ETV Bharat / state

ಗಾಯತ್ರಿ ಸಿದ್ದೇಶ್ವರ್​ ವಿರುದ್ಧದ ಹೇಳಿಕೆಗೆ ಶಾಮನೂರು ಕ್ಷಮೆ ಯಾಚಿಸಬೇಕು : ಮಾಳವಿಕಾ ಅವಿನಾಶ್ - Shamanur Shivashankarappa - SHAMANUR SHIVASHANKARAPPA

ಶಾಮನೂರು ಶಿವಶಂಕರಪ್ಪ ಅವರು ‘ಮಹಿಳೆಯರು ಮನೆಯಲ್ಲಿರಲು ಮಾತ್ರ ಲಾಯಕ್ಕು’ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅತ್ಯಂತ ವಿಷಾದನೀಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಅವರು ತಿಳಿಸಿದ್ದಾರೆ.

Malavika Avinash
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್
author img

By ETV Bharat Karnataka Team

Published : Mar 29, 2024, 8:11 PM IST

ಬೆಂಗಳೂರು : ಶಾಮನೂರು ಶಿವಶಂಕರಪ್ಪ, ಸುಪ್ರಿಯಾ ಶ್ರೀನಾತೆ ಅವರ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಯನ್ನು ಅಭಿವ್ಯಕ್ತಿಗೊಳಿಸುತ್ತದೆ. ಸೋಲುವ ಹತಾಶೆಯಿಂದ ಗಾಯತ್ರಿ ಸಿದ್ದೇಶ್ವರ ವಿರುದ್ಧ ಹೇಳಿಕೆ ನೀಡಿರುವ ಶಾಮನೂರು ಶಿವಶಂಕರಪ್ಪ ಅವರು ಕೂಡಲೇ ಕ್ಷಮಾಪಣೆ ಕೇಳುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ‘ಮಹಿಳೆಯರು ಮನೆಯಲ್ಲಿರಲು ಮಾತ್ರ ಲಾಯಕ್ಕು’ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅತ್ಯಂತ ವಿಷಾದನೀಯ. ಶಾಮನೂರು ಅವರ ಪಕ್ಷದ ಅಧ್ಯಕ್ಷೆ ಸ್ವತಃ ಒಬ್ಬ ಮಹಿಳೆ. ಹಿಂದೆ ಅವರ ಪಕ್ಷದ ಮಹಿಳೆ ಈ ರಾಷ್ಟ್ರದ ಪ್ರಧಾನಿ ಆಗಿದ್ದರು. ಈಗ ಆ ಪಕ್ಷದಲ್ಲಿ ಪ್ರಿಯಾಂಕಾ ವಾದ್ರಾ ಮತ್ತು ಸೋನಿಯಾ ಗಾಂಧಿಯವರು ಕೆಲಸ ಮಾಡುತ್ತಿದ್ದಾರೆ ಎಂದರು.

ಹೀಗಿರುವಾಗ ಮತ್ತೊಂದು ಪಕ್ಷದ ಅಭ್ಯರ್ಥಿ ಬಗ್ಗೆ ಅಗೌರವದ ಮಾತನಾಡುವುದು ಖಂಡನೀಯ ಎಂದರಲ್ಲದೇ, ಗಾಯತ್ರಿ ಸಿದ್ದೇಶ್ವರ್ ಅವರು, ನಾನು ಅವರ ಜೊತೆ ಪ್ರವಾಸ ಮಾಡಿದಾಗ ಒಂದು ಮಾತು ಹೇಳಿದ್ದರು.‘ಇದುವರೆಗೆ ಮನೆಯ ಆಡಳಿತ-ನಿರ್ವಹಣೆಯನ್ನು ನಾನು ಮಾಡುತ್ತಿದ್ದೆ. ಇನ್ನು ಮುಂದೆ ಕ್ಷೇತ್ರದ ನಿರ್ವಹಣೆ ಮಾಡಲಿದ್ದೇನೆ’ ಎಂದಿದ್ದರು. ಕ್ಷೇತ್ರದ ಜನರೆಲ್ಲರೂ ಒಂದು ಕುಟುಂಬದ ರೀತಿ ಎಂಬಂಥ ಹೇಳಿಕೆ ಇದಾಗಿತ್ತು ಎಂದು ತಿಳಿಸಿದರು.

