ETV Bharat / state

ಶಿರೂರು ಗುಡ್ಡ ಕುಸಿತ; ಇನ್ನೂ ಸಿಗದ ಮೂವರ ಸುಳಿವು - ಇಂದಿನಿಂದ ಫ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ - Shiruru Hill Collapse Case - SHIRURU HILL COLLAPSE CASE

ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ನಾಪತ್ತೆಯಾದ ಮೂವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಗುಡ್ಡದ ಬಳಿ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತದೆ ಎಂದು ಸುದ್ದಿ ಹರಡಲಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಬಂದ್ ಮಾಡಲ್ಲ ಎಂದು ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.

ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಕಾರ್ಯಾಚರಣೆ
ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಕಾರ್ಯಾಚರಣೆ (ETV Bharat)
author img

By ETV Bharat Karnataka Team

Published : Jul 27, 2024, 8:22 AM IST

Updated : Jul 27, 2024, 9:01 AM IST

ಶಿರೂರು ಗುಡ್ಡ ಕುಸಿತ ಪ್ರಕರಣ (ETV Bharat)

ಕಾರವಾರ (ಉತ್ತರ ಕನ್ನಡ): ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರದೇಶದ ನದಿ ದಡದಲ್ಲಿಯೂ ಬಹುತೇಕ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ನಾಪತ್ತೆಯಾದ ಮೂವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇದರ ನಡುವೆ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಕಾರ್ಯಾಚರಣೆ ಅಡ್ಡಿಯಾಗಿದ್ದು, ಶನಿವಾರ ಗೋವಾದಿಂದ ಆಗಮಿಸಲಿರುವ ಫ್ಲೋಟಿಂಗ್ ಪ್ಲಾಟ್‌ಫಾರಂನೊಂದಿಗೆ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಲಾಗಿದೆ.

ಶಿರೂರು ಗುಡ್ಡ ಕುಸಿತದಿಂದಾಗಿ ನಾಪತ್ತೆಯಾಗಿರುವವರಿಗಾಗಿ 11ನೇ ದಿನದ ಕಾರ್ಯಾಚರಣೆ ಅಂತ್ಯವಾಗಿದೆ. ಗಂಗಾವಳಿ ನದಿ ಹಾಗೂ ನದಿ ದಂಡೆಯಲ್ಲಿ ಜೆಸಿಬಿ ಹಾಗೂ ಲಾಂಗ್ ಆರ್ಮ್ ಬೂಮರ್ ಮೂಲಕ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ನದಿ ದಂಡೆಯ ಬಳಿ ಕಾರ್ಯಾಚರಣೆ ವೇಳೆ ಹೋಟೆಲ್‌ನ ಕೆಲ ಪಾತ್ರೆಗಳು, ನದಿ ದಂಡೆಯ ಮೇಲಿದ್ದ ಮರದ ತುಂಡುಗಳು ಪತ್ತೆಯಾಗಿದೆ. ಉಳಿದಂತೆ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಸುರಕ್ಷತೆ ಖಚಿತಗೊಂಡ ಬಳಿಕ ಸಂಚಾರಕ್ಕೆ ಅವಕಾಶ - ಡಿಸಿ: ಕಾರ್ಯಾಚರಣೆ ಬಗ್ಗೆ ವಿವರಿಸಿರುವ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಮಳೆಯಿಂದಾಗಿ ನದಿಯಲ್ಲಿ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಮೂಲಕ ನಡೆಯಬೇಕಿದ್ದ ಸ್ಕ್ಯಾನಿಂಗ್ ಶುಕ್ರವಾರ ಮಧ್ಯಾಹ್ನ ಪೂರ್ಣಗೊಂಡಿದೆ. ನದಿಯಲ್ಲಿ ಹುಡುಕಬೇಕಾದ ಜಾಗ ಗುರುತಿಸಲಾಗಿದೆ. ಆದರೆ, ಇದೀಗ ನದಿಯಲ್ಲಿ ಡೈವಿಂಗ್ ಮಾಡಿಯೇ ಪರಿಶೀಲಿಸಬೇಕಿದೆ. ಸದ್ಯ ನದಿಯ ಹರಿವಿನ ವೇಗ 6 ನಾಟ್ಸ್ ಇದೆ. ಪ್ರತಿ ಎರಡು ಮೂರು ಗಂಟೆಗೊಮ್ಮೆ ನೌಕಾನೆಲೆಯವರು ಪರಿಶೀಲನೆ ನಡೆಸುತ್ತಿದ್ದು, ಶಾಸಕರ ಸೂಚನೆಯಂತೆ ಫ್ಲೋಟಿಂಗ್ ಪ್ಲಾಟ್‌ಫಾರಂ ತಂದು ಶನಿವಾರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಗುಡ್ಡಕುಸಿದ ಸ್ಥಳದಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧ್ಯಯನ ನಡೆಸಿದೆ. ಈ ಪ್ರದೇಶದಲ್ಲಿ ಮತ್ತೆ ಅವಘಡಗಳು ಆಗದಂತೆ ಮತ್ತು ಸಂಚಾರಕ್ಕೆ ಅನುವು ಮಾಡಿಕೊಡಲು ಕೆಲ ಅಗತ್ಯ ಕ್ರಮಕ್ಕೆ ಸೂಚಿಸಿದ್ದು, ಅದರಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಳಿಕ ಹೆದ್ದಾರಿಯಲ್ಲಿ ಸಂಚಾರ ಸುರಕ್ಷಿತ ಎಂದು ಖಚಿತಗೊಂಡ ಬಳಿಕ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಕಾರ್ಯಾಚರಣೆ ಬಂದ್ ಮಾಡಲ್ಲ - ಸೈಲ್: ಗುಡ್ಡದ ಬಳಿ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತದೆ ಎಂದು ಸುದ್ದಿ ಹರಡಲಾಗುತ್ತದೆ. ಆದರೆ, ಕಾರ್ಯಾಚರಣೆ ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ಹೆದ್ದಾರಿ ಹಾಗೂ ನದಿ ದಂಡೆಯ ಮೇಲೆ ಬಹುತೇಕ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಇನ್ಮುಂದೆ ಕೇವಲ ನದಿಯಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಶಾಸಕ ಸತೀಶ್ ಸೈಲ್ ಸ್ಪಷ್ಪಪಡಿಸಿದರು.

