿವಮೊಗ್ಗದ ಮೆಟ್ರೋ ಹೆಲ್ತ್‌ ಕೇರ್‌ನಲ್ಲಿ 55 ಲಕ್ಷ ರೂ ಹಾಗೂ ಆರ್‌ 3 ಎಸ್‌ ಬಿಸ್ನೆಸ್‌ ಪಾರ್ಕ್‌ನಲ್ಲಿ 10 ಲಕ್ಷ ರೂ, ಸತ್ಯಧರ್ಮ ಪ್ರಕಾಶನದಲ್ಲಿ 1.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಪತ್ನಿ ಜಯಲಕ್ಷ್ಮೀ ಪಾಲುದಾರರಾಗಿರುವ ಜಾಮ್‌ ಪೈಪ್ಸ್‌ನಲ್ಲಿ 44.42 ಲಕ್ಷ ರೂ ಪಾಲುದಾರಿಕೆ ಮಾಡಿಕೊಂಡಿದ್ದಾರೆ.

ಪತ್ನಿಗೆ ಸಾಲ ನೀಡಿದ ಈಶ್ವರಪ್ಪ: ತಮ್ಮ ಪತ್ನಿ ಜಯಲಕ್ಷ್ಮೀ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಈಶ್ವರಪ್ಪ ಸಾಲ ನೀಡಿದ್ದಾರೆ. ಬೆಂಗಳೂರಿನ ಭಾರತ್‌ ಇಂಡಸ್ಟ್ರೀಸ್‌ಗೆ 65.15 ಲಕ್ಷ ರೂ, ಶಿವಮೊಗ್ಗದ ಮಾಚೇನಹಳ್ಳಿಯ ಜಯಲಕ್ಷ್ಮಿ ಫ್ಯೂಯಲ್ಸ್‌ಗೆ 16.50 ಲಕ್ಷ ರೂ ಸಾಲ ನೀಡಿದ್ದಾರೆ. ಮಲ್ಲೇಶ್ವರ ಎಂಟರ್‌ಪ್ರೈಸೆಸ್‌ನಲ್ಲಿ 1.84 ಲಕ್ಷ ರೂಗಳನ್ನು ಹಾಗೂ ಪತ್ನಿ ಜಯಲಕ್ಷ್ಮಿ ಅವರಿಗೆ 15.78 ಲಕ್ಷ ರೂ. ಸಾಲ ನೀಡಿದ್ದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈಶ್ವರಪ್ಪ ಅವರು 5.87 ಕೋಟಿ ರೂ. ಸಾಲ ಮಾಡಿರುವುದಾಗಿ ತೋರಿಸಿಕೊಂಡಿದ್ದಾರೆ. ಅಲ್ಲದೆ, ಪತ್ನಿ ಜಯಲಕ್ಷ್ಮೀ ಅವರಿಗೆ 70.80 ಲಕ್ಷ ರೂ ಸಾಲವಿದೆ.

ಬಂಗಾರ, ಬೆಳ್ಳಿ: ಈಶ್ವರಪ್ಪ ಬಳಿ 300 ಗ್ರಾಂ ಬಂಗಾರವಿದೆ. 2 ಕೆ.ಜಿ ಬೆಳ್ಳಿ ವಸ್ತುಗಳಿವೆ. ಇದರ ಮೌಲ್ಯ 18.50 ಲಕ್ಷ ರೂಗಳಾಗಿವೆ. ಪತ್ನಿ ಜಯಲಕ್ಷ್ಮೀ ಅವರ ಬಳಿ 500 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ವಸ್ತುಗಳಿವೆ. ಇದರ ಮೌಲ್ಯ 30 ಲಕ್ಷ ರೂ ಆಗಿದೆ.