ಈ ಮಾತುಗಳನ್ನು ಆಡುವ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಆ ಕ್ಷೇತ್ರದ ಜನರು ಮನ್ನಣೆ ನೀಡುವರೆಂಬ ಹಾಗೂ ಜಯಶಾಲಿ ಮಾಡಿ ಲೋಕಸಭೆಗೆ ಕಳಿಸಿಕೊಡುವರೆಂಬ ನಂಬಿಕೆ ಬಿಜೆಪಿಗೆ ಇದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸ್ತ್ರೀಯರನ್ನು ಪ್ರತ್ಯೇಕವಾಗಿ ಗುರುತು ಮಾಡಿಕೊಂಡು ಆರ್ಥಿಕ- ಸಾಮಾಜಿಕವಾಗಿ ಸಶಕ್ತ ಮಾಡಲು ಅನೇಕ ಯೋಜನೆಗಳನ್ನು ಕಳೆದ 10 ವರ್ಷಗಳಲ್ಲಿ ಜಾರಿಗೊಳಿಸಿದ್ದಾರೆ. ಹೆಣ್ಮಕ್ಕಳಿಗೆ ಅನುಕೂಲವಾಗಲಿ ಎಂದು ಮೋದಿ ಜೀ ಅವರು ಜನ್ ಧನ್, ಸ್ವಚ್ಛ ಭಾರತ್ ಮತ್ತಿತರ ನೂರಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಪರಿಶ್ರಮ ಪಡುತ್ತಿದ್ದಾರೆ ಎಂದು ವಿವರಿಸಿದರು.

ರಾಜಕೀಯ ಸಶಕ್ತೀಕರಣಕ್ಕಾಗಿ ನಾರಿ ಶಕ್ತಿ ವಂದನ್ ಕಾಯ್ದೆಯನ್ನು ಜಾರಿಗೊಳಿಸಿ ಶೇ. 33ರಷ್ಟು ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಕಾಂಗ್ರೆಸ್ಸಿನ ಐ.ಟಿ ಸೆಲ್‍ನ ಸುಪ್ರಿಯಾ ಶ್ರೀನಾತೆ ಎಂಬುವವರು ನಮ್ಮ ಪಕ್ಷದ ಇನ್ನೊಬ್ಬ ಅಭ್ಯರ್ಥಿ ಕಂಗನಾ ರಣಾವತ್ ಕುರಿತು ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ಫೇಸ್​ಬುಕ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ದೇಶಾದ್ಯಂತ ವಿರೋಧ ವ್ಯಕ್ತವಾದಾಗ ಅದನ್ನು ನಾನು ಮಾಡಿಲ್ಲ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂದು ಆಕ್ಷೇಪಿಸಿದರು.

ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದೇನು?: ದಾವಣಗೆರೆ ನಗರದ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ನಮ್ಮ ಎದುರಾಳಿ, ಅವರು ಮೊದಲು ದಾವಣಗೆರೆ ಸಮಸ್ಯೆ ಬಗ್ಗೆ ವಿಸ್ತಾರವಾಗಿ ತಿಳಿಯಲಿ, ಅವರಿಗೆ ಮಾತನಾಡಲೂ ಬಾರದು. ಅವರು ಅಡುಗೆ ಮಾಡಲು ಲಾಯಕ್ಕು ಎಂದಿದ್ದರು.

ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ತಿರುಗೇಟು ನೀಡಿದ ಗಾಯತ್ರಿ ಸಿದ್ದೇಶ್ವರ - Shamanur Statement

ETV Bharat Logo

Copyright © 2025 Ushodaya Enterprises Pvt. Ltd., All Rights Reserved.