ETV Bharat / state

ಅಂಗವಿಕಲರ ಸಬಲೀಕರಣಕ್ಕಾಗಿ ಜಾರಿಯಾದ ಯೋಜನೆಗಳು ಅನುಷ್ಠಾನಗೊಳ್ಳಬೇಕು: ಸಿಜೆಐ ಚಂದ್ರಚೂಡ್​ - CJI Chandrachud advises - CJI CHANDRACHUD ADVISES

''ತಾವು ಒಬ್ಬ ಮುಖ್ಯ ನ್ಯಾಯಮೂರ್ತಿಯ ಬದಲಾಗಿ ಅಂಗವಿಕಲರ ಹೆಣ್ಣು ಮಕ್ಕಳ ತಂದೆಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಂಗವಿಕಲರ ನೋವು ಮತ್ತು ಸವಾಲುಗಳು ಬಗ್ಗೆ ತನಗೆ ಅರಿವಿದೆ. ಜನರು ಅಂಗವಿಕಲರನ್ನು ನೋಡುವ ದೃಷ್ಟಿ ಬದಲಾಗಬೇಕು'' ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ.ಡಿ. ವೈ. ಚಂದ್ರಚೂಡ್ ಸಲಹೆ ನೀಡಿದರು.

CJI Chandrachud  Bengaluru
ಅಂಗವಿಕಲರ ಸಬಲೀಕರಣಕ್ಕಾಗಿ ಜಾರಿಯಾದ ಯೋಜನೆಗಳು ಅನುಷ್ಟಾನಗೊಳ್ಳಬೇಕು: ಸಿಜೆಐ ಚಂದ್ರಚೂಡ್​ (ETV Bharat)
author img

By ETV Bharat Karnataka Team

Published : Jul 27, 2024, 9:50 PM IST

ಬೆಂಗಳೂರು: ''ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರಗಳು ಎಷ್ಟೇ ಕಾನೂನುಗಳನ್ನು ಜಾರಿ ಮಾಡಿದರೂ ಅದನ್ನು ಅನುಷ್ಠಾನಗೊಳಿಸುವುದು ಮುಖ್ಯವಾಗಿರಲಿದೆ'' ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ.ಡಿ. ವೈ. ಚಂದ್ರಚೂಡ್ ತಿಳಿಸಿದ್ದಾರೆ.

ಫಂಕ್ಷನ್ಸ್ ಆಫ್ ಇಂಡಿಯಾ ಆಕ್ಸಿಸ್ ಎಬಿಲಿಟಿ ಸಮ್ಮಿಟ್, ರಾಜ್ಯ ಸರ್ಕಾರ ಮತ್ತು ರಾಮಯ್ಯ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಮಾವೇಶದಲ್ಲಿ ಮಾತನಾಡಿದರು. ''ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲಿದೆ. ಆದರೆ, ಅಧಿಕಾರಿ ವರ್ಗ ಅವುಗಳನ್ನು ಬಲಿಷ್ಠವಾಗಿ ಜಾರಿ ಮಾಡಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಯೋಜನೆ ಇದ್ದರೂ ಅದು ವಿಫಲವಾದಂತಾಗಲಿದೆ'' ಎಂದು ಅಭಿಪ್ರಾಯಪಟ್ಟರು.