ಗುಡ್ಡ ಕುಸಿತದಲ್ಲಿ ಇನ್ನೂ ಮೂರು ಜನ ಕಣ್ಮರೆಯಾಗಿದ್ದಾರೆ. ಮೃತರಿಗೆ ತಾರತಮ್ಯ ಮಾಡದೇ ಪ್ರತಿಯೊಬ್ಬರಿಗೆ 5 ಲಕ್ಷದಂತೆ ಪರಿಹಾರ ನೀಡಲಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ನದಿಯ ವೇಗ ಹೆಚ್ಚಿದ್ದಾಗ ಪ್ರಯತ್ನ ಮಾಡಿದರೆ ಇನ್ನೊಬ್ಬರ ಜೀವಕ್ಕೆ ಅಪಾಯವಾಗಬಹುದು. ಹೀಗಾಗಿ ಫ್ಲೋಟಿಂಗ್ ಪ್ಲಾಟ್‌ಫಾರಂ ಅನ್ನು ತರಿಸಲಾಗುತ್ತಿದೆ. ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತೋರಿಸಿದ ಸ್ಥಳದಲ್ಲಿ ಪ್ಲಾಟ್‌ಫಾರಂ ಬಳಸುತ್ತೇವೆ. ಸ್ಥಳೀಯ ಮೀನುಗಾರರಿಂದಲೂ ನದಿಯ ಕುರಿತು ಮಾಹಿತಿ ಪಡೆಯುತ್ತಿದ್ದೇವೆ ಎಂದು ವಿವರಿಸಿದರು.

ಸಂಸತ್ತಿನ ಅಧಿವೇಶನದಲ್ಲಿ ಗುಡ್ಡಕುಸಿತ ಸ್ಥಳದಲ್ಲಿ ಸ್ಥಳೀಯ ಆಡಳಿತ ಕೆಲಸವನ್ನೇ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದ ಬಹಳ ಬೇಸರವಾಗಿದೆ. ಕಳೆದ 11 ದಿನಗಳಿಂದ ನಿರಂತರವಾಗಿ ಇಲ್ಲೇ ಇದ್ದೇವೆ. ಎಲ್ಲ ಇಲಾಖೆಗಳು ಸ್ಥಳದಲ್ಲಿದ್ದು ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇರಳ ಕರ್ನಾಟಕದ ಗಡಿರಾಜ್ಯ, ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಸುಮ್ಮನೆ ಏನೂ ಮಾಡಲಾಗುವುದಿಲ್ಲ. ನದಿಯ ಹರಿವನ್ನು ಆಧರಿಸಿ ಕೆಲಸ ಮಾಡಬೇಕಾಗಿದೆ ಎಂದರು.