ಇದನ್ನೂ ಓದಿ: ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಎದುರಾಳಿಗಳಿಗೆ ತಿರುಗೇಟು - Eshwarappa Nomination

ಚರಾಸ್ತಿ, ಸ್ಥಿರಾಸ್ತಿಗಳ ಒಟ್ಟು ಮೌಲ್ಯ: ಈಶ್ವರಪ್ಪ ಅವರ ಬಳಿ ಒಟ್ಟು 22.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಆಸ್ತಿ ಇದೆ. ಪತ್ನಿ ಜಯಲಕ್ಷ್ಮೀ ಹೆಸರಲ್ಲಿ 3.10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಈಶ್ವರಪ್ಪ ಅವರ ಹೆಸರಿನಲ್ಲಿ ನಿದಿಗೆ ಗ್ರಾಮದಲ್ಲಿ 1.31 ಎಕರೆ, ಊರಗಡೂರಿನಲ್ಲಿ 1.05 ಎಕರೆ, ಸೋಮಯ್ಯ ಲೇಔಟ್‌ನಲ್ಲಿ ಪತ್ನಿ ಜಯಲಕ್ಷ್ಮೀ ಅವರೊಂದಿಗೆ ಜಂಟಿ ಖಾತೆಯಲ್ಲಿ 3880 ಚದರ ಅಡಿ ಕೃಷಿಯೇತರ ಭೂಮಿ ಇದೆ. ಮಾಚೇನಹಳ್ಳಿಯಲ್ಲಿ 4.24 ಎಕರೆ ಕೃಷಿಯೇತರ ಭೂಮಿಯನ್ನು ಪುತ್ರ ಕಾಂತೇಶ್‌ ಜೊತೆ ಜಂಟಿ ಖಾತೆ ಹೊಂದಿದ್ದಾರೆ. ಶಿವಮೊಗ್ಗ ನಗರದ ಬಿ.ಹೆಚ್‌.ರಸ್ತೆಯಲ್ಲಿ 11,926 ಚದರ ಅಡಿಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ (ಪುತ್ರ ಕಾಂತೇಶ್‌ ಜೊತೆ ಜಂಟಿ ಖಾತೆ). ಬೆಂಗಳೂರು ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿ 30x40 ಅಡಿಯಲ್ಲಿ ವಾಣಿಜ್ಯ ಕಟ್ಟಡ, ಬೆಂಗಳೂರಿನ ಕುಮಾರ ಪಾರ್ಕ್‌ನಲ್ಲಿ 5700 ಚದರ ಅಡಿಯಲ್ಲಿ ವಾಣಿಜ್ಯ ಕಟ್ಟಡವಿದೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿ ಪತ್ನಿ ಜಯಲಕ್ಷ್ಮೀ ಅವರೊಂದಿಗೆ ಜಂಟಿ ಖಾತೆಯೊಂದಿಗೆ 4500 ಚದರ ಅಡಿಯ ವಸತಿ ಕಟ್ಟಡವನ್ನು ಹೊಂದಿದ್ದಾರೆ.

ಈಶ್ವರಪ್ಪ ಬಳಿ ಇರುವ ಚರಾಸ್ತಿಯ ಒಟ್ಟು ಮೌಲ್ಯ 4.28 ಕೋಟಿ ರೂ ಆಗಿದ್ದರೆ, ಪತ್ನಿ ಜಯಲಕ್ಷ್ಮೀ ಅವರ ಬಳಿ 3.77 ಕೋಟಿ ರೂ. ಇದೆ. ಇನ್ನು, ಸ್ಥಿರಾಸ್ತಿಗಳ ಪೈಕಿ, ಈಶ್ವರಪ್ಪ ಸ್ವಯಾರ್ಜಿತ ಆಸ್ತಿ ಮೌಲ್ಯ 10.95 ಕೋಟಿ ರೂ ಆಗಿದೆ. ಈಶ್ವರಪ್ಪನವರು ಪಿತ್ರಾರ್ಜಿತವಾಗಿ 1.60 ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವರ ಪತ್ನಿ ಜಯಲಕ್ಷ್ಮೀ ಅವರ ಹೆಸರಿನಲ್ಲಿರುವ ಸ್ವಯಾರ್ಜಿತ ಆಸ್ತಿ 7.31 ಕೋಟಿ ರೂ ಮೌಲ್ಯವನ್ನು ಹೊಂದಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಂಡಾಯ ಅಭ್ಯರ್ಥಿ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವುದೇ ಬಿಜೆಪಿ?: 22ರವರೆಗೆ ಕಾದುನೋಡಲು ನಿರ್ಧಾರ? - K S Eshwarappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.