''ತಾವು ಒಬ್ಬ ಮುಖ್ಯ ನ್ಯಾಯಮೂರ್ತಿಯ ಬದಲಾಗಿ ಅಂಗವಿಕಲ ಹೆಣ್ಣು ಮಕ್ಕಳ ತಂದೆಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅಂಗವಿಕಲರ ನೋವು ಮತ್ತು ಸವಾಲುಗಳು ಬಗ್ಗೆ ತಮಗೆ ಅರಿವಿದೆ. ಜನರು ಅಂಗವಿಕಲರನ್ನು ನೋಡುವ ದೃಷ್ಟಿ ಬದಲಾಗಬೇಕು'' ಎಂದರು. ''ನಾನು ನನ್ನ ಮಗಳಿಂದ ಸಾಕಷ್ಟು ಕಲಿತಿದ್ದೇನೆ. ಅಂಗವಿಕಲರಿಗೆ ಕೆಲವೊಂದು ಅಂಗ ಮಾತ್ರ ಊನ ಇದ್ದು, ಉಳಿದಂತೆ ಅವರು ಸಹ ಸಾಮಾನ್ಯರಂತೆ ಇರಲು ಬಯಸುತ್ತಾರೆ. ಅವರಿಗೂ ಇತರರಂತೆ ಸಾಧನೆ ಮಾಡಲು ಮುಕ್ತ ಅವಕಾಶವನ್ನು ನಾವು ಕಲ್ಪಿಸಿಕೊಡಬೇಕಾಗುತ್ತದೆ'' ಎಂದು ಅವರು ಇದೇ ವೇಳೆ ವಿವರಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಬಿ.ವಿ. ನಾಗರತ್ನ ಮಾತನಾಡಿ, ''ಜನರಿಗೆ ಅಂಗವಿಕಲ ಜನರ ಬಗ್ಗೆ ಅರಿವು ಮೂಡಬೇಕಿದೆ. ಚಲನಚಿತ್ರಗಳಲ್ಲಿ ಅಂಗವಿಕಲರ ಬಗ್ಗೆ ತೋರಿಸಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಇದೇ ರೀತಿ ಮುಂದುವರೆಯಬೇಕು. ಕಾನೂನು ಸಹ ಅವರ ಪರವಾಗಿ ಕೆಲಸ ಮಾಡಬೇಕಿದೆ'' ಎಂದರು.

ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮಾತನಾಡಿ, ''ನಮ್ಮ ನ್ಯಾಯಾಲಯದಲ್ಲಿ 800 ಅಂಗವಿಕಲ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕೆಲಸ ಮಾಡುವ ವಿಧಾನದ ಬಗ್ಗೆ ತರಬೇತಿ ನೀಡಿದ್ದೇವೆ. ಸಮಾನ ಅವಕಾಶ ಕಲ್ಪಿಸಿಕೊಡಲು ನ್ಯಾಯಾಂಗ ಕೂಡ ಕೆಲಸ ಮಾಡುತ್ತಿದೆ'' ಎಂದು ತಿಳಿಸಿದರು.

ಕೇಂದ್ರ ಅಂಗವಿಕಲ ಮತ್ತು ಸಬಲೀಕರಣ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮಾತನಾಡಿ, ''ಅಂಗವಿಕಲರಿಗಾಗಿ ಮೀಸಲಿಟ್ಟಿರುವ ಯೋಜನೆಗಳನ್ನು ಪಡೆದುಕೊಳ್ಳಲು ಸಾಮಾನ್ಯರು ನಕಲಿ ಅಂಗವಿಕಲ ಪ್ರಮಾಣ ಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಅಂಗವಿಕಲರಿಗೆ ಸಹ ಸಮಾನ ಅವಕಾಶಗಳು ಲಭ್ಯವಾಗುವಂತಾಗಬೇಕು'' ಎಂದರು.

''ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನಾವು ಮಗು ಹುಟ್ಟುವಾಗಲೇ ಅಂಗವಿಕಲತೆ ಯನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ. ಅಲ್ಲದೇ, ಅಂಗವಿಕಲ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ನಾರಾಯಣ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಇದು ಸಹಕಾರಿಯಾಗಿದೆ. ಅಂಗವಿಕಲರಿಗೆ ರಾಜ್ಯ ಸರ್ಕಾರ ಉಚಿತ ಉಪಕರಣಗಳನ್ನು ನೀಡುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕ ಎಂ. ಆರ್. ಆನಂದರಾಮ್ ಇತರರು ಇದ್ದರು.

ಇದನ್ನೂ ಓದಿ: ಹೂವಿನಲ್ಲಿ ಅರಳಲಿದೆ ಅಂಬೇಡ್ಕರ್​ ಜೀವನ ಗಾಥೆ: ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಲಾಲ್​ಬಾಗ್ - Lalbagh ready for fruit flower show

ETV Bharat Logo

Copyright © 2025 Ushodaya Enterprises Pvt. Ltd., All Rights Reserved.