ಹೆದ್ದಾರಿ ಬಂದ್‌ನಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಪೂರ್ಣ ಬಂದ್ ಮಾಡಲ್ಲ. ಸ್ವಲ್ಪ-ಸ್ವಲ್ಪ ವಾಹನಗಳನ್ನು ಬಿಡುವ ವ್ಯವಸ್ಥೆ ಮಾಡುತ್ತೇವೆ. ಹೆದ್ದಾರಿ ಪ್ರಾಧಿಕಾರದ ವರದಿ ಬಂದ ಬಳಿಕ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ಮಾಡಿ ನಿರ್ಧರಿಸುತ್ತೇವೆ ಎಂದು ಸೈಲ್ ಹೇಳಿದರು.

ನಮ್ಮವರ ಜೀವಕ್ಕೆ ಬೆಲೆಯೇ ಇಲ್ಲವೇ?: ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಜಗನ್ನಾಥ್ ಹಾಗೂ ಲೊಕೇಶ್ ಎಂಬುವರು ಇನ್ನೂ ಪತ್ತೆಯಾಗಿಲ್ಲ. ಆದರೆ 11 ದಿನ ಕಳೆದರೂ ಪೊಲೀಸರು, ಜಿಲ್ಲಾಡಳಿತ ನಮ್ಮವರ ಜೀವಕ್ಕೆ ಬೆಲೆ ಕೊಡುತ್ತಿಲ್ಲ. ಪ್ರತಿದಿನ ಕೇರಳದ ಲಾರಿ ಮೇಲಕ್ಕೆ ಎತ್ತುವ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಆದರೆ, ಜಗನ್ನಾಥ್, ಲೊಕೇಶ್ ದೇಹ ಎಲ್ಲಿ ಇರಬಹುದು ಎಂದು ಯಾರೂ ಚಿಂತನೆ ಮಾಡುತ್ತಿಲ್ಲ ಎಂದು ಸ್ಥಳೀಯರಾದ ಪುರುಷೋತ್ತಮ ನಾಯ್ಕ ದೂರಿದರು.

ಕೆರಳದ ಸಚಿವ ರಯಾಜ್ ಸ್ಥಳಕ್ಕೆ ಭೇಟಿ: ಕೇರಳ ಲೋಕೋಪಯೋಗಿ ಸಚಿವ ರಿಯಾಜ್ ಅಹ್ಮದ್ ಘಟನಾ ಸ್ಥಳಕ್ಕೆ ಭೇಟಿ, ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ದೆಹಲಿಯಿಂದ ಬಂದ ತಜ್ಞರ ತಂಡದಿಂದ ಲಾರಿ ಇರಬಹುದಾಗಿರುವ ಸ್ಥಳಗಳ ಬಗ್ಗೆ ಮುಂದಿನ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚರ್ಚಿಸಿದರು. ಬಳಿಕ ಘಟನೆಯಲ್ಲಿ ಮೃತಪಟ್ಟ ಗ್ಯಾಸ್ ಟ್ಯಾಂಕರ್ ಚಾಲಕ ಶರವಣ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಲಾಯಿತು. ಈ ವೇಳೆ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಇದ್ದರು.

ಕಡಿಮೆಯಾದ ಮಳೆ ಜೋರಾದ ಗಾಳಿ: ಜಿಲ್ಲೆಯಲ್ಲಿ ಶುಕ್ರವಾರ ಮಳೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಕಳೆದ ಎರಡು ದಿನಗಳಿಂದ ಗಾಳಿ ಜೋರಾಗಿದ್ದು ವಿವಿಧೆಡೆ ಮನೆ, ರಸ್ತೆ, ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಬಿದ್ದು ಭಾರಿ ಹಾನಿಯಾಗಿದೆ. ಶಿರಸಿ-ಸಿದ್ದಾಪುರದಲ್ಲಿಯೂ ವ್ಯಾಪಕವಾದ ಗಾಳಿ ಮಳೆಗೆ ಹಲವು ಮರಗಳು ಧರೆಗೆ ಉರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 1 ಮನೆ ಸಂಪೂರ್ಣ ಹಾನಿ, 3 ಮನೆಗಳಿಗೆ ತೀವ್ರ ಹಾನಿ, 49 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2, ಕುಮಟಾ ಮತ್ತು ಅಂಕೋಲಾದ ತಲಾ 1 ಸೇರಿದಂತೆ ಒಟ್ಟು 4 ಕಾಳಜಿ ಕೇಂದ್ರಗಳಲ್ಲಿ 205 ಮಂದಿ ಆಶ್ರಯ ಪಡೆದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಕಣ್ಮರೆಯಾದವರಿಗೆ ಅಡ್ವಾನ್ಸ್ಡ್​ ಡ್ರೋನ್, ಹೆಲಿಕಾಪ್ಟರ್ ಮೂಲಕ ಶೋಧ - Operation for missing

Last Updated : Jul 27, 2024, 9:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.