ETV Bharat / state

ದಾವಣಗೆರೆ: ಮಳೆಗೆ ಮನೆಗಳಿಗೆ ನುಗ್ಗಿದ ಚರಂಡಿ ನೀರು; ದವಸಧಾನ್ಯಗಳು ನೀರುಪಾಲು - RAIN IN DAVANGERE

ದಾವಣಗೆರೆಯಲ್ಲಿ ತಡರಾತ್ರಿ ಮಳೆಗೆ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಸಂಗ್ರಹಿಸಿ ಇಟ್ಟಿದ್ದ ನವಧಾನ್ಯಗಳೆಲ್ಲ ನೀರಲ್ಲಿ ನೆನೆದಿವೆ.

ಮಳೆಗೆ ಮನೆಗಳಿಗೆ ನುಗ್ಗಿದ ಚರಂಡಿ ನೀರು
ಮಳೆಗೆ ಮನೆಗಳಿಗೆ ನುಗ್ಗಿದ ಚರಂಡಿ ನೀರು (ETV Bharat)
author img

By ETV Bharat Karnataka Team

Published : Aug 14, 2024, 11:35 AM IST

ಮನೆಗಳಿಗೆ ನುಗ್ಗುವ ಚರಂಡಿ ನೀರಿನ ಬಗ್ಗೆ ಮಹಿಳೆಯರ ಅಳಲು (ETV Bharat)

ದಾವಣಗೆರೆ: ತಡರಾತ್ರಿ ನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮಳೆ ನೀರು ಮನೆಗಳಿಗೆ ನುಗ್ಗಿ ದವಸಧಾನ್ಯಗಳು ನಾಶವಾಗಿವೆ. ಇಡೀ ರಾತ್ರಿ ಬೇತೂರು ರಸ್ತೆಯಲ್ಲಿರುವ ಪ್ರದೇಶದ ಜನ ನಿದ್ದೆಗೆಟ್ಟು ಮನೆಯೊಳಗಿದ್ದ ನೀರನ್ನು ಹೊರಹಾಕಿದರು.

ಶೇಖರಪ್ಪ ನಗರ ಹಾಗು ಬೇತೂರು ರಸ್ತೆಯ ಕಾಲೋನಿ ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆ ನೀರು ಅಲ್ಲಿರುವ ಮನೆಗಳಿಗೆ ನುಗ್ಗಿದೆ. ಮಳೆ ನೀರನ್ನು ಮೋಟಾರ್​ ಸಹಾಯದಿಂದ ಹೊರಹಾಕಲು ರಾತ್ರಿಯಿಡಿ ಹರಸಾಹಸ ಪಟ್ಟರು. ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಆಯಾಯ ವಾರ್ಡ್​ಗಳ ಪಾಲಿಕೆ ಸದಸ್ಯರು ಆಗಮಿಸಿ ಸಮಸ್ಯೆ ಮಾತ್ರ ಆಲಿಸಿಲ್ಲ ಎಂದು ಹಿಡಿಶಾಪ ಹಾಕುತ್ತಾ ಮನೆ ಮಾಲೀಕರು ಮನೆಗಳನ್ನು ಸ್ವಚ್ಛ ಮಾಡುವಲ್ಲಿ ನಿರತರಾಗಿದ್ದರು.

ಬೇತೂರು ರಸ್ತೆಯ ನಿವಾಸಿ ನೇತ್ರಾವತಿ ಅವರು ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿ, "ರಾತ್ರಿ ಮಳೆ ಆಗಿದ್ದರಿಂದ ಚರಂಡಿಯ ಕೊಳಚೆ ನೀರು ಮನೆಗೆ ನುಗ್ಗಿದೆ. ದವಸ ಧಾನ್ಯಗಳು ನೀರಿನಿಂದ ಜಲಾವೃತ ಆಗಿವೆ. ಮಳೆ ನಸುಕಿನಜಾವ 04 ಗಂಟೆಗೆ ಆರಂಭ ಆಯಿತು, ಚರಂಡಿ ನೀರು ಮನೆಯಲ್ಲಿ ತುಂಬಿಕೊಂಡಿದ್ದರಿಂದ ಸಮಸ್ಯೆ ಆಗಿದೆ. ಪಾಲಿಕೆ ಸದಸ್ಯೆ ಸೌಮ್ಯ ನರೇಂದ್ರ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದು ಅಳಲು ತೋಡಿಕೊಂಡರು.

ಶೇಖರಪ್ಪ ನಗರದ ನಿವಾಸಿ ಪ್ರೇಮ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ನಾಲ್ಕು ಗಂಟೆಗೆ ಮಳೆ ಆರಂಭ ಆಗಿದೆ. ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು. ಮಳೆಯಿಂದ ಚರಂಡಿ ನೀರು ಮನೆಗೆ ನುಗ್ಗಿದೆ. ಜೋಳ, ಬೇಳೆ, ಅಕ್ಕಿ ಎಲ್ಲ ನೀರಿನಿಂದ ನಾಶವಾಗಿದೆ. ತಿನ್ನಲು ಏನೂ ಇಲ್ಲದಂತಾಗಿದೆ‌. ಊಟ ಇಲ್ಲದೆ ಮಕ್ಕಳು ಶಾಲೆಗೆ ಬರೀ ಹೊಟ್ಟೆಯಲ್ಲಿ ಹೋಗಿದ್ದಾರೆ. ಪ್ರತಿ ಬಾರಿ ಮಳೆ ಬಂದರೆ ಇದೇ ಸಮಸ್ಯೆ. ನವಧಾನ್ಯಗಳು ನೆನೆದಿದ್ದು, ಅದು ಉಪಯೋಗಿಸಲು ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸುದೀರ್ಘ ರಜೆ ಹಿನ್ನೆಲೆ ಸಂಚಾರ ದಟ್ಟಣೆ ಸಾಧ್ಯತೆ; ಉದ್ಯೋಗಿಗಳಿಗೆ WFH ನೀಡುವಂತೆ ಟ್ರಾಫಿಕ್ ಜಂಟಿ ಆಯುಕ್ತರ ಪತ್ರ - Traffic Joint Commissioner Letter

ETV Bharat Logo

Copyright © 2024 Ushodaya Enterprises Pvt. Ltd., All Rights Reserved.